ಟೀಮ್‌ ಇಂಡಿಯಾ ಮಾಜಿ ಬೌಲರ್‌ ಶ್ರೀಶಾಂತ್‌ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳಿವು!‌

First Published | Feb 10, 2021, 2:32 PM IST

ಶ್ರೀಶಾಂತ್‌ ಟೀಮ್‌ ಇಂಡಿಯಾ ಕಂಡ ಅದ್ಭುತ ಆಟಗಾರರಲ್ಲಿ ಒಬ್ಬರು. ಇವರ ಕ್ರಿಕೆಟ್‌ ಜೀವನ ವಿವಾದಗಳಿಂದಲೇ ತುಂಬಿವೆ. ಮ್ಯಾಚ್‌ ಫಿಕ್ಸಿಂಗ್‌ ಹಗರಣದ ಕಾರಣದಿಂದ ಬ್ಯಾನ್‌ಗೆ ಗುರಿಯಾಗಿದ್ದ ಶ್ರೀಶಾಂತ್‌ ಪುನಾ ಆಟಕ್ಕೆ ಮರಳಿದ್ದಾರೆ. ಈ ನಡುವೆ ಶ್ರೀಶಾಂತ್‌ ತಮ್ಮ 38ನೇ ಹುಟ್ಟುಹಬ್ಬವನ್ನು ಅಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಈ ಕ್ರಿಕೆಟಿಗನ ಬಗ್ಗೆ ಗೊತ್ತಿಲ್ಲದ ಕೆಲವು ಮಾಹಿತಿಗಳು ಇಲ್ಲಿವೆ.

ಟೀಮ್ ಇಂಡಿಯಾ ಪರ ಆಡಿದ ಫೇಮಸ್‌ ಫಾಸ್ಟ್‌ ಬೌಲರ್‌ಗಳಲ್ಲಿ ಎಸ್.ಶ್ರೀಶಾಂತ್ ಒಬ್ಬರು.ಬೌಲಿಂಗ್‌ಗಿಂತ ಹೆಚ್ಚಾಗಿ, ವಿವಾದಗಳಿಂದಲೇಪ್ರಸಿದ್ಧರಾಗಿದ್ದರು.
undefined
ಅವರ ವೃತ್ತಿ ಜೀವನದ ಬಹುಪಾಲು ವಿವಾದಗಳಿಂದ ನಾಶವಾಯಿತು. ದೀರ್ಘಕಾಲದ ಬ್ಯಾನ್‌ ಅವರ ಕೆರಿಯರ್‌ ಹಾಳು ಮಾಡಿತು. ಅದರೂ ಅವರು ತಮ್ಮ ವೃತ್ತಿಜೀವನವಕ್ಕೆಪುನರಾಗಮನ ಮಾಡಿದ್ದಾರೆ.
undefined
Tap to resize

