ಸರ್ಫರಾಜ್ ಖಾನ್ ರನೌಟ್ ಮಾಡಿದ್ದಕ್ಕೆ ಕೈಮುಗಿದು ಕ್ಷಮೆ ಕೋರಿದ ರವೀಂದ್ರ ಜಡೇಜಾ..!

First Published | Feb 16, 2024, 11:31 AM IST

ರಾಜ್‌ಕೋಟ್‌: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯವು ನಿರಂಜನ್ ಶಾ ಮೈದಾನದಲ್ಲಿ ಭರ್ಜರಿಯಾಗಿ ಸಾಗುತ್ತಿದೆ. ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಶತಕದತ್ತ ಮುನ್ನುಗ್ಗುತ್ತಿದ್ದ ಸರ್ಫರಾಜ್ ಖಾನ್ ರನೌಟ್ ಮಾಡಿದ್ದಕ್ಕೆ ರವೀಂದ್ರ ಜಡೇಜಾ ಕ್ಷಮೆ ಕೋರಿದ್ದಾರೆ.

ಕಳೆದ ಕೆಲ ವರ್ಷಗಳಿಂದ ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಟೀಂ ಇಂಡಿಯಾ ಬಾಗಿಲು ಬಡಿಯುತ್ತಾ ಬಂದಿದ್ದ ಸರ್ಫರಾಜ್ ಖಾನ್, ಕೊನೆಗೂ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡುವಲ್ಲಿ ಯಶಸ್ವಿಯಾದರು.
 

ಕಳೆದ ಕೆಲ ವರ್ಷಗಳಿಂದ ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಟೀಂ ಇಂಡಿಯಾ ಬಾಗಿಲು ಬಡಿಯುತ್ತಾ ಬಂದಿದ್ದ ಸರ್ಫರಾಜ್ ಖಾನ್, ಕೊನೆಗೂ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡುವಲ್ಲಿ ಯಶಸ್ವಿಯಾದರು.

Tap to resize

ಭಾರತದ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ, ಮುಂಬೈ ಮೂಲದ 26 ವರ್ಷದ ಸರ್ಫರಾಜ್ ಖಾನ್‌ಗೆ ಟೆಸ್ಟ್ ಕ್ಯಾಪ್ ನೀಡುವ ಮೂಲಕ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸರ್ಫರಾಜ್ ತಂದೆ ಹಾಗೂ ಪತ್ನಿ ಆನಂದ ಭಾಷ್ಪ ಸುರಿಸಿದ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇನ್ನು ಇದಾದ ಬಳಿಕ ಮೊದಲ ದಿನವೇ ಬ್ಯಾಟಿಂಗ್ ಮಾಡಲಿಳಿದ ಸರ್ಫರಾಜ್ ಖಾನ್ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಸರ್ಫರಾಜ್ ಖಾನ್ ಕೇವಲ 48 ಎಸೆತಗಳನ್ನು ಎದುರಿಸಿ ಚುರುಕಿನ ಅರ್ಧಶತಕ ಸಿಡಿಸಿದರು.

5ನೇ ವಿಕೆಟ್‌ಗೆ ಸರ್ಫರಾಜ್ ಖಾನ್ ಹಾಗೂ ರವೀಂದ್ರ ಜಡೇಜಾ ಅಮೂಲ್ಯ 77 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. 77 ರನ್‌ಗಳ ಜತೆಯಾಟದಲ್ಲಿ ಸರ್ಫರಾಜ್ ಖಾನ್ ಒಬ್ಬರೇ 62 ರನ್ ಬಾರಿಸಿದರು.

ಇನ್ನು ಒಂದು ತುದಿಯಲ್ಲಿ ರವೀಂದ್ರ ಜಡೇಜಾ ಶತಕದ ಹೊಸ್ತಿಲಲ್ಲಿದ್ದರು. ಈ ಸಂದರ್ಭದಲ್ಲಿ ನಾನ್‌ ಸ್ಟ್ರೈಕರ್‌ನಲ್ಲಿದ್ದ ಸರ್ಫರಾಜ್ ಖಾನ್, ಜಡೇಜಾ ಮಾಡಿದ ತಪ್ಪಿಗೆ ರನೌಟ್ ಆಗಿ ಪೆವಿಲಿಯನ್ ಸೇರಿದರು. 

ಸರ್ಫರಾಜ್ ಖಾನ್ 66 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 62 ರನ್ ಬಾರಿಸಿ ಮಾರ್ಕ್‌ ವುಡ್ ಡೈರೆಕ್ಟ್ ಹಿಟ್‌ಗೆ ಪೆವಿಲಿಯನ್ ಸೇರಬೇಕಾಯಿತು. ಸರ್ಫರಾಜ್ ರನೌಟ್ ಮಾಡಿದ್ದಕ್ಕೆ ನಾಯಕ ರೋಹಿತ್ ಶರ್ಮಾ ಬೇಸರ ಹೊರಹಾಕಿದ್ದರು.

ಇದೀಗ ಮೊದಲ ದಿನದಾಟ ಮುಕ್ತಾಯದ ಬಳಿಕ ಜಡೇಜಾ, ಸರ್ಫರಾಜ್ ಖಾನ್ ಕ್ಷಮೆ ಕೋರಿದ್ದಾರೆ. 'ಸರ್ಫರಾಜ್ ಖಾನ್ ನೆನಪಿಸಿಕೊಂಡರೆ ಬೇಜಾರ್ ಆಗುತ್ತೆ. ಅದು ನನ್ನ ತಪ್ಪು ಕಾಲ್ ಆಗಿತ್ತು. ಚೆನ್ನಾಗಿ ಆಡಿದ್ರಿ ಸರ್ಫರಾಜ್" ಎಂದು ಜಡ್ಡು ಬಹಿರಂಗವಾಗಿಯೇ ಸೋಷಿಯಲ್ ಮೀಡಿಯಾ ಮೂಲಕ ಕ್ಷಮೆ ಕೋರಿದ್ದಾರೆ.

Latest Videos

click me!