Virat Kohli Birthday: 8 ಲಕ್ಷದಿಂದ 2 ಕೋಟಿವರೆಗಿನ ಕ್ರಿಕೆಟಿಗನ ವಾಚ್‌ ಕಲೆಕ್ಷನ್‌!

First Published Nov 4, 2021, 2:17 PM IST

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ  (Virat Kohli) ತಮ್ಮ ವಿಶಿಷ್ಟ ಶೈಲಿಗೆ ಹೆಸರುವಾಸಿ. ಲಕ್ಷಾಂತರ ಜನರು ಅವರನ್ನು ಅನುಸರಿಸುತ್ತಾರೆ, ಅವರ ಏನು ಧರಿಸುತ್ತಾನೆ ಮತ್ತು ಅವರು ಏನು ಮಾಡುತ್ತಾರೆ? ಎಂದು ಅಭಿಮಾನಿಗಳು ಅವರ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಬಯಸುತ್ತಾರೆ. ಪ್ರಸ್ತುತ, ವಿರಾಟ್ ಕೊಹ್ಲಿ 2021ರ ಟಿ20 ವಿಶ್ವಕಪ್‌ಗಾಗಿ (T20 World Cup) ತಮ್ಮ ತಂಡದೊಂದಿಗೆ ಯುಎಇಯಲ್ಲಿದ್ದಾರೆ. ಇದೇ ವೇಳೆ ಅವರ ಹುಟ್ಟುಹಬ್ಬ (Birthday) ಕೂಡ ನವೆಂಬರ್ 5 ರಂದು ಬರಲಿದೆ. ವಿರಾಟ್ ಕೊಹ್ಲಿ ಅವರ ವಿಶೇಷ ವಾಚ್ ಸಂಗ್ರಹದ ಬಗ್ಗೆ ಮತ್ತು ಅದರ ಬೆಲೆ ಎಷ್ಟು ಎಂಬ ಮಾಹಿತಿ ಇಲ್ಲಿದೆ.

पटेक फिलिप नॉटिलस

Patek Philippe Nautilus:
ಫ್ಯಾಷನ್ ವಿಚಾರಕ್ಕೆ ಬಂದರೆ ವಿರಾಟ್ ಕೊಹ್ಲಿ ಅವರ ವಾಚ್ ಕಲೆಕ್ಷನ್ ಅವರ ಸ್ಟೈಲ್‌ಗೆ ಸರಿಸಾಟಿಯಿಲ್ಲ. ವಿರಾಟ್ ಕೊಹ್ಲಿ ಪಾಟೆಕ್ ಫಿಲಿಪ್ ನಾಟಿಲಸ್ ವಾಚ್‌ ಹೊಂದಿದ್ದಾರೆ, ಇದರ ಬೆಲೆ ಸುಮಾರು 57 ಲಕ್ಷ ರೂ. ಗಡಿಯಾರದ ಅಂಚು, ಬ್ರಾಸ್ಲೇಟ್‌ ಮತ್ತು ಹಿಂಭಾಗವನ್ನು 100% ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಲಾಗಿದೆ. ಇದರ ಜೊತೆಗೆ, ಪಾಟೆಕ್ ಫಿಲಿಪ್ ನಾಟಿಲಸ್ ವಾಟರ್‌ ಫ್ರೂಫ್‌ ಆಗಿದೆ

Rolex Daytona Rainbow Everose Gold:
ಕೊಹ್ಲಿ ವಾಚ್ ಸಂಗ್ರಹದಲ್ಲಿರುವ ಅತ್ಯಂತ ದುಬಾರಿ ವಾಚ್ ಎಂದರೆ ರೋಲೆಕ್ಸ್ ಡೇಟೋನಾ ರೈನ್‌ಬೋ ಎವೆರೋಸ್ ಗೋಲ್ಡ್. 36 ಬ್ಯಾಗೆಟ್-ಕಟ್ ವಜ್ರಗಳು ಇದರಲ್ಲಿದೆ. ಇದರ ಅಂಚಿನ ಮೇಲೆ ಹಲವು ವಿಧದ ಕಲ್ಲುಗಳಿವೆ, ಅದು ಬೆಳಕಿನಲ್ಲಿ  ಕಾಮನ ಬಿಲ್ಲಿನಂತೆ ಕಾಣುತ್ತದೆ. ಈ  ವಾಚ್‌ನ ಬೆಲೆ 2 ಕೋಟಿ ರೂ.

