ವ್ಯಾಲೆಂಟೈನ್ ದಿನವೇ ಪ್ಯಾಟ್ ಕಮಿನ್ಸ್ ಪತ್ನಿಗೆ Love ಪ್ರಪೋಸ್ ಮಾಡಿದ ಭಾರತೀಯ..! ಪಂಚಿಂಗ್ ರಿಪ್ಲೆ ಕೊಟ್ಟ ಕಾಂಗರೂ ನಾಯಕ

Published : Feb 14, 2024, 02:04 PM ISTUpdated : Feb 14, 2024, 03:02 PM IST

ಬೆಂಗಳೂರು: ಜಗತ್ತಿನಾದ್ಯಂತ ಇಂದು ಅದ್ಧೂರಿಯಾಗಿ ಪ್ರೇಮಿಗಳ ದಿನಾಚರಣೆ ಆಚರಿಸಲಾಗುತ್ತಿದೆ. ಹೀಗಿರುವಾಗಲೇ ಭಾರತದ ಅಭಿಮಾನಿಯೊಬ್ಬ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಪತ್ನಿಗೆ ಪ್ರೇಮ ನಿವೇದನೆ ಮಾಡಿದ್ದಾನೆ. ಇದಕ್ಕೆ ಕಮಿನ್ಸ್ ಕೊಟ್ಟ ಉತ್ತರ ಸಾಕಷ್ಟು ವೈರಲ್ ಆಗಿದೆ.  

PREV
18
ವ್ಯಾಲೆಂಟೈನ್ ದಿನವೇ ಪ್ಯಾಟ್ ಕಮಿನ್ಸ್ ಪತ್ನಿಗೆ Love ಪ್ರಪೋಸ್ ಮಾಡಿದ ಭಾರತೀಯ..! ಪಂಚಿಂಗ್ ರಿಪ್ಲೆ ಕೊಟ್ಟ ಕಾಂಗರೂ ನಾಯಕ

ಜಗತ್ತಿನಾದ್ಯಂತ ಫೆಬ್ರವರಿ 14ನ್ನು ಪ್ರೇಮಿಗಳ ದಿನವೆಂದು ಆಚರಿಸಲಾಗುತ್ತದೆ. ಪ್ರೀತಿಗೆ ಜಾತಿ-ಧರ್ಮ, ಭಾಷೆ ಹಾಗೂ ಗಡಿಯ ಹಂಗಿಲ್ಲ ಎನ್ನುವುದು ಆಗಾಗ ಸಾಬೀತಾಗುತ್ತಲೇ ಬಂದಿದೆ.

28

ಇದೀಗ ಪ್ರೇಮಿಗಳ ದಿನದಂದೇ ಭಾರತದ ನೆಟ್ಟಿಗನೊಬ್ಬ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್‌ ಪತ್ನಿಗೆ ಪ್ರೇಮ ನಿವೇದನೆ ಮಾಡಿ ಸುದ್ದಿಯಾಗಿದ್ದಾನೆ. ಅದಕ್ಕೆ ಕಮಿನ್ಸ್ ಕೊಟ್ಟ ಉತ್ತರ ಕೂಡಾ ಸಾಕಷ್ಟು ವೈರಲ್ ಆಗಿದೆ.

38

ಹೌದು, ಪ್ರೇಮಿಗಳ ದಿನದಂದು ಪ್ಯಾಟ್ ಕಮಿನ್ಸ್ ತಮ್ಮ ಮುದ್ದಾದ ಮಡದಿ ಬೆಕೆ ಕಮಿನ್ಸ್ ಜತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. 
 

48

ಬಿಡುವಿನ ಸಮಯವನ್ನು ಬೀಚ್ ಬದಿಯಲ್ಲಿ ಎಂಜಾಯ್ ಮಾಡುವಂತೆ ಕಂಡುಬಂದಿರುವ ಫೋಟೋದಲ್ಲಿ, " ಸೂಪರ್ ಮಾಮ್, ಪತ್ನಿ, ನನ್ನ ಪ್ರೇಯಸಿ, ಹಾಗೂ ಒಳ್ಳೆಯ ಸರ್ಪರ್. ಹ್ಯಾಪಿ ವ್ಯಾಲೆಂಟೈನ್ ಬೆಕೆ ಕಮಿನ್ಸ್ ಎಂದು ಪ್ಯಾಟ್ ಕಮಿನ್ಸ್ ಶುಭ ಕೋರಿದ್ದರು.

58

ಪ್ಯಾಟ್ ಕಮಿನ್ಸ್ ಹಂಚಿಕೊಂಡ ಈ ಫೋಟೋ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದಕ್ಕೆ ಭಾರತೀಯ ನೆಟ್ಟಿಗನೊಬ್ಬ ವಿಚಿತ್ರವಾಗಿ ಕಮೆಂಟ್ ಮಾಡಿ ಗಮನ ಸೆಳೆದಿದ್ದಾನೆ.

68

"ನಾನು ಭಾರತೀಯ, ನಾನು ನಿನ್ನ ಪತ್ನಿಯನ್ನು ಪ್ರೀತಿಸುತ್ತೇನೆ" ಎಂದು ಫರ್ಹಾನ್ ಖಾನ್ ಎನ್ನುವ ನೆಟ್ಟಿಗ ಕಮೆಂಟ್ ಮಾಡಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಮಿನ್ಸ್, "ಇದನ್ನು ಆಕೆಯ ಗಮನಕ್ಕೆ ತರುತ್ತೇನೆ" ಎಂದು ಕಮೆಂಟ್ ಮಾಡಿದ್ದಾರೆ.

78

2023 ಪ್ಯಾಟ್‌ ಕಮಿನ್ಸ್‌ ಪಾಲಿಗೆ ಅತ್ಯಂತ ಸ್ಮರಣೀಯ ವರ್ಷವಾಗಿತ್ತು. ಈ ಒಂದೇ ವರ್ಷದಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದಲ್ಲಿ ಆಸ್ಟ್ರೇಲಿಯಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಹಾಗೂ ಏಕದಿನ ವಿಶ್ವಕಪ್ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.

88

ಎರಡು ಫೈನಲ್‌ನಲ್ಲೂ ಆಸ್ಟ್ರೇಲಿಯಾ ತಂಡವು ಭಾರತ ಎದುರೇ ಚಾಂಪಿಯನ್ ಆಗಿದ್ದು ವಿಶೇಷ. ಇನ್ನು 2023ರಲ್ಲೇ ಕಮಿನ್ಸ್ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಪಾತ್ರರಾಗಿದ್ದರು. 

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories