ಮಗುವಾದ್ಮೇಲೆ ಚಾರ್ಮ್ ಕಳೆದುಕೊಂಡ್ರಾ ಮಯಾಂತಿ ಲ್ಯಾಂಗರ್? ನೆಟ್‌ವರ್ಥ್ ಮಾತ್ರ ಹೆಚ್ಚಾಗಿದೆ, ಏಷ್ಟಿದೆ ಆಸ್ತಿ?

First Published | Sep 15, 2023, 4:30 PM IST

ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ ಮನದನ್ನೇ, ಜಗತ್ತಿನ ಪ್ರಖ್ಯಾತ ಕ್ರೀಡಾ ಆ್ಯಂಕರ್ ತಾಯಿಯಾದ ಬಳಿಕ ಕೆಲ ಸಮಯದ ಬಳಿಕ ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಮಗುವಾದ ಮೇಲೆ ಮಯಾಂತಿ ಚಾರ್ಮ್ ಕಳೆದುಕೊಂಡ್ರಾ? ಆಕೆಯ ನೆಟ್‌ವರ್ಥ್ ಎಷ್ಟಿದೆ ಎನ್ನುವುದನ್ನು ನೋಡೋಣ ಬನ್ನಿ
 

ಮೋಹಕ ಚಲುವೆ ಮಯಾಂತಿ ಲ್ಯಾಂಗರ್ ಫೆಬ್ರವರಿ 08, 1985ರಲ್ಲಿ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಜನಿಸಿದ್ದರು. ಮಾಜಿ ಸೈನ್ಯಾಧಿಕಾರಿ ಸಂಜೀವ್ ಲ್ಯಾಂಗರ್ ಹಾಗೂ ಪ್ರಖ್ಯಾತ ಶಿಕ್ಷಣ ತಜ್ಞೆ ಪ್ರೇಮಿಂದಾ ಲ್ಯಾಂಗರ್ ಮುದ್ದಿನ ಮಗಳು ಮಯಾಂತಿ ಲ್ಯಾಂಗರ್.
 

ಮಯಾಂತಿ ಲ್ಯಾಂಗರ್ 2006ರಲ್ಲಿ ಜೆದ್ ಸ್ಪೋರ್ಟ್ಸ್ ವಾಹಿನಿಯ ಮೂಲಕ ಕ್ರೀಡಾ ವರದಿಗಾರ್ತಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಇದಾದ ಬಳಿಕ ಮಯಾಂತಿ ಹಿಂತಿರುಗಿ ನೋಡುವ ಪ್ರಶ್ನೆಯೇ ಬರಲಿಲ್ಲ.  
 

Latest Videos


ಪಡ್ಡೆಹುಡುಗರ ನಿದ್ದೆಗೆಡಿಸುವಂತಹ ಮಾದಕ ಧ್ವನಿಯ ಮಯಾಂತಿ ಲ್ಯಾಂಗರ್, ತಮ್ಮ ಚೊಚ್ಚಲ ಪ್ರಯತ್ನದ ಕ್ರೀಡಾ ಆ್ಯಂಕರಿಂಗ್‌ನಲ್ಲೇ ಕ್ರೀಡಾಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. 
 

ತುಂಬಾ ಕ್ಲಿಷ್ಟಕರವಾದ ಕ್ರೀಡಾ ವಿಶ್ಲೇಷಣೆಯನ್ನು ತೀರಾ ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯ ವಿವರಿಸುವ ಕೌಶಲ್ಯವನ್ನು ಕರಗತ ಮಾಡಿಕೊಂಡಿರುವ ಮಯಾಂತಿ ಲ್ಯಾಂಗರ್, ಕೆಲವೇ ವರ್ಷಗಳಲ್ಲಿ ಕ್ರೀಡಾ ಪ್ರೇಮಿಗಳ ಮನೆಮಾತಾಗಿದ್ದರು.
 

ಕೆಲವು ವರ್ಷಗಳ ಕಾಲ ಕ್ರೀಡಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಮಯಾಂತಿ ಲ್ಯಾಂಗರ್, ಕ್ರಿಕೆಟ್, ಫುಟ್ಬಾಲ್ ಹಾಗೂ ಹಾಕಿ ಕ್ರೀಡೆಯ ವೀಕ್ಷಕ ವಿವರಣೆಗಾರಿಕೆಯ ಮೂಲಕ ಹೆಚ್ಚು ಜನಪ್ರಿಯರಾದರು. 

