ಇಂಗ್ಲೆಂಡ್ ವಿರುದ್ದದ ಪಿಂಕ್‌ ಬಾಲ್‌ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ ಪ್ರಕಟ

First Published | Feb 23, 2021, 12:46 PM IST

ಅಹಮದಾಬಾದ್‌: ಭಾರತ-ಇಂಗ್ಲೆಂಡ್‌ ನಡುವಿನ ಮೂರನೇ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಫೆಬ್ರವರಿ 24ರಂದು ಅಹಮದಾಬಾದ್‌ನ ಮೊಟೇರಾ ಸ್ಟೇಡಿಯಂನಲ್ಲಿ ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯ ನಡೆಯಲಿದೆ. 

ಭಾರತದಲ್ಲಿ ನಡೆಯುತ್ತಿರುವ ಎರಡನೇ ಹಗಲು-ರಾತ್ರಿ ಟೆಸ್ಟ್‌ ಪಂದ್ಯ ಇದಾಗಿದ್ದು, ವಿಶ್ವದ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಹೈವೋಲ್ಟೇಜ್‌ ಪಂದ್ಯ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. 4 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯಗಳನ್ನು ಜಯಿಸಿದ್ದು, ಇದೀಗ ಮೂರನೇ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ. 3ನೇ ಟೆಸ್ಟ್‌ ಪಂದ್ಯದಲ್ಲಿ ಭಾರತದ ಸಂಭಾವ್ಯ ತಂಡ ಹೀಗಿದೆ ನೋಡಿ.
 

1. ಶುಭ್‌ಮನ್‌ ಗಿಲ್‌: ಯುವ ಆರಂಭಿಕ ಬ್ಯಾಟ್ಸ್‌ಮನ್‌, ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದಲ್ಲಿ ಅಬ್ಬರಿಸುವ ಸಾಧ್ಯತೆಯಿದೆ.
2. ರೋಹಿತ್‌ ಶರ್ಮಾ: ಎರಡನೇ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಚಚ್ಚಿದ್ದ ಹಿಟ್‌ಮ್ಯಾನ್‌ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿದೆ.
Tap to resize

3. ಚೇತೇಶ್ವರ್ ಪೂಜಾರ: ಟೀಂ ಇಂಡಿಯಾ ಟೆಸ್ಟ್‌ ಸ್ಪೆಷಲಿಸ್ಟ್, ದೊಡ್ಡ ಇನಿಂಗ್ಸ್‌ ಕಟ್ಟುವ ನಿರೀಕ್ಷೆಯಲ್ಲಿ ಸೌರಾಷ್ಟ್ರ ಬ್ಯಾಟ್ಸ್‌ಮನ್‌
4. ವಿರಾಟ್ ಕೊಹ್ಲಿ: ಟೀಂ ಇಂಡಿಯಾ ನಾಯಕ, ರನ್‌ ಮಶೀನ್‌.
5. ಅಜಿಂಕ್ಯ ರಹಾನೆ: ಟೀಂ ಇಂಡಿಯಾ ಉಪನಾಯಕ, ಮಧ್ಯಮ ಕ್ರಮಾಂಕದ ಆಧಾರಸ್ತಂಭ
6. ರಿಷಭ್‌ ಪಂತ್‌: ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್‌
7. ರವಿಚಂದ್ರನ್ ಅಶ್ವಿನ್‌: ಅನುಭವಿ ಆಲ್ರೌಂಡರ್, ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ 8 ವಿಕೆಟ್‌ ಕಬಳಿಸಿದ ಆಟಗಾರ
8. ಅಕ್ಷರ್ ಪಟೇಲ್‌: ಎಡಗೈ ಸ್ಪಿನ್ನರ್‌, ಕಳೆದ ಪಂದ್ಯದಲ್ಲಿ ಪ್ರಮುಖ ವಿಕೆಟ್ ಕಬಳಿಸಿ ಗಮನ ಸೆಳೆದಿರುವ ಸ್ಪಿನ್ನರ್
9. ಇಶಾಂತ್ ಶರ್ಮಾ: ಅನುಭವಿ ವೇಗಿ, ತಮ್ಮ ನೂರನೇ ಟೆಸ್ಟ್ ಪಂದ್ಯ ಆಡಲು ಸಜ್ಜಾಗಿರುವ ವೇಗಿ
10. ಮೊಹಮ್ಮದ್ ಸಿರಾಜ್: ಹೈದ್ರಾಬಾದ್‌ ಮೂಲದ ಯುವ ವೇಗದ ಬೌಲರ್‌
11. ಜಸ್ಪ್ರೀತ್‌ ಬುಮ್ರಾ: 2ನೇ ಟೆಸ್ಟ್‌ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಬುಮ್ರಾ, ಕುಲ್ದೀಪ್ ಯಾದವ್‌ ಬದಲಿಗೆ ಬುಮ್ರಾ ತಂಡ ಕೂಡಿಕೊಳ್ಳಲಿದ್ದಾರೆ.

Latest Videos

click me!