रोलेक्स डेटोना

Rolex Daytona:
ವಿರಾಟ್ ಕೊಹ್ಲಿ ಸ್ಟೈಲ್ ಐಕಾನ್ ಆಗಿದ್ದಾರೆ ಮತ್ತು ಅವರು ರೋಲೆಕ್ಸ್ ಡೇಟೋನಾ 116500LN ವಾಚ್‌ ಹೊಂದಿದ್ದಾರೆ. ಈ ವಾಚ್‌ ಅನ್ನು 'ಪಾಂಡ' ಎಂದೂ ಕರೆಯುತ್ತಾರೆ. ವಾಚ್‌ನ ಅತ್ಯಂತ ಗಮನಾರ್ಹ ವೈಶಿಷ್ಟ್ಯವೆಂದರೆ ಅದರ ಸ್ಲೇಟ್ ಡಯಲ್, ಇದು ಉತ್ತಮ ಗುಣಮಟ್ಟದ 18 ಕ್ಯಾರಟ್ ಚಿನ್ನದಿಂದ ವಿನ್ಯಾಸವನ್ನು ನೀಡಲಾಗಿದೆ. ಇದಲ್ಲದೆ, ಚಿನ್ನದಿಂದ ಮಾಡಿದ ಫ್ಲೂಟೆಡ್ ಬೆಜೆಲ್ ವಾಟರ್‌ ಫ್ರೂಫ್‌ ಆಗಿದೆ. ಇದು ಸುಮಾರು 8.6 ಲಕ್ಷ ರೂ ಮೌಲ್ಯದ್ದು.

पटेक फिलिप एक्वानॉटी

Patek Philippe Aquanotti:
ವಿರಾಟ್ ಕೊಹ್ಲಿ ರೋಲೆಕ್ಸ್ ಮತ್ತು ಪಟೇಲ್ ಫಿಲಿಪ್‌ನ ಅತ್ಯುತ್ತಮ ವಾಚ್‌ಗಳ ಸಂಗ್ರಹವನ್ನು ಹೊಂದಿದ್ದಾರೆ. ಅದರಲ್ಲಿ ಪಾಟೆಕ್ ಫಿಲಿಪ್ ಅಕ್ವಾನಾಟ್ ಕೂಡ ಒಂದು. ವರದಿಗಳ ಪ್ರಕಾರ, ಸ್ವಿಸ್ ವಾಚ್ ತಯಾರಕರು ಈ ಗಡಿಯಾರದ 500 ಎಡಿಷನ್‌ ಮಾತ್ರ ತಯಾರಿಸಿದ್ದಾರೆ. ಕಿತ್ತಳೆ ಬಣ್ಣದ ಪಟ್ಟಿಯು ವಾಚ್‌ಗೆ ಸ್ಪೋರ್ಟಿ ಲುಕ್ ನೀಡುತ್ತದೆ ಮತ್ತು ಕಪ್ಪು ಮತ್ತು ಕಿತ್ತಳೆ ಬಣ್ಣಗಳ ಕಾಂಬಿನೇಷನ್‌ ವಾಚ್‌ಗೆ ಫಾರ್ಮಲ್‌ ಮತ್ತು ಕ್ಯಾಶುಯಲ್ ಲುಕ್‌ ನೀಡುತ್ತದೆ. ಪಾಟೆಕ್ ಫಿಲಿಪ್ ಅಕ್ವಾನಾಟ್ ಬೆಲೆ 30 ರಿಂದ 35 ಲಕ್ಷದವರೆಗೆ ಇರುತ್ತದೆ.

