IPL 2021 - ಗ್ಲಾಮರ್‌ ಹರಡುತ್ತಿರುವ ಯುಜ್ವೇಂದ್ರ ಚಾಹಲ್ ಪತ್ನಿ!

First Published | Oct 8, 2021, 6:16 PM IST

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಐಪಿಎಲ್ 2021 ರ ಎರಡನೇ ಹಂತದಲ್ಲಿ ಬುಧವಾರ ನಡೆದ ಕುತೂಹಲಕಾರಿ ಪಂದ್ಯದಲ್ಲಿ ಸೋಲನ್ನು ಅನುಭವಿಸಬೇಕಾಯಿತು. ಸನ್ ರೈಸರ್ಸ್ ಹೈದರಾಬಾದ್ (SRH) ಅದನ್ನು ಕೇವಲ 4 ರನ್‌ಗಳಿಂದ ಸೋಲಿಸಿತು. ಪಂದ್ಯದ ಹೊರತಾಗಿ, ಕ್ರೀಡಾಂಗಣದಲ್ಲಿ ಇನ್ನೂ ಅನೇಕ ಆಸಕ್ತಿದಾಯಕ ಅಂಶಗಳಿದ್ದವು. ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ (Yuzvendra chahal) ಅವರ ಪತ್ನಿ, ಪ್ರತಿ ಪಂದ್ಯದಲ್ಲೂ ತಮ್ಮ ಪತಿ ಮತ್ತು ಅವರ ತಂಡವನ್ನು ಬೆಂಬಲಿಸಲು ಮೈದಾನಕ್ಕೆ ಬರುತ್ತಾರೆ. ಬುಧವಾರವೂ ಅವರು ಅಗಲವಾದ ಲೆಗ್ ಜೀನ್ಸ್ ಮತ್ತು ಟಾಪ್ ಧರಿಸಿದ್ದರು. ಆಗವರು ಸುಂದರವಾಗಿ ಕಾಣುತ್ತಿದ್ದರು. ಧನಶ್ರೀ ವರ್ಮಾ (Dhanashree verma) ಅವರ ಕೆಲವು ಫೋಟೋಗಳು ಇಲ್ಲಿವೆ. (ಫೋಟೋ ಮೂಲ- Instagram) 
 

ಗುರುವಾರ, ಧನಶ್ರೀ ವರ್ಮಾ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಧ್ವಜವನ್ನು ಕೈಯಲ್ಲಿ ಹಿಡಿದು ತಂಡವನ್ನು ಹುರಿದುಂಬಿಸುತ್ತಿರುವುದು ಕಂಡುಬಂದಿದೆ. ಈ ಪಂದ್ಯದಲ್ಲಿ ಆರ್‌ಸಿಬಿ (RCB) ಸೋಲನ್ನು ಎದುರಿಸಬೇಕಾಗಿದ್ದರೂ, ಆಕೆಯ ಪತಿ ಯುಜ್ವೇಂದ್ರ ಚಾಹಲ್ ಅದ್ಭುತ ಬೌಲಿಂಗ್ ಮಾಡಿದರು ಮತ್ತು 4 ಓವರ್‌ಗಳಲ್ಲಿ 27 ರನ್ ನೀಡಿ ಒಂದು ವಿಕೆಟ್ (Wicket) ಪಡೆದರು.

'ನಾವು ಗೆಲ್ಲಲು ಇಷ್ಟಪಡುತ್ತೇವೆ, ನಾವು ನಷ್ಟವನ್ನು ಸಹ ಸಹಿಸುತ್ತೇವೆ, ಆದರೆ ಎಲ್ಲಕ್ಕಿಂತ ಹೆಚ್ಚಾಗಿ ನಾವು ಆಡಲು ಮತ್ತು ಬೆಳೆಯಲು ಇಷ್ಟಪಡುತ್ತೇವೆ' ಎಂದು ಧನಶ್ರೀ  ಫೋಟೋಗಳನ್ನು ಹಂಚಿಕೊಂಡು, ಬರೆದಿದ್ದಾರೆ.  ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ ಮತ್ತು 1 ಗಂಟೆಯೊಳಗೆ  1.5 ಲಕ್ಷಕ್ಕೂ ಹೆಚ್ಚು ಜನರ ಲೈಕ್‌ ಪಡೆದಿದೆ.

Tap to resize

ಈ ಹಿಂದೆ ಅಕ್ಟೋಬರ್ 3 ಪಂಜಾಬ್ ಕಿಂಗ್ಸ್ (Punjab Kinds) ವಿರುದ್ಧದ ಪಂದ್ಯದಲ್ಲಿ ರಂದು, ರಾಯಲ್ ಚಾಲೆಂಜರ್ಸ್ ಬೆಂಗಳೂರು,  6 ರನ್ನುಗಳಿಂದ ಪಂದ್ಯವನ್ನು ಗೆದ್ದಿತು. ಈ ಸಮಯದಲ್ಲಿ ಧನಶ್ರೀ ವರ್ಮಾ ಸ್ಟ್ಯಾಂಡ್‌ನಲ್ಲಿ ಕುಳಿತಿರುವುದು ಕಂಡುಬಂತು. ಅವಳು ನೀಲಿ ಶಾರ್ಟ್‌ ಡ್ರೆಸ್‌ನಲ್ಲಿ ತುಂಬಾ ಕ್ಯೂಟ್‌ ಆಗಿ ಕಾಣುತ್ತಿದ್ದರು.

ಆರ್‌ಸಿಬಿಯ ಪ್ರತಿಯೊಂದು ಪಂದ್ಯದಲ್ಲೂ, ಯುಜ್ವೇಂದ್ರ ಚಾಹಲ್ ಅವರ ಪತ್ನಿ ಕ್ರೀಡಾಂಗಣದಲ್ಲಿ ಕುಳಿತು ತಂಡವನ್ನು ಬೆಂಬಲಿಸುತ್ತಿರುವುದು ಕಂಡುಬರುತ್ತದೆ. ಸೆಪ್ಟೆಂಬರ್ 29 ರಂದು ರಾಜಸ್ಥಾನ ರಾಯಲ್ಸ್ (Rajasthan Royals) ವಿರುದ್ಧದ ಪಂದ್ಯದಲ್ಲಿ ಕೂಡ ಹಾಜರಾದಿದ್ದರು. ಆ ಸಮಯದಲ್ಲಿ ಅವರು ಹಳದಿ ಬಣ್ಣದ ಬೆಲ್ ಬಾಟಮ್ ಪ್ಯಾಂಟ್ ಮತ್ತು ಶರ್ಟ್ ಧರಿಸಿ ಕೂಲ್‌ ಆಗಿ ಕಾಣುತ್ತಿದ್ದರು.

ಸೆಪ್ಟೆಂಬರ್ 26 ರಂದು ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧದ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು 54 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿತು. ಈ ಸಮಯದಲ್ಲಿ, ಧನಶ್ರೀ ವರ್ಮಾ ತಲೆಯ ಮೇಲೆ ಟೋಪಿ ಧರಿಸಿ ಸಣ್ಣ ಸ್ಕರ್ಟ್ ಧರಿಸಿರುವುದು ಕಂಡುಬಂದಿದೆ.

UAEನಲ್ಲಿ ನಡೆದ ಐಪಿಎಲ್ ಸಮಯದಲ್ಲಿ ಸೆಪ್ಟೆಂಬರ್ 27 ರಂದು ಧನಶ್ರೀ ವರ್ಮಾ ಅವರು ತಮ್ಮ ಜನ್ಮ ದಿನವನ್ನು (Birthday ಆಚರಿಸಿದರು. ಈ ಸಮಯದಲ್ಲಿ, ಅವರು ತನ್ನ ಗಂಡನೊಂದಿಗೆ ಭವ್ಯವಾದ ಪಾರ್ಟಿ ಮಾಡಿದ್ದರು. ಅವರ ಹುಟ್ಟುಹಬ್ಬದಂದು, ಪಿಂಕ್‌ ಡ್ರೆಸ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು

Latest Videos

click me!