ನವದೆಹಲಿ: ಆಂಡರ್‌ಸನ್-ತೆಂಡುಲ್ಕರ್ ಟೆಸ್ಟ್ ಸರಣಿ ಯಶಸ್ವಿಯಾಗಿ ಮುಕ್ತಾಯವಾದ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್‌ಗೆ ಕರ್ಮ ತಪ್ಪಿದ್ದಲ್ಲ ಎನ್ನುವುದನ್ನು ನೆನಪಿಸಿದ್ದಾರೆ. ಅಶ್ವಿನ್ ಹೀಗಂದಿದ್ದೇಕೆ? ನೋಡೋಣ ಬನ್ನಿ
ಆಟಗಾರನೊಬ್ಬ ಗಂಭೀರವಾಗಿ ಗಾಯಗೊಂಡಾಗ ಅವರ ಬದಲು ಮತ್ತೊಬ್ಬನನ್ನು ಆಡಿಸಲು ಐಸಿಸಿ ಅವಕಾಶ ನೀಡಬೇಕು ಎಂಬ ಭಾರತದ ಕೋಚ್ ಗೌತಮ್ ಗಂಭೀರ್‌ರ ಹೇಳಿಕೆಯನ್ನು ಹಾಸ್ಯಸ್ಪದ ಎಂದಿದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್‌ಗೆ ಭಾರತದ ಮಾಜಿ ಸ್ಪಿನ್ನರ್ ಆರ್.ಅಶ್ವಿನ್ ತಿರುಗೇಟು ನೀಡಿದ್ದಾರೆ.
27
‘ಅಭಿಪ್ರಾಯ ಹೇಳಲು ಎಲ್ಲರಿಗೂ ಅವಕಾಶವಿದೆ. ಆದರೆ ಹಾಸ್ಯಾಸ್ಪದ ಎಂಬ ಪದ ಬಳಕೆ ಗೌರವಯುತವಲ್ಲ. ಮಾತನಾಡುವ ಮೊದಲು ಯೋಚಿಸಿ. ಕರ್ಮ ಯಾರನ್ನೂ ಬಿಡಲ್ಲ’ ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.
37
ಸರಣಿಯ ಕೊನೆ ಪಂದ್ಯದಲ್ಲಿ ಕ್ರಿಸ್ ವೋಕ್ಸ್ ಗಾಯಗೊಂಡಿದ್ದರಿಂದ ಇಂಗ್ಲೆಂಡ್‌ಗೆ ಭಾರೀ ನಷ್ಟ ಎದುರಾಯಿತು. ಆಟಗಾರರನ್ನು ಬದಲಿಸಲು ಅವಕಾಶವಿದ್ದಿದ್ದರೆ ಇಂಗ್ಲೆಂಡ್‌ಗೆ ಹಿನ್ನಡೆ ಆಗುತ್ತಿರಲಿಲ್ಲ ಎಂದು ಅಶ್ವಿನ್ ಹೇಳಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನವೇ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಬ್ಯಾಟಿಂಗ್‌ನಲ್ಲಿ ವೋಕ್ಸ್ ಬೌಲಿಂಗ್‌ನಲ್ಲಿ ರಿವರ್ಸ್ ಸ್ವೀಪ್ ಮಾಡುವ ವೇಳೆಯಲ್ಲಿ ಕಾಲ್ಬೆರಳಿನ ಗಾಯಕ್ಕೆ ಒಳಗಾಗಿದ್ದರು.
57
ಇದರ ಬೆನ್ನಲ್ಲೇ ಮಾತನಾಡಿದ್ದ ಟೀಂ ಇಂಡಿಯಾ ಹೆಡ್‌ಕೋಚ್ ಗೌತಮ್ ಗಂಭೀರ್, ಈ ರೀತಿಯಲ್ಲಿ ಆಟಗಾರರು ಗಾಯಗೊಂಡ ಸಂದರ್ಭದಲ್ಲಿ ಸಬ್‌ಸ್ಟಿಟ್ಯೀಷನ್ಸ್ ಅಗತ್ಯವಿದೆ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಇಂಗ್ಲೆಂಡ್ ನಾಯಕ ಗಂಭೀರ್ ಮಾತು ಹಾಸ್ಯಾಸ್ಪದವಾಗಿದೆ ಎಂದು ವ್ಯಂಗ್ಯವಾಡಿದ್ದರು.
67
ಆದರೆ ಓವಲ್‌ನಲ್ಲಿ ನಡೆದ ಕೊನೆಯ ಟೆಸ್ಟ್‌ನಲ್ಲಿ ಕ್ರಿಸ್ ವೋಕ್ಸ್ ಕ್ಷೇತ್ರರಕ್ಷಣೆ ಮಾಡುವ ವೇಳೆ ಭುಜದ ನೋವಿಗೆ ತುತ್ತಾಗಿದ್ದರು. ಹೀಗಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿದಿರಲಿಲ್ಲ.
77
ಇನ್ನು ಇಂಗ್ಲೆಂಡ್ ತನ್ನ ಕೊನೆಯ ಇನಿಂಗ್ಸ್‌ನಲ್ಲಿ ಕ್ರಿಸ್ ವೋಕ್ಸ್ ಭುಜದ ನೋವಿನ ಹೊರತಾಗಿಯೂ ಕೊನೆಯವರಾಗಿ ಬೆಲ್ಟ್ ಕಟ್ಟಿಕೊಂಡು ಒಂಟಿ ಕೈನಲ್ಲಿ ಮೈದಾನಕ್ಕಿಳಿದರು. ಹೀಗಿದ್ದೂ ಇಂಗ್ಲೆಂಡ್ ಎದುರು ಭಾರತ 6 ರನ್ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.