ಪೃಥ್ವಿ ಶಾ ಭಾರತ ಪರ 5 ಟೆಸ್ಟ್, 6 ಏಕದಿನ, 1 ಟಿ20 ಪಂದ್ಯ ಆಡಿದ್ದಾರೆ. ಮೊದಲ ಪಂದ್ಯದಲ್ಲೇ ಮ್ಯಾನ್ ಆಫ್ ದಿ ಮ್ಯಾಚ್. 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೆಂಚುರಿ ಹೊಡೆದು ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ರು. ಮೈದಾನದಲ್ಲಿ ಸೂಪರ್ ಆಟ ಆಡೋ ಶಾ, ಮೈದಾನದ ಹೊರಗೆ ವಿವಾದಗಳಲ್ಲಿ ಸಿಕ್ಕಿಹಾಕಿಕೊಳ್ಳೋದು ಜಾಸ್ತಿ.
ಈ ಸೀಸನ್‌ನಲ್ಲಿ ಆಡಿದ್ದ ಎರಡು ರಣಜಿ ಪಂದ್ಯಗಳಲ್ಲಿ 7, 12 (ಬರೋಡ ವಿರುದ್ಧ), 1, 39 (ಮಹಾರಾಷ್ಟ್ರ ವಿರುದ್ಧ) ರನ್ ಮಾಡಿದ್ದಾರೆ. ಜುಲೈನಲ್ಲಿ ಬೆಂಗಳೂರಿನಲ್ಲಿ ನಡೆದ ಫಿಟ್ನೆಸ್ ಕ್ಯಾಂಪ್, ಚೆನ್ನೈನಲ್ಲಿ ನಡೆದ ಬುಚ್ಚಿ ಬಾಬು ಟ್ರೋಫಿ ಮಿಸ್ ಮಾಡಿದ್ರು. ಇರಾನಿ ಟ್ರೋಫಿಯಲ್ಲಿ 76 ರನ್ ಹೊಡೆದಿದ್ರು. ಆದ್ರೆ ಪಂದ್ಯ ಡ್ರಾ ಆಗಿತ್ತು.