ಇಶಾಂತ್ ಶರ್ಮಾ, ಜಹೀರ್ ಖಾನ್ ದಾಖಲೆ ನುಚ್ಚುನೂರು ಮಾಡಿದ ರವೀಂದ್ರ ಜಡೇಜಾ!

First Published | Nov 2, 2024, 1:11 PM IST

ವಾಂಖೇಡೆ ಮೈದಾನದಲ್ಲಿ ನ್ಯೂಜಿಲೆಂಡ್ ಎದುರು ರವೀಂದ್ರ ಜಡೇಜಾ ಮೋಡಿ ಮಾಡಿದ್ದು 5 ವಿಕೆಟ್‌ಗಳನ್ನ ಕಬಳಿಸಿ ಹೊಸ ದಾಖಲೆ ಬರೆದ್ರು. ಇದರ ಜತೆಗೆ ಕ್ರಿಕೆಟ್ ದಿಗ್ಗಜರಾದ ಜಹೀರ್ ಖಾನ್ ಹಾಗೂ ಇಶಾಂತ್ ಶರ್ಮಾ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಮುಂಬೈ ವಾಂಖೇಡೆಯಲ್ಲಿ ಭಾರತ-ನ್ಯೂಜಿಲೆಂಡ್ ನಡುವಿನ ಕೊನೆಯ ಟೆಸ್ಟ್ ನಡೀತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕಿವೀಸ್‌ ಮೊದಲ ದಿನ 235 ರನ್‌ಗಳಿಗೆ ಆಲೌಟ್‌ ಆಯಿತು. ರವೀಂದ್ರ ಜಡೇಜಾ 5 ವಿಕೆಟ್ ಕಬಳಿಸುವ ಮೂಲಕ ಕಿವೀಸ್ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು

ಜಡ್ಡು ಸ್ಪಿನ್‌ ಮೋಡಿಗೆ ಸಿಕ್ಕ ಕಿವೀಸ್‌

ಕೊನೆಯ ಟೆಸ್ಟ್‌ನಲ್ಲಿ ಜಡೇಜಾ ಅದ್ಭುತವಾಗಿ ಬೌಲ್‌ ಮಾಡಿದ್ರು. ಪರಿಣಾಮ ನ್ಯೂಜಿಲೆಂಡ್‌ 235ಕ್ಕೆ ಆಲೌಟ್‌. ಮೊದಲ 11 ಓವರ್‌ಗಳಲ್ಲಿ ಜಡ್ಡು ವಿಕೆಟ್‌ ಪಡೆದಿರಲಿಲ್ಲ. ಆದ್ರೆ 12ನೇ ಓವರ್‌ನಲ್ಲಿ ಎರಡು ವಿಕೆಟ್‌ ಕಬಳಿಸಿದ್ರು.

ಅರ್ಧಶತಕ ಬಾರಿಸಿದ್ದ ವಿಲ್ ಯಂಗ್‌ ವಿಕೆಟ್‌ ಪಡೆದ ನಂತರ ಟಾಮ್ ಬ್ಲಂಡೆಲ್‌ ಔಟ್‌. 61ನೇ ಓವರ್‌ನಲ್ಲಿ ಮತ್ತೆ 2 ವಿಕೆಟ್‌ ಪಡೆದ್ರು. 22 ಓವರ್‌ಗಳಲ್ಲಿ 65 ರನ್‌ ಕೊಟ್ಟು 5 ವಿಕೆಟ್‌ ಪಡೆದ್ರು. ಟೆಸ್ಟ್‌ನಲ್ಲಿ ಜಡ್ಡುಗೆ ಇದು 14ನೇ ಬಾರಿ 5+ ವಿಕೆಟ್‌ ಸಾಧನೆ ಎನಿಸಿಕೊಂಡಿತು.

Tap to resize

ಇಶಾಂತ್-ಜಹೀರ್ ದಾಖಲೆ ಮುರಿದ ಜಡ್ಡು

ಮೂರನೇ ವಿಕೆಟ್‌ ಪಡೆಯುತ್ತಿದ್ದಂತೆಯೇ ಜಡ್ಡು, ಇಶಾಂತ್ ಶರ್ಮಾ, ಜಹೀರ್ ಖಾನ್ ದಾಖಲೆ ಮುರಿದ್ರು. ಇಬ್ಬರೂ  ಟೆಸ್ಟ್‌ ಕ್ರಿಕೆಟ್‌ನಲ್ಲಿ 311 ವಿಕೆಟ್‌ ಪಡೆದಿದ್ರು. ಇದೀಗ ಜಡ್ಡು 314 ವಿಕೆಟ್‌ ಪಡೆದಿದ್ದಾರೆ. ಇದರೊಂದಿಗೆ ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಟಾಪ್‌-5ನೊಳಗೆ ಸ್ಥಾನ ಪಡೆದಿದ್ದಾರೆ.

ಭಾರತಕ್ಕೆ ಅತಿ ಹೆಚ್ಚು ಟೆಸ್ಟ್ ವಿಕೆಟ್‌ ಪಡೆದ ಟಾಪ್ 5 ಬೌಲರ್‌ಗಳು:

1. ಅನಿಲ್ ಕುಂಬ್ಳೆ - 619

2. ರವಿಚಂದ್ರನ್ ಅಶ್ವಿನ್ - 533

3. ಕಪಿಲ್ ದೇವ್ - 434

4. ಹರ್ಭಜನ್ ಸಿಂಗ್ - 417

5. ರವೀಂದ್ರ ಜಡೇಜಾ - 314

3000 ರನ್‌, 300 ವಿಕೆಟ್‌: ಜಡೇಜಾ ಮತ್ತೊಂದು ಸಾಧನೆ:

ಟೆಸ್ಟ್‌ ಕ್ರಿಕೆಟ್‌ನಲ್ಲಿ 3000 ರನ್‌, 300 ವಿಕೆಟ್‌ ಪಡೆದ ಮೂರನೇ ಭಾರತೀಯ ಜಡೇಜಾ. ಈ ಹಿಂದೆ ಕಪಿಲ್ ದೇವ್‌, ಅಶ್ವಿನ್‌ ಈ ಸಾಧನೆ ಮಾಡಿದ್ರು. ಇಯಾನ್‌ ಬೋಥಮ್‌ ನಂತರ ವೇಗವಾಗಿ ಈ ಸಾಧನೆ ಮಾಡಿದ ಎರಡನೇ ಆಟಗಾರ ಜಡೇಜಾ.

Latest Videos

click me!