RCB ತಂಡದಲ್ಲಿ ಮಹತ್ವದ ಬದಲಾವಣೆ; ತಂಡ ಸೇರಿಕೊಂಡಿದ್ದು ಯಾರು?

First Published Feb 10, 2021, 9:34 PM IST

IPL 2021ರ ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಯಾರಿ ಆರಂಭಿಸಿದೆ.  ಕಳೆದ ಟೂರ್ನಿಯಲ್ಲಿ ನಿರಾಸೆ ಅನುಭವಿಸಿದ ಆರ್‌ಸಿಬಿ ಈ ಬಾರಿ ತಂಡದಲ್ಲಿ ಕೆಲ ಬದಲಾವಣೆಯೊಂದಿಗೆ ತಂಡ ಮತ್ತಷ್ಟು ಬಲಿಷ್ಟಗೊಳಿಸಲು ಟೀಂ ಮ್ಯಾನೇಜ್ಮೆಂಟ್ ಮುಂದಾಗಿದೆ.

2021ರ ಐಪಿಎಲ್ ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸದ್ದಿಲ್ಲದೆ ತಯಾರಿ ಆರಂಭಿಸಿದೆ. ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಮ್ಯಾನೇಜ್ಮೆಂಟ್ ಮುಂದಾಗಿದೆ.
undefined
2021ರ ಐಪಿಎಲ್ ಆವೃತ್ತಿಗೆ ಆರ್‌ಸಿಬಿ ತಂಡದ ಬ್ಯಾಟಿಂಗ್ ಕನ್ಸಲ್ಟೆಂಟ್ ಆಗಿ ಟೀಂ ಇಂಡಿಯಾ ಮಾಜಿ ಬ್ಯಾಂಟಿಂಗ್ ಕೋಚ್ ಸಂಜಯ್ ಬಂಗಾರ್ ಅವರನ್ನು ನೇಮಕ ಮಾಡಿದೆ.
undefined
ಈ ಕುರಿತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ವಿಟರ್ ಮೂಲಕ ಅಧೀಕೃತ ಪ್ರಕಣೆ ಹೊರಡಿಸಿದೆ. ಇಷ್ಟೇ ಅಲ್ಲ ಬಂಗಾರ್‌ಗೆ ಆತ್ಮೀಯ ಸ್ವಾಗತ ಕೋರಿದೆ
undefined
ಸೈಮನ್ ಕ್ಯಾಟಿಚ್ ಮುಖ್ಯ ಕೋಚ್ ಆಗಿದ್ದರೆ, ಬ್ಯಾಟಿಂಗ್ ಹಾಗೂ ಸ್ವಿನ್ ಬೌಲಿಂಗ್ ಕೋಚ್ ಆಗಿ ಶ್ರೀಧರ್ ಶ್ರೀರಾಮ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಲ್ಲಿದ್ದಾರೆ.
undefined
ಶ್ರೀಧರ್ ಶ್ರೀರಾಮ್ ಜೊತೆ ಸಂಜಯ್ ಬಂಗಾರ್ ಐಪಿಎಲ್ ಬ್ಯಾಟಿಂಗ್ ಕೋಚ್ ಆಗಿ ಆಗಮಿಸಿರುವುದು ಆರ್‌ಸಿಬಿ ತಂಡದ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಕ್ರಿಕೆಟ್ ಆಪರೇಶನ್ ಹೆಡ್ ಮೈಕ್ ಹೆಸನ್ ಹೇಳಿದ್ದಾರೆ.
undefined
ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಆಗಿ ಅನುಭವ ಹೊಂದಿರುವ 48 ವರ್ಷದ ಬಂಗಾರ್, ಸ್ವತಃ ಥ್ರೋಡೌನ್ ಮೂಲಕವೂ ಬ್ಯಾಟ್ಸ್‌ಮನ್ ಕೌಶಲ್ಯ ಹೆಚ್ಚಿಸಿದ್ದಾರೆ ಎಂದು ಮೈಕ್ ಹೆಸನ್ ಹೇಳಿದ್ದಾರೆ.
undefined
ಆರ್‌ಸಿಬಿ ಬಳಗ ಸೇರಿಕೊಂಡಿರುವ ಸಂಜಯ್ ಬಂಗಾರ್ ಧನ್ಯವಾದ ಹೇಳಿದ್ದಾರೆ. ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಐಪಿಎಲ್ ತಂಡದ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ.
undefined
click me!