ಬಾಂಗ್ಲಾ ಎದುರು ಸೋತರೂ ಟೀಂ ಇಂಡಿಯಾ ಪರ ಅಪರೂಪದ ದಾಖಲೆ ಬರೆದು ದಿಗ್ಗಜರ ಸಾಲು ಸೇರಿದ ಜಡೇಜಾ..!

First Published | Sep 16, 2023, 1:39 PM IST

ಕೊಲಂಬೊ(ಸೆ.16): ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ, ಬಾಂಗ್ಲಾದೇಶ ಎದುರು ಶರಣಾಗಿದೆ. ಇದರ ಹೊರತಾಗಿಯೂ ಟೀಂ ಇಂಡಿಯಾ ಆಲ್ರೌಂಡರ್‌ ರವೀಂದ್ರ ಜಡೇಜಾ, ಬೌಲಿಂಗ್‌ನಲ್ಲಿ ಅಪರೂಪದ ದಾಖಲೆ ಬರೆದು, ದಿಗ್ಗಜರ ಸಾಲು ಸೇರಿದ್ದಾರೆ. ಬಾಂಗ್ಲಾ ಬ್ಯಾಟರ್ ಶಮಿಮ್ ಹೊಸೈನ್ ಬಲಿ ಪಡೆಯುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 200 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. 
 

1. ಅನಿಲ್ ಕುಂಬ್ಳೆ: 334 ವಿಕೆಟ್‌

ಟೀಂ ಇಂಡಿಯಾ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ 269 ಏಕದಿನ ಪಂದ್ಯಗಳನ್ನಾಡಿ 334 ವಿಕೆಟ್‌ ಕಬಳಿಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಭದ್ರವಾಗಿದ್ದಾರೆ.
 

2. ಜಾವಗಲ್ ಶ್ರೀನಾಥ್:

ಮೈಸೂರು ಎಕ್ಸ್‌ಪ್ರೆಸ್ ಖ್ಯಾತಿಯ ಕನ್ನಡದ ದಿಗ್ಗಜ ವೇಗಿ ಜಾವಗಲ್ ಶ್ರೀನಾಥ್, 229 ಪಂದ್ಯಗಳನ್ನಾಡಿ 315 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಶ್ರೀನಾಥ್ ಎರಡನೇ ಸ್ಥಾನ ಪಡೆದಿದ್ದಾರೆ.
 

Latest Videos


3. ಅಜಿತ್ ಅಗರ್ಕರ್:

ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥರಾದ ಅಜಿತ್ ಅಗರ್ಕರ್‌, ಭಾರತ ಪರ 191 ಏಕದಿನ ಪಂದ್ಯಗಳನ್ನಾಡಿ 288 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಮುಂಬೈ ವೇಗಿ ಗರಿಷ್ಠ ವಿಕೆಟ್ ಕಬಳಿಸಿದ ಭಾರತದ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.
 

4. ಜಹೀರ್ ಖಾನ್:

ಭಾರತದ ಯಶಸ್ವಿ ಎಡಗೈ ವೇಗಿ ಎನಿಸಿಕೊಂಡಿರುವ ಜಹೀರ್ ಖಾನ್ 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯ. ಜಹೀರ್ ಖಾನ್ ಭಾರತ ಪರ 194 ಏಕದಿನ ಪಂದ್ಯಗಳನ್ನಾಡಿ 269 ವಿಕೆಟ್ ಕಬಳಿಸಿದ್ದಾರೆ.

5. ಹರ್ಭಜನ್ ಸಿಂಗ್:

ಟೀಂ ಇಂಡಿಯಾ ಮಾಜಿ ಆಫ್‌ಸ್ಪಿನ್ನರ್ ಹರ್ಭಜನ್ ಸಿಂಗ್, ಭಾರತ ಪರ 234 ಪಂದ್ಯಗಳನ್ನಾಡಿ 265 ವಿಕೆಟ್ ಕಬಳಿಸಿ, 5ನೇ ಸ್ಥಾನದಲ್ಲಿದ್ದಾರೆ. ಭಜ್ಜಿ ಕೂಡಾ 2011ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದಾರೆ.
 

6. ಕಪಿಲ್ ದೇವ್:

ಭಾರತಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದು ಕೊಟ್ಟ ನಾಯಕ ಕಪಿಲ್ ದೇವ್, ಭಾರತ ಪರ 225 ಏಕದಿನ ಪಂದ್ಯಗಳನ್ನಾಡಿ 253 ವಿಕೆಟ್ ಕಬಳಿಸುವ ಮೂಲಕ, ಭಾರತ ಪರ ಗರಿಷ್ಠ ಏಕದಿನ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದ್ದಾರೆ. 
 

7. ರವೀಂದ್ರ ಜಡೇಜಾ:

ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಸದ್ಯ 182 ಏಕದಿನ ಪಂದ್ಯಗಳನ್ನಾಡಿ 200 ಏಕದಿನ ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಜಡ್ಡು ದಿಗ್ಗಜ ಬೌಲರ್‌ಗಳ ಸಾಲಿಗೆ ಸೇರ್ಪಡೆಯಾಗಿದ್ದಾರೆ.
 

8. ವೆಂಕಟೇಶ್ ಪ್ರಸಾದ್:

ಟೀಂ ಇಂಡಿಯಾದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಭಾರತ ಪರ 161 ಏಕದಿನ ಪಂದ್ಯಗಳನ್ನಾಡಿ 196 ವಿಕೆಟ್ ಕಬಳಿಸುವ ಮೂಲಕ ಈ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದಿದ್ದಾರೆ.
 

9. ಇರ್ಫಾನ್ ಪಠಾಣ್:

ಟೀಂ ಇಂಡಿಯಾದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್, ಭಾರತ ಪರ 120 ಏಕದಿನ ಪಂದ್ಯಗಳನ್ನಾಡಿ 173 ವಿಕೆಟ್ ಕಬಳಿಸುವ ಮೂಲಕ ಈ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ.

10. ಮೊಹಮ್ಮದ್ ಶಮಿ:

ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ, ಭಾರತ ಪರ 92 ಏಕದಿನ ಪಂದ್ಯಗಳನ್ನಾಡಿ 165 ವಿಕೆಟ್ ಕಬಳಿಸುವ ಮೂಲಕ ಟಾಪ್ 10 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ.
 

click me!