RCB ತಂಡ ಖರೀದಿ ರೇಸ್‌ನಿಂದ ಮ್ಯಾಂಚೆಸ್ಟರ್‌ ಯುನೈಟೆಡ್‌ ಔಟ್! ಅಂತಿಮ ಹಂತದಲ್ಲಿ ಕನ್ನಡಿಗ ಸೇರಿ ರೇಸ್‌ನಲ್ಲಿವೆ ಈ ಎರಡು ಸಂಸ್ಥೆಗಳು!

Published : Mar 18, 2026, 01:38 PM IST

ನವದೆಹಲಿ: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇದರ ಬೆನ್ನಲ್ಲೇ ಆರ್‌ಸಿಬಿ ಸೇಲ್ ಪ್ರಕ್ರಿಯೆ ಕೂಡಾ ನಿರ್ಣಾಯಕ ಹಂತದಲ್ಲಿದೆ. ಇದೀಗ ಕನ್ನಡಿಗ ಸೇರಿ ಎರಡು ಸಂಸ್ಥೆಗಳು ಆರ್‌ಸಿಬಿ ಖರೀದಿಸುವ ರೇಸ್‌ನಲ್ಲಿ ಉಳಿದುಕೊಂಡಿವೆ. 

PREV
16
ಆರ್‌ಸಿಬಿ ಖರೀದಿ ರೇಸ್‌ನಲ್ಲಿ ಉಳಿದ ಎರಡು ಸಂಸ್ಥೆಗಳು

ಐಪಿಎಲ್‌ನ ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ತಂಡದ ಮಾರಾಟ ಪ್ರಕ್ರಿಯೆ ಈಗ ನಿರ್ಣಾಯಕ ಹಂತ ತಲುಪಿದೆ. ಖರೀದಿ ರೇಸ್‌ನಲ್ಲಿ ಈ ಹಿಂದೆ ಇದ್ದ 9 ಸಂಸ್ಥೆಗಳ ಬದಲು ಈಗ ಕೇವಲ 2 ಸಂಸ್ಥೆಗಳು ಉಳಿದಿವೆ ಎಂದು ವರದಿಯಾಗಿದೆ.

26
ಗ್ಲೇಜರ್‌ ಕುಟುಂಬ ಆರ್‌ಸಿಬಿ ಖರೀದಿಗೆ ಹಿಂದೇಟು

ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಫುಟ್ಬಾಲ್‌ನ ಜನಪ್ರಿಯ ತಂಡವಾದ ಮ್ಯಾಂಚೆಸ್ಟರ್‌ ಯುನೈಟೆಡ್‌ನ ಮಾಲಿಕರಾದ ಗ್ಲೇಜರ್‌ ಕುಟುಂಬ ಆರ್‌ಸಿಬಿ ಖರೀದಿಗೆ ಆಸಕ್ತಿ ತೋರಿತ್ತು. ಆದರೆ ಈ ಸಂಸ್ಥೆ ಈಗ ಬಿಡ್‌ ಪ್ರಕ್ರಿಯೆಯಿಂದ ಹಿಂದಕ್ಕೆ ಸರಿದಿದೆ ಎಂದು ತಿಳಿದುಬಂದಿದೆ.

36
ಬಿಡ್‌ ಪ್ರಕ್ರಿಯೆಯಿಂದ ಹಿಂದೆ ಸರಿದ ಅದಾರ್‌ ಪೂನಾವಾಲಾ

ಈಗಾಗಲೇ ಅದಾರ್‌ ಪೂನಾವಾಲಾ ಕೂಡಾ ಬಿಡ್‌ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದರು. ಹೀಗಾಗಿ ಖರೀದಿ ರೇಸ್‌ನಲ್ಲೀಗ ಸ್ವೀಡಿಷ್ ಖಾಸಗಿ ಇಕ್ವಿಟಿ ಸಂಸ್ಥೆ ಇಕ್ಯೂಟಿ ಗ್ರೂಪ್ ಇದೆ.

46
ಕನ್ನಡಿಗ ರಂಜನ್ ಪೈ

ಜೊತೆಗೆ, ಮಣಿಪಾಲ್‌ ಸಮೂಹದ ಕನ್ನಡಿಗ ರಂಜನ್‌ ಪೈ, ಕೋಹ್ಲ್‌ಬರ್ಗ್‌ ಕ್ರಾವಿಸ್‌ ರೋಬರ್ಟ್ಸ್‌ ಆ್ಯಂಡ್‌ ಕೊ, ಸಿಂಗಾಪುರದ ಹೂಡಿಕೆ ಗ್ರೂಪ್‌ ತೆಮಾಸೆಕ್‌ ಸಂಸ್ಥೆಗಳಿವೆ ಎಂದು ಹೇಳಲಾಗುತ್ತಿದೆ.

56
₹18479 ಕೋಟಿಗೆ ಬಿಡ್‌?:

ಮ್ಯಾಂಚೆಸ್ಟರ್‌ ಯುನೈಟೆಡ್‌ ಅಂದಾಜು 16311 ಕೋಟಿ ರು. ಬಿಡ್‌ ಸಲ್ಲಿಸಿತ್ತು ಎನ್ನಲಾಗಿದೆ. ಆದರೆ ಆರ್‌ಸಿಬಿಯ ಈಗಿನ ಮಾಲಿಕರಾಗಿರುವ ಯುನೈಟೆಡ್‌ ಸ್ಪಿರಿಟ್ಸ್‌ ಸಂಸ್ಥೆಯು ಬಿಡ್‌ ಮೊತ್ತವನ್ನು 2 ಬಿಲಿಯನ್‌ ಡಾಲರ್‌ಗೆ(₹18479 ಕೋಟಿ ರು.) ಏರಿಕೆ ಮಾಡಿದೆ ಎಂದು ತಿಳಿದುಬಂದಿದೆ. ಮಾರಾಟ ಪ್ರಕ್ರಿಯೆ ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

66
ಸಾಕಷ್ಟು ಕುತೂಹಲ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್‌ನ ಹಾಲಿ ಚಾಂಪಿಯನ್ ಆಗಿರುವುದರ ಜತೆಗೆ ಕೋಟ್ಯಾಂತರ ಅಪ್ಪಟ ಅಭಿಮಾನಿಗಳನ್ನು ಹೊಂದಿರುವ ಫ್ರಾಂಚೈಸಿಯಾಗಿ ಗುರುತಿಸಿಕೊಂಡಿದೆ. ಹೀಗಾಗಿ ಈ ಫ್ರಾಂಚೈಸಿಯ ಹೊಸ ಮಾಲೀಕರು ಯಾರಾಗಬಹುದು ಎನ್ನುವುದಕ್ಕೆ ಇನ್ನೂ ಕೆಲವು ಸಮಯ ಕಾಯಬೇಕಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories