T20 World Cup: NZ vs SCO ಎರಡು ಅಪರೂಪದ ದಾಖಲೆ ಬರೆದ ಮಾರ್ಟಿನ್ ಗಪ್ಟಿಲ್..!

Suvarna News   | Asianet News
Published : Nov 04, 2021, 12:28 PM IST

ದುಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC T20 World Cup) ಸ್ಕಾಟ್ಲೆಂಡ್ ವಿರುದ್ದ ನ್ಯೂಜಿಲೆಂಡ್ ತಂಡದ (New Zealand Cricket) ಆರಂಭಿಕ ಬ್ಯಾಟರ್ ಮಾರ್ಟಿನ್ ಗಪ್ಟಿಲ್‌ (Martin Guptil) ಆಕರ್ಷಕ ಅರ್ಧಶತಕ ಬಾರಿಸಿ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಇದಷ್ಟೇ ಅಲ್ಲದೇ ಸ್ಕಾಟ್ಲೆಂಡ್ ಎದುರು 16 ರನ್‌ಗಳ ರೋಚಕ ಗೆಲುವು ಸಾಧಿಸುವಲ್ಲಿ ಗಪ್ಟಿಲ್ ಪಾತ್ರವಹಿಸಿದ್ದರು. ಇನ್ನು ಇದೇ ಪಂದ್ಯದಲ್ಲಿ ಗಪ್ಟಿಲ್‌ ಎರಡು ಅಪರೂಪದ ದಾಖಲೆ ಬರೆದಿದ್ದಾರೆ. ಅಷ್ಟಕ್ಕೂ ಏನುವು ದಾಖಲೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

PREV
17
T20 World Cup: NZ vs SCO ಎರಡು ಅಪರೂಪದ ದಾಖಲೆ ಬರೆದ ಮಾರ್ಟಿನ್ ಗಪ್ಟಿಲ್..!
new zealand win

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡವು, ಸ್ಕಾಟ್ಲೆಂಡ್ ಎದುರು 16 ರನ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ ಸೆಮೀಸ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

27
india vs new zealand

ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು ಮಾರ್ಟಿನ್ ಗಪ್ಟಿಲ್ ಬಾರಿಸಿದ ಆಕರ್ಷಕ ಅರ್ಧಶತಕದ (93) ನೆರವಿನಿಂದ 5 ವಿಕೆಟ್ ಕಳೆದುಕೊಂಡು 172 ರನ್‌ ಬಾರಿಸಿತ್ತು. ಕಠಿಣ ಗುರಿ ಬೆನ್ನತ್ತಿದ ಸ್ಕಾಟ್ಲೆಂಡ್ 5 ವಿಕೆಟ್ ಕಳೆದುಕೊಂಡು 156 ರನ್‌ ಗಳಿಸಲಷ್ಟೇ ಶಕ್ತವಾಯಿತು. 
 

37
Martin Guptill of New Zealand

ಇನ್ನು ಇದೇ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಾರಾ ಬ್ಯಾಟರ್‌ ಮಾರ್ಟಿನ್‌ ಗಪ್ಟಿಲ್‌ ಅಂತಾರಾಷ್ಟ್ರೀಯ ಟಿ20ಯಲ್ಲಿ 3,000 ರನ್‌ ಪೂರೈಸಿದ ನ್ಯೂಜಿಲೆಂಡ್‌ನ ಮೊದಲ ಹಾಗೂ ವಿಶ್ವದ 2ನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. 

47

ಬುಧವಾರ ಸ್ಕಾಟ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಅವರು ಈ ಮೈಲಿಗಲ್ಲು ತಲುಪಿದರು. ಒಟ್ಟು 105 ಪಂದ್ಯವನ್ನಾಡಿರುವ ಗಪ್ಟಿಲ್‌ 3,069 ರನ್‌ ಗಳಿಸಿದ್ದಾರೆ. ಇದರಲ್ಲಿ 2 ಶತಕ, 18 ಅರ್ಧಶತಕಗಳಿವೆ. 

57

ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಮೊದಲು 3,000 ರನ್‌ ಮೈಲಿಗಲ್ಲು ತಲುಪಿದ್ದರು. ವಿರಾಟ್ ಕೊಹ್ಲಿ ಕೇವಲ 87 ಪಂದ್ಯಗಳನ್ನಾಡಿ 3 ಸಾವಿರ ರನ್‌ ಬಾರಿಸಿದ್ದರು. ಸದ್ಯ ಕಿಂಗ್ ಕೊಹ್ಲಿ ಭಾರತ ಪರ 92 ಪಂದ್ಯಗಳನ್ನಾಡಿ 3,225 ರನ್‌ ಬಾರಿಸಿದ್ದಾರೆ.

67

ಸ್ಕಾಟ್ಲೆಂಡ್ ವಿರುದ್ದದ ಪಂದ್ಯದಲ್ಲಿ 7 ಸಿಕ್ಸರ್‌ ಸಿಡಿಸಿದ ಮಾರ್ಟಿನ್‌ ಗಪ್ಟಿಲ್‌ ಅಂತಾರಾಷ್ಟ್ರೀಯ ಟಿ20ಯಲ್ಲಿ 150 ಸಿಕ್ಸರ್‌ ಸಿಡಿಸಿದ ಮೊದಲ ಆಟಗಾರ ಎಂಬ ದಾಖಲೆಯನ್ನೂ ಬರೆದರು. 

77
Rohit Sharma

ಇನ್ನು ಹಿಟ್‌ಮ್ಯಾನ್ ಖ್ಯಾತಿಯ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ 134 ಸಿಕ್ಸರ್‌ ಬಾರಿಸುವ ಮೂಲಕ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.

click me!

Recommended Stories