ಚೆನ್ನೈ: ಟಿ20 ಕ್ರಿಕೆಟ್, ಟಿ20 ಲೀಗ್ ಹಾಗೂ ಟೆಸ್ಟ್ ಕ್ರಿಕೆಟ್ ಮೇಲೆ ಒಲವು ಜೋರಾಗುತ್ತಿರುವ ಬೆನ್ನಲ್ಲೇ ಏಕದಿನ ಕ್ರಿಕೆಟ್ ಭವಿಷ್ಯದ ಕುರಿತಂತೆ ಪ್ರಶ್ನೆಗಳು ಏಳಲಾರಂಭಿಸಿವೆ. ಇದರ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಮಾಸ್ಟರ್ ಪ್ಲಾನ್ ಹಂಚಿಕೊಂಡಿದ್ದಾರೆ. ಏನದು ನೋಡೋಣ ಬನ್ನಿ
ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ ಅಶ್ವಿನ್
2027ರ ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಾಗಲಿದ್ದು, ಆ ಬಳಿಕ ಏಕದಿನ ಕ್ರಿಕೆಟ್ ಉಳಿಯುವುದು ಕಷ್ಟ ಅನಿಸುತ್ತದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಆರ್.ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
27
ಏಕದಿನ ಕ್ರಿಕೆಟ್ ಮಾತ್ರ ಆಡುತ್ತಿರುವ ರೋಹಿತ್-ಕೊಹ್ಲಿ ಜೋಡಿ
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಸದ್ಯ ಅಂತಾರಾಷ್ಟ್ರೀಯ ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, ಏಕದಿನ ಮಾದರಿಯಲ್ಲಿ ಮಾತ್ರ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
37
ರೋ-ಕೋ ವಿದಾಯದ ಬಳಿಕ ಏಕದಿನ ಕ್ರಿಕೆಟ್‌ಗೆ ಹಿನ್ನಡೆ
ಈಗ ರೋಹಿತ್-ಕೊಹ್ಲಿ ಆಟವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಂತಿದ್ದು, ನ್ಯೂಜಿಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದ ಟಿಕೆಟ್ ಮೊದಲ ಎಂಟು ನಿಮಿಷದಲ್ಲೇ ಸೋಲ್ಡೌಟ್ ಆಗಿವೆ. ಆದರೆ ರೋ-ಕೋ ವಿದಾಯದ ಬಳಿಕ ಏಕದಿನ ಕ್ರಿಕೆಟ್ ಬಗ್ಗೆ ಪ್ರಶ್ನೆಗಳು ಏಳಲಾರಂಭಿಸಿವೆ
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಅಶ್ವಿನ್, ‘2027ರ ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್‌ನ ಭವಿಷ್ಯದ ಬಗ್ಗೆ ನನಗೆ ನಂಬಿಕೆಯಿಲ್ಲ. ಈ ಬಗ್ಗೆ ನನಗೆ ಸ್ವಲ್ಪ ಆತಂಕವಿದೆ ಎಂದು ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
57
ಟಿ20 ಲೀಗ್ ಏಕದಿನ ಕ್ರಿಕೆಟ್‌ಗೆ ಮಾರಕ
ವಿಜಯ್ ಹಜಾರೆ ಟೂರ್ನಿಯನ್ನು ನಾನು ಗಮನಿಸುತ್ತಿದ್ದೇನೆ, ಆದರೆ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯನ್ನು ನೋಡಿದಷ್ಟು ಆಸಕ್ತಿಯಿಂದ ನೋಡಲು ಸಾಧ್ಯವಾಗುತ್ತಿಲ್ಲ. ಜಗತ್ತಿನಾದ್ಯಂತ ನಡೆಯುತ್ತಿರುವ ಟಿ20 ಲೀಗ್‌ಗಳು, ಟೆಸ್ಟ್ ಕ್ರಿಕೆಟ್ ಬಗ್ಗೆ ಜನರಲ್ಲಿ ಹೊಸದಾಗಿ ಮೂಡಿರುವ ಪ್ರೀತಿ, ಏಕದಿನ ಕ್ರಿಕೆಟ್‌ಗೆ ಮಾರಕ’ ಎಂದಿದ್ದಾರೆ.
67
ಫಿಫಾ ಮಾದರಿ ಬಳಸಲು ಅಶ್ವಿನ್ ಸಲಹೆ
ಏಕದಿನ ಕ್ರಿಕೆಟ್ ಉಳಿಯಬೇಕು ಎಂದಾದರೆ, ಫಿಫಾ ಮಾದರಿಯನ್ನು ಅನುಸರಿಸಬೇಕು ಎಂದಿರುವ ಅಶ್ವಿನ್, ಅತಿಯಾದ ಟೂರ್ನಿಗಳಿಂದಾಗಿ ಜನರಲ್ಲಿ ಕ್ರಿಕೆಟ್ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ ಎಂದಿದ್ದಾರೆ.
77
ಏಕದಿನ ಕ್ರಿಕೆಟ್ ಕೇವಲ ವಿಶ್ವಕಪ್‌ಗೆ ಸೀಮಿತವಾಗಲಿ
‘ಏಕದಿನ ಕ್ರಿಕೆಟ್ ಉಳಿಯಬೇಕು ಎಂದರೆ 50 ಓವರ್ ಮಾದರಿಯನ್ನು ಕೇವಲ ವಿಶ್ವಕಪ್‌ಗೆ ಸೀಮಿತಗೊಳಿಸಬೇಕು’ ಎಂದು ಅಶ್ವಿನ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.