IPL 2021 ಸಿಕ್ಸರ್‌ ಚಚ್ಚುವಲ್ಲಿ ಹೊಸ ದಾಖಲೆ ಬರೆದ ಕ್ರಿಸ್‌ ಗೇಲ್‌..!

Kannadaprabha News   | Asianet News
Published : Apr 13, 2021, 08:21 AM IST

ಮುಂಬೈ: ‘ಯೂನಿವರ್ಸ್‌ ಬಾಸ್‌’ ಕ್ರಿಸ್‌ ಗೇಲ್‌, ಐಪಿಎಲ್‌ನಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ರಾಜಸ್ಥಾನ ರಾಯಲ್ಸ್‌ ವಿರುದ್ಧ ಸೋಮವಾರ(ಏ.12) ನಡೆದ ಈ ಆವೃತ್ತಿಯ 4ನೇ ಪಂದ್ಯದಲ್ಲಿ ಗೇಲ್‌ 2 ಅಮೋಘ ಸಿಕ್ಸರ್‌ ಸಿಡಿಸಿ, ಐಪಿಎಲ್‌ನಲ್ಲಿ 350 ಸಿಕ್ಸರ್‌ಗಳನ್ನು ಪೂರೈಸಿದರು. ಈ ಮೈಲಿಗಲ್ಲು ತಲುಪಿದ ಮೊದಲ ಬ್ಯಾಟ್ಸ್‌ಮನ್‌ ಎನ್ನುವ ದಾಖಲೆಯನ್ನು ಗೇಲ್‌ ಬರೆದರು. ಐಪಿಎಲ್‌ನಲ್ಲಿ ಮೊದಲು 50 ಸಿಕ್ಸರ್‌ ಬಾರಿಸಿದ್ದು ಆ್ಯಡಂ ಗಿಲ್‌ಕ್ರಿಸ್ಟ್‌, ಆ ಬಳಿಕ ಮೊದಲು 100, 150, 200, 250, 300, 350 ಸಿಕ್ಸರ್‌ ಬಾರಿಸಿದ ದಾಖಲೆ ಗೇಲ್‌ ಹೆಸರಿನಲ್ಲೇ ಇದೆ. ಐಪಿಎಲ್‌ನಲ್ಲಿ ಕೆಕೆಆರ್‌, ಆರ್‌ಸಿಬಿ ಹಾಗೂ ಪಂಜಾಬ್‌ ಪರ ಒಟ್ಟು 133 ಪಂದ್ಯಗಳನ್ನು ಆಡಿರುವ ಗೇಲ್‌ 351 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. 2ನೇ ಸ್ಥಾನದಲ್ಲಿರುವುದು ಎಬಿ ಡಿ ವಿಲಿಯ​ರ್‍ಸ್. 170 ಪಂದ್ಯಗಳಲ್ಲಿ ಎಬಿಡಿ ಗಳಿಸಿರುವುದು 237 ಸಿಕ್ಸರ್‌ಗಳನ್ನು. ಎಬಿಡಿಗಿಂತ 37 ಪಂದ್ಯ ಕಡಿಮೆ ಆಡಿದ್ದರೂ ಗೇಲ್‌, 114 ಸಿಕ್ಸರ್‌ ಹೆಚ್ಚಿಗೆ ಬಾರಿಸಿದ್ದಾರೆ.  ಐಪಿಎಲ್‌ನಲ್ಲಿ ಗರಿಷ್ಠ ಸಿಕ್ಸರ್‌ ಬಾರಿಸಿದ ಟಾಪ್‌ 5 ಆಟಗಾರರ ವಿವರ ಇಲ್ಲಿದೆ ನೋಡಿ.

PREV
110
IPL 2021 ಸಿಕ್ಸರ್‌ ಚಚ್ಚುವಲ್ಲಿ ಹೊಸ ದಾಖಲೆ ಬರೆದ ಕ್ರಿಸ್‌ ಗೇಲ್‌..!

1. ಕ್ರಿಸ್‌ ಗೇಲ್‌ 

1. ಕ್ರಿಸ್‌ ಗೇಲ್‌ 

210

ಒಟ್ಟು 133 ಪಂದ್ಯಗಳು, ಸಿಕ್ಸರ್‌ಗಳು 351

ಒಟ್ಟು 133 ಪಂದ್ಯಗಳು, ಸಿಕ್ಸರ್‌ಗಳು 351

310

2. ಎಬಿ ಡಿ ವಿಲಿಯ​ರ್ಸ್‌ 

2. ಎಬಿ ಡಿ ವಿಲಿಯ​ರ್ಸ್‌ 

410

ಒಟ್ಟು 170 ಪಂದ್ಯಗಳು, ಸಿಕ್ಸರ್‌ಗಳು 237

ಒಟ್ಟು 170 ಪಂದ್ಯಗಳು, ಸಿಕ್ಸರ್‌ಗಳು 237

510

3. ಎಂ.ಎಸ್‌. ಧೋನಿ 

3. ಎಂ.ಎಸ್‌. ಧೋನಿ 

610

ಒಟ್ಟು 205 ಪಂದ್ಯಗಳು, ಸಿಕ್ಸರ್‌ಗಳು 216

ಒಟ್ಟು 205 ಪಂದ್ಯಗಳು, ಸಿಕ್ಸರ್‌ಗಳು 216

710

4. ರೋಹಿತ್ ಶರ್ಮಾ

4. ರೋಹಿತ್ ಶರ್ಮಾ

810

ಒಟ್ಟು 201 ಪಂದ್ಯಗಳು, 214 ಸಿಕ್ಸರ್‌ಗಳು

ಒಟ್ಟು 201 ಪಂದ್ಯಗಳು, 214 ಸಿಕ್ಸರ್‌ಗಳು

910

5. ವಿರಾಟ್ ಕೊಹ್ಲಿ

5. ವಿರಾಟ್ ಕೊಹ್ಲಿ

1010

ಒಟ್ಟು 193 ಪಂದ್ಯಗಳು, 201 ಸಿಕ್ಸರ್‌ಗಳು

ಒಟ್ಟು 193 ಪಂದ್ಯಗಳು, 201 ಸಿಕ್ಸರ್‌ಗಳು

click me!

Recommended Stories