ಕೇರಳ ಮೂಲದ ಕ್ರಿಕೆಟಿಗ ಶ್ರೀಶಾಂತ್ ಜೀವನದ ರೋಚಕ ಸಂಗತಿಗಳು ಇಲ್ಲಿವೆ.
undefined
ಶ್ರೀಶಾಂತ್ ಅವರ ಮೋಜಿನ ವರ್ತನೆಗೆ ಪ್ರಸಿದ್ಧರಾಗಿದ್ದರು. ಇವರನ್ನು ಟೀಮ್ ಇಂಡಿಯಾದ ಡಿಸ್ಕೋ ಡ್ಯಾನ್ಸರ್‌ ಎಂದು ಹೇಳಲಾಗುತ್ತದೆ. ಅವರು ಒಮ್ಮೆ ಮೈದಾನದಲ್ಲಿಯೂ ಡ್ಯಾನ್ಸ್ ಮಾಡುತ್ತಿದ್ದರು. 2006ರಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧ, ಅವರು ಆಂಡ್ರೆನೆಲ್‌ಗೆ ಸಿಕ್ಸರ್‌ ಹೊಡೆದಿದ್ದರು.ಆಗ ಅವರನ್ನು ನೆಲ್‌ ಸ್ಲೆಡ್ಜ್ ಮಾಡಲು ಪ್ರಯತ್ನಿಸಿದರು. ಆಗ ಶ್ರೀಶಾಂತ್ ಡ್ಯಾನ್ಸ್‌ ಮಾಡಿ ಸಿಕ್ಸರ್‌ ಅನ್ನು ಸೆಲೆಬ್ರೆಟ್‌ ಮಾಡಿದ್ದರು.
undefined
2007ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಶ್ರೀಶಾಂತ್ ಆಲ್‌ರೌಂಡರ್ ಆಂಡ್ರ್ಯೂ ಸೈಮಂಡ್ಸ್‌ಗೆ ಔಟ್‌ ಆದಾಗ ಅವರ ಮುಖದ ಮುಂದೆ ಚಪ್ಪಾಳೆ ತಟ್ಟಿದರು. ನಂತರ ಅವರು ಆಸೀಸ್‌ನಲ್ಲಿ ನಿಂದನೆಗಳ ಆರೋಪಿಸಿದ್ದರೂ ಅದನ್ನು ಶ್ರೀಶಾಂತ್‌ ನಿರಾಕರಿಸಿದರು. ಸೈಮಂಡ್ಸ್‌ನನ್ನು ಮಾಕ್‌ ಮಾಡಲು ಪ್ರಯತ್ನಿಸಿದ್ದಾಗಿ ಹೇಳಿದ್ದರು.
undefined
ಇಂಡಿಯನ್ ಪ್ರೀಮಿಯರ್ ಲೀಗ್ 2008ರ ಸಮಯದಲ್ಲಿ, ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುವಾಗ, ಶ್ರೀಶಾಂತ್ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರ ಸಿಟ್ಟಿಗೆ ಗುರಿಯಾಗಿದ್ದರು.ಶ್ರೀಶಾಂತ್ ಅವರ ವಾಗ್ದಾಳಿಯಿಂದ ನಿರಾಶೆಗೊಂಡ ಭಜ್ಜಿ, ಕಪಾಳ ಮೋಕ್ಷ ಮಾಡಿದ್ದರು. ಅದಕ್ಕೆ ಆ ಸೀಸನ್‌ನ ಉಳಿದ ಭಾಗಕ್ಕೆ ಹರ್ಭಜನ್ ಸಿಂಗ್ ಅವರನ್ನು ಪಂದ್ಯಗಳಿಂದ ಬ್ಯಾನ್‌ ಮಾಡಲಾಯಿತು.
undefined
ಐಪಿಎಲ್ 2013ರ ಸಂದರ್ಭದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದ ಶ್ರೀಶಾಂತ್ ವಿರುದ್ಧ ಸ್ಪಾಟ್ ಫಿಕ್ಸಿಂಗ್ ಆರೋಪ ಹೊರಿಸಲಾಯಿತು. ಪರಿಣಾಮವಾಗಿ, ಅವರಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಜೀವಾವಧಿ ನಿಷೇಧವಿಧಿಸಿತು. 2020ರಲ್ಲಿ ಅವರ ನಿಷೇಧವನ್ನು ರದ್ದುಗೊಳಿಸಲಾಯಿತು. ಈ ಸೀಸನ್‌ನಲ್ಲಿ ದೇಶೀಯ ಸರ್ಕ್ಯೂಟ್‌ನಲ್ಲಿ ಕೇರಳ ರಾಜ್ಯ ಪರ ಆಡಲು ಕಮ್‌ಬ್ಯಾಕ್‌ ಮಾಡಿದ್ದಾರೆ ಶ್ರೀಶಾಂತ್‌.
undefined
ಡ್ಯಾನ್ಸ್‌ ರಿಯಾಲಿಟಿ ಶೋ ಜಲಕ್ ದಿಖ್ಲಾ ಜಾದಲ್ಲಿ ಭಾಗವಹಿಸಿದರು. ಅವರ ಕೆಟ್ಟ ವರ್ತನೆಯ ಕಾರಣದಿಂದ ಆಗಲೂ ಮತ್ತೊಮ್ಮೆ ಸುದ್ದಿಯಾಗಿದ್ದರು.ಜಡ್ಜ್‌ ಜೊತೆ ವಾದ ಮತ್ತು ಕಳಪೆ ಪ್ರದರ್ಶನದ ಕಾರಣಶೋನಿಂದ ಹೊರ ಬೀಳಬೇಕಾಯಿತು.
undefined

Latest Videos

click me!