Image Credit: Vini Raman Instagram
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ವಿನಿ ರಾಮನ್ ಕಳೆದ ಎರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಇನ್ನು 2020ರಲ್ಲಿ ಈ ಜೋಡಿ ಎಂಗೇಟ್‌ಮೆಂಟ್ ಮಾಡಿಕೊಂಡಿರುವುದನ್ನು ಇನ್‌ಸ್ಟಾಗ್ರಾಂ ಮೂಲಕ ಘೋಷಿಸಿದ್ದರು.
ಈ ಜೋಡಿಯು ಕ್ರಿಶ್ಚಿಯನ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ವಿನಿ ರಾಮನ್ ಬಿಳಿ ಬಣ್ಣದ ಲೇಸ್ ಗೌನ್ ತೊಟ್ಟು ಮಿಂಚಿದ್ದಾರೆ. ವಿನಿ ರಾಮನ್ ಅಕ್ಷರಶಃ ಮತ್ಸ್ಯ ಕನ್ಯೆಯಂತೆ ಕಂಗೊಳಿಸುತ್ತಿದ್ದರು.
ತಮ್ಮ ವಿವಾಹದ ಫೋಟೋದೊಂದಿಗೆ 'Wifey & Husband. The best is yet to come' ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ಫೋಟೋ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನು ಗ್ಲೆನ್ ಮ್ಯಾಕ್ಸ್‌ವೆಲ್ ಜತೆಗಿರುವ ಮತ್ತೊಂದು ಫೋಟೋವನ್ನು ಹಂಚಿಕೊಂಡಿರುವ ವಿನಿ ರಾಮನ್, ವಿವಾಹದ ಬಳಿಕ ತುಟಿಗೆ ತುಟಿಯನ್ನು ಚುಂಬಿಸುತ್ತಿರುವ ಫೋಟೋದೊಂದಿಗೆ ಮಿಸ್ಟರ್ ಅಂಡ್ ಮಿಸಸ್ ಮ್ಯಾಕ್ಸ್‌ವೆಲ್ ಎಂದು ಪೋಸ್ಟ್ ಮಾಡಿದ್ದಾರೆ.
ಗ್ಲೆನ್ ಮ್ಯಾಕ್ಸ್‌ವೆಲ್ ಪತ್ನಿ ವಿನಿ ರಾಮನ್ ಮೆಲ್ಬೊರ್ನ್ ನಿವಾಸಿಯಾಗಿದ್ದು, ಔಷಧ ತಯಾರಿಕಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳು ಕೌಟುಂಬಿಕ ಹಿನ್ನೆಲೆಯಲ್ಲಿರುವ ವಿನಿ ರಾಮನ್ ಕುಟುಂಬಸ್ಥರು ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ.
Image Credit: RCB Twitter
ಬಹುನಿರೀಕ್ಷಿತ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 26ರಿಂದ ಆರಂಭವಾಗಲಿದ್ದು, ಗ್ಲೆನ್ ಮ್ಯಾಕ್ಸ್‌ವೆಲ್, ಆರ್‌ಸಿಬಿಯ ಆರಂಭಿಕ ಕೆಲ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.