रोलेक्स डेटजस्ट

Rolex Datejust:
ವಿರಾಟ್ ಕೊಹ್ಲಿ ವಾಚ್ ಕಲೆಕ್ಷನ್ ನಲ್ಲಿ ರೋಲೆಕ್ಸ್ ಡೇಟ್ ಜಸ್ಟ್ ಕೂಡ ಇದೆ.ಇದರ ಬೆಲೆ 8 ಲಕ್ಷ ರೂ. ರೋಲೆಕ್ಸ್ ಡೈಜೆಸ್ಟ್ ಸರಾಸರಿ ವೇಗವನ್ನು ಅಳೆಯಲು ಟ್ಯಾಕಿಮೆಟ್ರಿಕ್ ಸ್ಕೇಲ್ ಅನ್ನು ಹೊಂದಿದೆ. ಇದರ ಬೆಳ್ಳಿ ಮತ್ತು ನೀಲಿ ಬಣ್ಣವು ತುಂಬಾ ರಾಯಲ್ ಲುಕ್ ನೀಡುತ್ತದೆ

Tissot Chrono XL Classic विराट कोहली एडिशन

Tissot Chrono XL Classic Virat Kohli Edition:
2018 ರಲ್ಲಿ, ಸ್ವಿಸ್ ವಾಚ್ ಮೇಕರ್‌, ಟಿಸ್ಸಾಟ್ ವಿರಾಟ್ ಕೊಹ್ಲಿಗಾಗಿ ವಿಶೇಷ ಸರಣಿ ವಾಚ್ ಅನ್ನು ಬಿಡುಗಡೆ ಮಾಡಿತು. ಇದು ವಿರಾಟ್‌ ಇತರ ವಾಚ್‌ಗಳಿಗಿಂತ ಭಿನ್ನವಾಗಿದೆ.  ಟಿಸ್ಸಾಟ್ ಕ್ರೊನೊ ಎಕ್ಸ್‌ಎಲ್ ಕ್ಲಾಸಿಕ್ ವಿರಾಟ್ ಕೊಹ್ಲಿ ಸರಣಿಯನ್ನು ನೀಲಿ ಬಣ್ಣದಲ್ಲಿ ಕ್ರಿಕೆಟ್ ಜಗತ್ತಿಗೆ ವಿರಾಟ್ ಕೊಡುಗೆಯನ್ನು ಗೌರವಿಸಲು ತಯಾರಿಸಲಾಗಿದೆ. ನೇವಿ ಬ್ಲೂ ಲೋಗೋ ಹೊರತುಪಡಿಸಿ, ವಾಚ್ ಹಿಂಭಾಗದಲ್ಲಿ ವಿರಾಟ್ ಅವರ ಆಟೋಗ್ರಾಫ್ ಅನ್ನು ಸಹ ಹೊಂದಿದೆ. ಈ ವಿಶೇಷ ವಾಚ್‌ನ ಬೆಲೆ ಸುಮಾರು 30,000 ರೂ.

रोलेक्स स्काई-ड्वेलर 18K रोज़ गोल्ड

Rolex Sky-Dweller 18K Rose Gold:
ವಿರಾಟ್ ಕೊಹ್ಲಿ ಅವರ ಇನ್‌ಸ್ಟಾಗ್ರಾಮ್‌ನಲ್ಲಿರುವ ಫೋಟೋಗಳು ರೋಲೆಕ್ಸ್ ವಾಚ್‌ಗಳ ಮೇಲಿನ ಅವರ ಪ್ರೀತಿಯನ್ನು ತೋರಿಸುತ್ತವೆ. 35 ಲಕ್ಷ ರೂಪಾಯಿ ಬೆಲೆಯ ರೋಲೆಕ್ಸ್ ಸ್ಕೈ-ಡ್ವೆಲ್ಲರ್ ಸೇರಿದಂತೆ ಬ್ರ್ಯಾಂಡ್‌ನ ಹಲವಾರು ವಾಚ್‌ಗಳನ್ನು ಅವರು ಹೊಂದಿದ್ದಾರೆ. ಸಾಮಾನ್ಯವಾಗಿ ಇದು ಬಿಳಿ ಅಥವಾ ನೀಲಿ ಬಣ್ಣದ ಡಯಲ್‌ನೊಂದಿಗೆ ಬರುತ್ತದೆ, ಆದರೆ ಕೊಹ್ಲಿ ವಿಶೇಷವಾದ ಕಪ್ಪು ಡಯಲ್ ವಾಚ್‌ ಹೊಂದಿದ್ದಾರೆ.ಗಡಿಯಾರದ ಡಯಲ್‌ನಲ್ಲಿ ಆನ್ ಮತ್ತು ಆಫ್ ಸೆಂಟರ್ ಡಿಸ್ಕ್ ಅನ್ನು ಸಹ ಹೊಂದಿದೆ. ಇದು ರೋಟೆಟ್‌ ಮಾಡುಬಹುದಾದ ರಿಂಗ್ ಕಮಾಂಡ್ ಬೆಜೆಲ್ ಅನ್ನು ಸಹ ಹೊಂದಿದೆ.

