ಆರ್‌ಸಿಬಿ ಜೊತೆ ಸಿಎಸ್‌ಕೆ ಫೈಟ್
ಮುಂಬೈ ಇಂಡಿಯನ್ಸ್ ತಂಡವನ್ನ ಸೋಲಿಸಿದ ಖುಷಿಯಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ತಂಡ ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ ತಂಡದ ಜೊತೆ ಸೆಣಸಾಡಲು ರೆಡಿಯಾಗಿದೆ. ಈ ಪಂದ್ಯ ಇಂದು (ಮಾರ್ಚ್ 28) ಸಂಜೆ 7.30ಕ್ಕೆ ಚೆನ್ನೈ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಎರಡು ತಂಡಗಳು ಭರ್ಜರಿ ಪ್ರಾಕ್ಟೀಸ್ ಮಾಡ್ತಿವೆ. ಎರಡು ತಂಡಗಳು ಈ ಸೀಸನ್‌ನಲ್ಲಿ ತಮ್ಮ ಮೊದಲ ಲೀಗ್ ಪಂದ್ಯದಲ್ಲಿ ಗೆದ್ದಿರೋದ್ರಿಂದ, ಎರಡನೇ ಗೆಲುವು ಯಾರಿಗೆ ಸಿಗುತ್ತೆ ಅನ್ನೋ ಕುತೂಹಲ ಇದೆ.