ಹಲವು ಪ್ರಖ್ಯಾತ ಕ್ರೀಡಾಪಟುಗಳು, ಅಥ್ಲೀಟ್‌ಗಳ ಸಂದರ್ಶನ ಮಾಡುವ ಮೂಲಕ ಮಯಾಂತಿ ಲ್ಯಾಂಗರ್, ಕ್ರೀಡಾ ಚಾನೆಲ್‌ಗಳ ಪಾಲಿನ ಹಾಟ್ ಫೇವರೇಟ್‌ ಮಹಿಳಾ ಆ್ಯಂಕರ್ ಎನಿಸಿಕೊಳ್ಳಲು ಹೆಚ್ಚು ಸಮಯ ಹಿಡಿಯಲಿಲ್ಲ.

ಅದ್ಭುತ ಆ್ಯಂಕರಿಂಗ್ ಮೂಲಕ ಗಮನ ಸೆಳೆದಿರುವ ಮಯಾಂತಿ ಲ್ಯಾಂಗರ್‌ಗೆ ಹಲವು ಪ್ರಶಸ್ತಿಗಳು ಅರಸಿ ಬಂದಿವೆ. ಈ ಪೈಕಿ ಇಂಡಿಕ್ ಟೆಲಿವಿಷನ್ ಆನರ್ಸ್‌, ದಿ ಎಫ್‌ಐಸಿಸಿಐ ಅವಾರ್ಡ್‌ ಫಾರ್ ಎಕ್ಸಲೆನ್ಸ್ ಇನ್ ದಿ ಫ್ರೇಮ್, ಆ್ಯಂಕರ್ ಫಾರ್‌ ದಿ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಮುಖವಾಗಿವೆ.
 

ಮಯಾಂತಿ ಲ್ಯಾಂಗರ್ 2012ರಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರಾಗಿದ್ದ ಸ್ಟುವರ್ಟ್ ಬಿನ್ನಿ ಅವರನ್ನು ವಿವಾಹವಾದರು. 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಮಯಾಂತಿ ಲ್ಯಾಂಗರ್ ಗಂಡು ಮಗುವಿಗೆ ಜನ್ಮ ನೀಡಿದ್ದರು.

ತಾಯಿಯಾದ ಬಳಿಕ ಮಯಾಂತಿ ಲ್ಯಾಂಗರ್ ಕೆಲಕಾಲ ಟಿವಿ ಪರದೆಯ ಮೇಲೆ ಕಾಣಿಸಿಕೊಂಡಿರಲಿಲ್ಲ. ಆದರೆ ಮದರ್ ಡ್ಯೂಟಿ ಪೂರೈಸಿದ ಬಳಿಕ ಮಯಾಂತಿ ಈಗ ಮತ್ತೆ ತೆರೆಯ ಮೇಲೆ ಮಿಂಚಲಾರಂಭಿಸಿದ್ದಾರೆ

ಮಯಾಂತಿ ಲ್ಯಾಂಗರ್ ನೆಟ್‌ವರ್ಥ್ ಎಷ್ಟು?

ಖ್ಯಾತ ಕ್ರೀಡಾ ಆ್ಯಂಕರ್ ಆಗಿರುವ ಮಯಾಂತಿ ಲ್ಯಾಂಗರ್ ಅವರ ನೆಟ್‌ವರ್ಥ್‌ 2023ರ ವೇಳೆಯಲ್ಲಿ ಒಂದು ಮಿಲಿಯನ್ ಡಾಲರ್. ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ 8.2 ಕೋಟಿ ರುಪಾಯಿಗಳಾಗಿವೆ.
 

ಇನ್ನು ಮಯಾಂತಿ ಲ್ಯಾಂಗರ್ ಅವರ ತಿಂಗಳ ಆದಾಯ ವಿವಿಧ ಮೂಲಗಳಿಂದ 20+ ಲಕ್ಷ ರುಪಾಯಿಗಳನ್ನು ಸಂಪಾಧಿಸುತ್ತಾರೆ. ಇನ್ನು ಮಯಾಂತಿ ಅವರ ವಾರ್ಷಿಕ ಸಂಬಳ 2.5 ಕೋಟಿ ರುಪಾಯಿಗಳಾಗಿವೆ. 

ಮಯಾಂತಿ ಲ್ಯಾಂಗರ್ ತಾಯಿಯಾದ ಬಳಿಕ ಚಾರ್ಮ್ ಕಳೆದುಕೊಂಡಿದ್ದಾರಾ? ಅಥವಾ ಇನ್ನೂ ಚೆನ್ನಾಗಿ ಆಗಿದ್ದಾರಾ ಎನ್ನುವುದನ್ನು ನೀವೂ ಕಾಮೆಂಟ್ ಮಾಡಿ.

click me!