Panerai Luminor 1950 GMT 42mm:
ಭಾರತದ ನಾಯಕ ಕೊಹ್ಲಿ ಪನೆರೈ ಲುಮಿನರ್ 1950 GMT 42mm ವಾಚ್‌ ಅನ್ನು ಸಹ ಹೊಂದಿದ್ದಾರೆ. ಇದರ ಬೆಲೆ 5 ಲಕ್ಷ ರೂಪಾಯಿ. ಮೆರೂನ್ ಬೆಲ್ಟ್ ಮತ್ತು ಕಪ್ಪು ಡಯಲ್ ಅನ್ನು ಒಳಗೊಂಡಿರುವ ಇದು ವಾಚ್‌ಗೆ ಫಾರ್ಮಲ್‌ ಮತ್ತು ಕ್ಯಾಶುಯಲ್ ಲುಕ್‌ ನೀಡುತ್ತದೆ.

Audemars Piguet Royal Oakey:
ಕೊಹ್ಲಿ ಅವರ ದುಬಾರಿ ವಾಚ್‌ಗಳ ಪಟ್ಟಿಯಲ್ಲಿ ಆಡೆಮಾರ್ಸ್ ಪಿಗೆಟ್ ರಾಯಲ್ ಓಕ್ ವಾಚ್ ಕೂಡ ಸೇರಿದೆ. ಇದು ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಲ್ಪಟ್ಟಿದೆ ಮತ್ತು ಇದರ ಬೆಲೆ 17 ಲಕ್ಷ ರೂ. ಕ್ಯಾಪ್ಟನ್ ಕೊಹ್ಲಿ ಆಗಾಗ್ಗೆ ಈ ವಾಚ್ ಧರಿಸಿ ಕಾಣಿಸಿಕೊಳ್ಳುತ್ತಾರೆ. ಗಡಿಯಾರದ 3 ಗಂಟೆಯ ಗುರುತಿನ ಬಳಿ, ಡೇಟ್‌ ಕಾಣಿಸಿಕೊಳ್ಳುತ್ತದೆ.

Rolex day date:

27 ಲಕ್ಷ ಮೌಲ್ಯದ ರೋಲೆಕ್ಸ್ ಡೇ ಡೇಟ್ 40 18ಕೆ ರೋಸ್ ಗೋಲ್ಡ್ ವಾಚ್‌  ಕೂಡ ಕೊಹ್ಲಿ ತಮ್ಮ ಕಲೆಕ್ಷನ್‌ ಅಲ್ಲಿ ಹೊಂದಿದ್ದಾರೆ. ವಾರದ ದಿನವನ್ನು ಸಂಪೂರ್ಣವಾಗಿ ಚಿತ್ರಿಸುವ ವಿಶ್ವದ ಮೊದಲ ಗಡಿಯಾರವಾಗಿದೆ ಇದು. ಅಲ್ಲದೆ, ವಾಚ್‌ನ ಸಂಪೂರ್ಣ ಬಾಡಿಯನ್ನು 18K ರೋಸ್ ಗೋಲ್ಡ್‌ನಿಂದ ಮಾಡಲಾಗಿದೆ.

click me!