ಐಪಿಎಲ್‌ನಲ್ಲಿ ಒಂದೇ ಓವರ್‌ನಲ್ಲಿ 6 ಬೌಂಡರಿ ಬಾರಿಸಿದ ಟಾಪ್-3 ಬ್ಯಾಟರ್‌ಗಳಿವರು! ಮೊದಲು ಬಾರಿಸಿದ್ದು ಯಾರು?

Published : Apr 26, 2026, 04:38 PM IST

ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಬ್ಯಾಟರ್ ಪ್ರಭ್‌ಸಿಮ್ರನ್ ಸಿಂಗ್ ಒಂದೇ ಓವರ್‌ನಲ್ಲಿ 6 ಬೌಂಡರಿ ಬಾರಿಸಿ ಈ ಸಾಧನೆ ಮಾಡಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಒಂದೇ ಓವರ್‌ನಲ್ಲಿ 6 ಬೌಂಡರಿ ಬಾರಿಸಿ ಎಲೈಟ್ ಕ್ಲಬ್ ಸೇರಿದ ಟಾಪ್-3 ಆಟಗಾರರಿವರು. 

PREV
15
ಹೊಸ ದಾಖಲೆ ಬರೆದ ಪ್ರಭ್‌ಸಿಮ್ರನ್ ಸಿಂಗ್

ಒಂದು ಓವರ್‌ನಲ್ಲಿ ಸತತ ಆರು ಫೋರ್‌ಗಳು. ಪಂಜಾಬ್ ಕಿಂಗ್ಸ್ ಓಪನರ್ ಪ್ರಭ್‌ಸಿಮ್ರಾನ್ ಸಿಂಗ್ ಈ ಅಪರೂಪದ ಸಾಧನೆ ಮಾಡಿದ ಹೊಸ ಆಟಗಾರ. ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಮುಕೇಶ್ ಕುಮಾರ್ ಅವರ ಓವರ್‌ನಲ್ಲಿ ಪ್ರಭ್‌ಸಿಮ್ರಾನ್ ಈ ದಾಖಲೆ ಬರೆದರು. ಹಾಗಂತ, ಐಪಿಎಲ್‌ನಲ್ಲಿ ಈ ರೀತಿ ಆಗಿದ್ದು ಇದೇ ಮೊದಲೇನಲ್ಲ.

25
ಅಜಿಂಕ್ಯ ರಹಾನೆ ಮೊದಲು ಆರು ಎಸೆತಗಳಲ್ಲಿ ಆರು ಬೌಂಡರಿ ಬಾರಿಸಿದ್ದರು

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹದ್ದೊಂದು ಓವರ್ ಬಂದಿದ್ದೇ ಐಪಿಎಲ್‌ನಲ್ಲಿ. ಅದು 14 ವರ್ಷಗಳ ಹಿಂದೆ, ಅಂದರೆ 2012ರಲ್ಲಿ. ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಈ ಇತಿಹಾಸ ಸೃಷ್ಟಿಸಿದ್ದರು. ಆಗ ಅವರು ರಾಜಸ್ಥಾನ ತಂಡದಲ್ಲಿದ್ದರು.

35
ಎಸ್ ಅರವಿಂದ್ ಓವರ್‌ನಲ್ಲಿ ಆರು ಬೌಂಡರಿ ಚಚ್ಚಿದ್ದರು

ಆದರೆ, ರಹಾನೆ ಈ ಸಾಧನೆ ಮಾಡಿದ್ದು ಪವರ್‌ಪ್ಲೇನಲ್ಲಿ ಅಲ್ಲ, ಬದಲಾಗಿ 14ನೇ ಓವರ್‌ನಲ್ಲಿ. ಬೆಂಗಳೂರು ತಂಡದ ಬೌಲರ್ ಎಸ್. ಅರವಿಂದ್ ಅವರ ಎಸೆತಗಳಿಗೆ ರಹಾನೆ ಸತತ ಆರು ಬೌಂಡರಿ ಬಾರಿಸಿದ್ದರು. ಅಷ್ಟೇ ಅಲ್ಲ, ಆ ಪಂದ್ಯದಲ್ಲಿ ರಹಾನೆ ಶತಕವನ್ನೂ ಸಿಡಿಸಿ ಮಿಂಚಿದ್ದರು.

45
ಪೃಥ್ವಿ ಶಾ ಎರಡನೇ ಕ್ರಿಕೆಟಿಗ

ನಂತರ 2021ರಲ್ಲಿ ಪೃಥ್ವಿ ಶಾ ಈ ಸಾಧನೆ ಮಾಡಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದ ಅವರು, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಈ ದಾಖಲೆ ಬರೆದರು. ಪ್ರಭ್‌ಸಿಮ್ರಾನ್ ಅವರಂತೆಯೇ ಪೃಥ್ವಿ ಶಾ ಕೂಡ ಪವರ್‌ಪ್ಲೇನಲ್ಲೇ, ಅದೂ ಪಂದ್ಯದ ಮೊದಲ ಓವರ್‌ನಲ್ಲೇ ಆರು ಫೋರ್ ಬಾರಿಸಿದ್ದರು. ಆಗ ಬೌಲಿಂಗ್ ಮಾಡಿದ್ದು ಕೋಲ್ಕತ್ತಾದ ಶಿವಂ ಮಾವಿ.

55
ಎಲೈಟ್ ಕ್ಲಬ್ ಸೇರಿದ ಪ್ರಭ್‌ಸಿಮ್ರನ್ ಸಿಂಗ್

ಈಗ ಪ್ರಭ್‌ಸಿಮ್ರಾನ್ ಸಿಂಗ್ ಕೂಡ ಈ ಪಟ್ಟಿಗೆ ಸೇರಿದ್ದು, ಐಪಿಎಲ್‌ನಲ್ಲಿ ಈ ಮ್ಯಾಜಿಕ್ ಓವರ್ ಮೂರು ಬಾರಿ ದಾಖಲಾಗಿದೆ. ಈ ಮೂವರು ಬ್ಯಾಟರ್ ಹೊರತುಪಡಿಸಿ ಬೇರೆ ಯಾವ ಬ್ಯಾಟರ್‌ಗಳು ಕೂಡಾ ಐಪಿಎಲ್‌ನಲ್ಲಿ ಆರು ಎಸೆತಗಳಲ್ಲಿ ಆರು ಬೌಂಡರಿ ಬಾರಿಸಿಲ್ಲ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories