ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದ ಸಮಯದಲ್ಲಿ ಐಐಟಿ ಬಾಬ ಎಂದೇ ಖ್ಯಾತಿ ಗೊಂಡಿರುವ ಅಭಯ್ ಸಿಂಗ್ ಭಾರಿ ಸಂಚಲನ ಸೃಷ್ಟಿಸಿದ್ದರು. ಐಐಟಿ ತೊರೆದೆ ಸನ್ಯಾಸತ್ವ ಸ್ವೀಕರಿಸಿದ ಅಭಯ್ ಸಿಂಗ್ ಇದೀಗ ಐಪಿಎಲ್ ಟೂರ್ನಿ ಕುರಿತು ಭವಿಷ್ಯ ನುಡಿದಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಟೂರ್ನಿ ವೇಳೆ ಐಐಟಿ ಬಾಬಾ ಭವಿಷ್ಯ ನುಡಿದು ಎಲ್ಲರ ಕೈಯಿಂದ ಟ್ರೋಲ್ ಆಗಿದ್ದರು. ಕಾರಣ ಪಾಕಿಸ್ತಾನ ವಿರುದ್ಧ ಭಾರತ ಸೋಲು ಕಾಣಲಿದೆ ಎಂದು ಭವಿಷ್ಯ ನುಡಿದಿದ್ದರು. ಆದರೆ ಭಾರತ ಗೆಲುವು ಸಾಧಿಸಿದ್ದು ಮಾತ್ರವಲ್ಲ, ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತ್ತು. ಇಷ್ಟೇ ಅಲ್ಲ ಬಾಬಾ ಹೇಳಿದ ಪಾಕಿಸ್ತಾನ ತಂಡ ಭಾರತ ಮಾತ್ರವಲ್ಲ, ಯಾವ ತಂಡದ ವಿರುದ್ಧವೂ ಗೆಲುವು ಕಾಣದೆ ಮೊದಲ ತಂಡವಾಗಿ ಟೂರ್ನಿಯಿಂದ ಹೊರಬಿದ್ದಿತ್ತು. ಇದೀಗ ಐಪಿಎಲ್ ಭವಿಷ್ಯ ಸರದಿ.
ಐಐಟಿ ಬಾಬ ಪ್ರಕಾರ ಈ ಬಾರಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿದೆ ಎಂದಿದ್ದಾರೆ. ಆರ್‌ಸಿಬಿ ಹಾಗೂ ಸಿಎಸ್‌ಕೆ 2025ರ ಟೂರ್ನಿಯಲ್ಲಿ ಉತ್ತಮ ಪ್ರದರ್ಶನದೊಂದಿಗೆ ಫೈನಲ್ ಪ್ರವೇಶಿಸಲಿದೆ ಎಂದಿದ್ದಾರೆ. ಇಷ್ಟಕ್ಕೆ ಬಾಬಾ ಭವಿಷ್ಯ ಮುಗಿದಿಲ್ಲ.
ಫೈನಲ್ ಪಂದ್ಯದಲ್ಲಿ ರೋಚಕ ಹಣಾಹಣಿ ನಡೆಯಲಿದೆ. ಕೊನೆಗೆ ಆರ್‌ಸಿಬಿ ಟ್ರೋಫಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದ್ದಾರೆ. ಐಐಟಿ ಬಾಬ ಈ ಭವಿಷ್ಯ ನುಡಿಯುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳಲ್ಲಿ ಸಂಭ್ರಮಕ್ಕಿಂತ ಆತಂಕ ಹೆಚ್ಚಾಗಿದೆ. ಕಾರಣ ಚಾಂಪಿಯನ್ಸ್ ಟ್ರೋಫಿ ರೀತಿ ಪಾಕಿಸ್ತಾನ ಭಾರತ ವಿರುದ್ದ ಗೆಲ್ಲಲಿದೆ ಎಂದು ಒಂದು ಪಂದ್ಯವನ್ನೂ ಗೆಲ್ಲಲಿಲ್ಲ. ಇದೀಗ ಆರ್‌ಸಿಬಿ ಟ್ರೋಫಿ ಗೆಲ್ಲಲಿದೆ ಎಂದು ಅಭಿಮಾನಿಗಳ ಆತಂಕ ಹೆಚ್ಚಿಸಿದ್ದಾರೆ.
ಆರ್‌ಸಿಬಿ ಈ ಬಾರಿ ಉತ್ತಮ ಆರಂಭ ಪಡೆದಿದೆ. ಕಳೆದೆಲ್ಲಾ ಆವೃತ್ತಿಗಳಿಗಿಂತ ತಂಡ ಉತ್ತಮವಾಗಿ ಎಂದು ಸಾಬೀತು ಮಾಡಿದೆ. ಹೀಗಾಗಿ ಐಟಿಟಿ ಬಾಬ ಭವಿಷ್ಯ ನಿಜವಾಗಲಿದೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ. ಆರ್‌ಸಿಬಿ ಇಷ್ಟು ವರ್ಷ ಟ್ರೋಫಿಗಾಗಿ ಕಾದಿದೆ. ಹೀಗಾಗಿ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿ ಟ್ರೋಫಿ ಗೆಲ್ಲಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.