RCB ಬೆಂಕಿ ವೇಗಿ ಲಾಕಿ ಫರ್ಗ್ಯೂಸನ್‌ಗೆ ಕಂಕಣ ಭಾಗ್ಯ; ಮುದ್ದಾದ ಗೆಳತಿಯ ಕೈಹಿಡಿದ ಕಿವೀಸ್ ಕ್ರಿಕೆಟಿಗ

Published : Feb 11, 2024, 02:00 PM IST

ಬೆಂಗಳೂರು: ನ್ಯೂಜಿಲೆಂಡ್ ಮಾರಕ ವೇಗಿ ಲಾಕಿ ಫರ್ಗ್ಯೂಸನ್ ಜೀವನದ ಎರಡನೇ ಇನಿಂಗ್ಸ್ ಆರಂಭಿಸಿದ್ದಾರೆ. ಗೆಳತಿಯ ಜತೆ ಆರ್‌ಸಿಬಿ ವೇಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.  

PREV
16
RCB ಬೆಂಕಿ ವೇಗಿ ಲಾಕಿ ಫರ್ಗ್ಯೂಸನ್‌ಗೆ ಕಂಕಣ ಭಾಗ್ಯ; ಮುದ್ದಾದ ಗೆಳತಿಯ ಕೈಹಿಡಿದ ಕಿವೀಸ್ ಕ್ರಿಕೆಟಿಗ

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾರಕ ವೇಗಿ ಲಾಕಿ ಫರ್ಗ್ಯೂಸನ್ ಇದೀಗ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಇದೀಗ ಫರ್ಗ್ಯೂಸನ್ ಬಹುಕಾಲದ ಗೆಳತಿ ಎಮ್ಮಾ ಕೊಮೊಕಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

26

ಈ ಜೋಡಿಯು ಫೆಬ್ರವರಿ 02, 2024ರಂದು ತನ್ನ ಜೀವನದ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಈ ಖಾಸಗಿ ಕಾರ್ಯಕ್ರಮದಲ್ಲಿ ಲಾಕಿ ಫರ್ಗ್ಯೂಸನ್ ಅವರ ಆತ್ಮೀಯ ಸ್ನೇಹಿತರು ಹಾಗೂ ಕುಟುಂಬ ವರ್ಗದವರು ಪಾಲ್ಗೊಂಡಿದ್ದರು.

36

ಆರ್‌ಸಿಬಿ ತಂಡದ ನೂತನ ಆಟಗಾರರಾಗಿರುವ ಲಾಕಿ ಫರ್ಗ್ಯೂಸನ್ ಇದೀಗ ಎರಡನೇ ಇನಿಂಗ್ಸ್ ಆರಂಭಿಸಿರುವ ಅವರ ಆಪ್ತವಲಯ ಹಾಗೂ ಅಭಿಮಾನಿ ಬಳಗದಲ್ಲಿ ಹೊಸ ಸಂತೋಷವನ್ನುಂಟು ಮಾಡಿದೆ. ಮಾತ್ರವಲ್ಲ ಜಗತ್ತಿನ ಮೂಲೆ ಮೂಲೆಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿವೆ.

46

ಸಹಜ ಸುಂದರಿ ಎಲ್ಲಾ ಕೊಮೊಕಿ ಅವರು ಸಾಕಷ್ಟು ವರ್ಷಗಳಿಂದ ಲಾಕಿ ಫರ್ಗ್ಯೂಸನ್ ಜತೆ ಡೇಟಿಂಗ್ ನಡೆಸುತ್ತಿರುವುದು ಗುಟ್ಟಾಗಿ ಏನೂ ಉಳಿದಿರಲಿಲ್ಲ. ಈ ಜೋಡಿ ಅಭಿಮಾನಿಗಳ ಮನ ಗೆದ್ದಿದೆ.

56

ಮದುವೆಯ ಕೆಲವು ಮುದ್ದಾದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ. ಹೊಸ ಇನಿಂಗ್ಸ್ ಆರಂಭಿಸಿರುವ ಈ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

66

ಲಾಕಿ ಫರ್ಗ್ಯೂಸನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೂಡಿಕೊಂಡ ಬೆನ್ನಲ್ಲೇ ಕಿವೀಸ್ ವೇಗಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಐಪಿಎಲ್‌ನಲ್ಲಿ ಆರ್‌ಸಿಬಿ ಕಪ್‌ ಗೆಲ್ಲದಿದ್ದರೂ ಜನಪ್ರಿಯತೆಯ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ

Read more Photos on
click me!

Recommended Stories