ಅಬುಧಾಬಿ T10 ಲೀಗ್‌ನ ಫೈನಲ್ ಪಂದ್ಯದಲ್ಲಿ ಯುಎಇ ಬುಲ್ಸ್ ತಂಡ ಟ್ರೋಫಿ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ತಂಡದ ಬ್ಯಾಟರ್ ಟಿಮ್ ಡೇವಿಡ್ ಕೇವಲ 30 ಎಸೆತಗಳಲ್ಲಿ 98 ರನ್ ಗಳಿಸಿ ತಮ್ಮ ತಂಡವನ್ನು ಚಾಂಪಿಯನ್ ಮಾಡಿದರು.
ಟಿಮ್ ಡೇವಿಡ್ ಅಂದರೆ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿ. ಅಬುಧಾಬಿ ಟಿ10 ಲೀಗ್‌ನಲ್ಲಿ ಈ ಆಸ್ಟ್ರೇಲಿಯಾದ ಬ್ಯಾಟರ್ ಅಬ್ಬರಿಸಿದ್ದಾರೆ. ಎದುರಾಳಿ ಬೌಲರ್‌ಗಳ ಮೇಲೆ ಮುಗಿಬಿದ್ದರು. ಫೈನಲ್‌ನಲ್ಲಿ ಯುಎಇ ಬುಲ್ಸ್ ಪರ ಆಡಿದ ಟಿಮ್ ಡೇವಿಡ್ ಕೇವಲ 30 ಎಸೆತಗಳಲ್ಲಿ ಅಜೇಯ 98 ರನ್ ಗಳಿಸಿದರು.
25
ಮತ್ತೊಂದು ಟ್ರೋಫಿ ಗೆದ್ದ ಆರ್‌ಸಿಬಿ ಆಟಗಾರರು
ಟಿಮ್ ಡೇವಿಡ್ ಅವರ ಬಿರುಸಿನ ಬ್ಯಾಟಿಂಗ್‌ನಿಂದ ಯುಎಇ ಬುಲ್ಸ್ ತಂಡ 10 ಓವರ್‌ಗಳಲ್ಲಿ 150 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಆಸ್ಪಿನ್ ಸ್ಟಾಲಿಯನ್ಸ್ ತಂಡ ಕೇವಲ 70 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಯುಎಇ ಬುಲ್ಸ್ ಟಿ10 ಲೀಗ್ ಟ್ರೋಫಿ ಗೆದ್ದುಕೊಂಡಿತು. ಈ ತಂಡದಲ್ಲಿ ಆರ್‌ಸಿಬಿಯ ಮೂವರು ಪ್ರಮುಖ ಆಟಗಾರರಿದ್ದರು.
35
ಟಿಮ್ ಡೇವಿಡ್ ವಿಸ್ಪೋಟಕ ಬ್ಯಾಟಿಂಗ್
ಯುಎಇ ಬುಲ್ಸ್ ತಂಡಕ್ಕೆ ಕಳಪೆ ಆರಂಭ ಸಿಕ್ಕಿತ್ತು. ಜೇಮ್ಸ್ ವಿನ್ಸ್ ಕೇವಲ ಎರಡು ಎಸೆತಗಳ ನಂತರ ರಿಟೈರ್ಡ್ ಹರ್ಟ್ ಆದರು. ಆರ್‌ಸಿಬಿ ಆರಂಭಿಕ ಬ್ಯಾಟರ್ ಆಗಿರುವ ಫಿಲ್ ಸಾಲ್ಟ್ 8 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರು. ನಂತರ ಬಂದ ಟಿಮ್ ಡೇವಿಡ್ ಅಬ್ಬರಿಸಿದರು. ಮೊದಲ 13 ಎಸೆತಗಳ ನಂತರ ಗೇರ್ ಬದಲಾಯಿಸಿ, ಜೋಹರ್ ಇಕ್ಬಾಲ್ ಓವರ್‌ನಲ್ಲಿ ಸತತ ನಾಲ್ಕು ಸಿಕ್ಸರ್ ಬಾರಿಸಿದರು.
ಕೊನೆಯ ಓವರ್‌ನಲ್ಲಿ ಟಿಮ್ ಡೇವಿಡ್ ತಮ್ಮ ಮ್ಯಾಜಿಕ್ ತೋರಿಸಿದರು. ಅಶ್ಮೀದ್ ನೆಡ್ ಅವರ ಓವರ್‌ನಲ್ಲಿ 32 ರನ್ ಕಲೆಹಾಕಿದರು. ಇದರಲ್ಲಿ ಐದು ಸಿಕ್ಸರ್‌ಗಳಿದ್ದವು. ಮೊದಲ ಎಸೆತಕ್ಕೆ ಸಿಕ್ಸರ್, ಎರಡನೇ ಎಸೆತಕ್ಕೆ ಎರಡು ರನ್, ನಂತರದ ನಾಲ್ಕು ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು.
55
10 ಓವರ್‌ನಲ್ಲಿ ಕೇವಲ 70 ರನ್ ಬಾರಿಸಿದ ಸ್ಟಾಲಿಯನ್ಸ್
ಟಿಮ್ ಡೇವಿಡ್ ಅವರ ಇನ್ನಿಂಗ್ಸ್‌ನ ಹತ್ತಿರಕ್ಕೂ ಆಸ್ಪಿನ್ ಸ್ಟಾಲಿಯನ್ಸ್ ತಂಡ ಬರಲು ಸಾಧ್ಯವಾಗಲಿಲ್ಲ. ಸ್ಟಾಲಿಯನ್ಸ್ 10 ಓವರ್‌ಗಳಲ್ಲಿ ಕೇವಲ 70 ರನ್ ಗಳಿಸಲಷ್ಟೇ ಶಕ್ತವಾಯಿತು. ಸುನಿಲ್ ನರೈನ್ ಎರಡು ಓವರ್‌ಗಳಲ್ಲಿ ಕೇವಲ 10 ರನ್ ನೀಡಿದರು. ಫಜಲ್ಹಕ್ ಫಾರೂಕಿ ಒಂದು ಓವರ್‌ನಲ್ಲಿ ಕೇವಲ ಎರಡು ರನ್ ನೀಡಿದರು.
ಆರ್‌ಸಿಬಿ ತಂಡದ ಟಿಮ್ ಡೇವಿಡ್, ಫಿಲ್ ಸಾಲ್ಟ್ ಹಾಗೂ ರೊಮ್ಯಾರಿಯೊ ಶೆಫರ್ಡ್ ಚಾಂಪಿಯನ್ ತಂಡದ ಭಾಗವಾಗಿ ಕಪ್ ಗೆದ್ದಿದ್ದು ವಿಶೇಷ.