ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಮಹಿಳಾ ತಂಡ 8 ಕ್ಯಾಚ್‌ಗಳನ್ನು ಕೈಚೆಲ್ಲಿ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಅವಕಾಶವನ್ನು ಕಳೆದುಕೊಂಡಿತು. ಇದರ ಜತೆಗೆ ಭಾರತದ ಸೆಮೀಸ್ ಹಾದಿಗೂ ಮುಳ್ಳಾಯಿತು.
ಭಾರತ ಮಹಿಳಾ ತಂಡದ ಸೆಮಿಫೈನಲ್ ಪ್ರವೇಶದ ಅವಕಾಶ ಪಾಕಿಸ್ತಾನದ ಕೈಯಲ್ಲಿತ್ತು. ಆದರೆ ಪಾಕಿಸ್ತಾನ ನ್ಯೂಜಿಲೆಂಡ್ ವಿರುದ್ಧ ಸೋತು, ಭಾರತಕ್ಕೂ ಅವಕಾಶ ಕೈತಪ್ಪಿತು.
212
ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ 54 ರನ್‌ಗಳಿಂದ ಸೋತಿತು. ಇದರಿಂದ ನ್ಯೂಜಿಲೆಂಡ್ ಸೆಮಿಫೈನಲ್‌ಗೆ ಪ್ರವೇಶ ಪಡೆಯಿತು. 2016ರ ನಂತರ ನ್ಯೂಜಿಲೆಂಡ್ ಮೊದಲ ಬಾರಿಗೆ ಸೆಮಿಫೈನಲ್ ತಲುಪಿದೆ.
312
ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ತಂಡ ಕಳಪೆ ಪ್ರದರ್ಶನ ನೀಡಿತು. 54 ರನ್‌ಗಳ ಅಂತರದಿಂದ ಸೋಲನುಭವಿಸಿತು. ಇದರಿಂದಾಗಿ ನ್ಯೂಜಿಲೆಂಡ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.
412
ಪಾಕ್ vs ನ್ಯೂಜಿಲೆಂಡ್, ಫಾತಿಮಾ ಸನಾ
'ಎ' ಗುಂಪಿನ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಪಾಕ್ ತಂಡಕ್ಕೆ ಕೂಡಾ ಸೆಮೀಸ್‌ಗೆರುವ ಅವಕಾಶವಿತ್ತು. ಆದರೆ ಮಹತ್ವದ ಪಂದ್ಯದಲ್ಲಿ ಬರೋಬ್ಬರಿ 8 ಕ್ಯಾಚ್ ಕೈಚೆಲ್ಲುವ ಮೂಲಕ ಪಂದ್ಯ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತು.
512
ಮಹಿಳಾ T20 ವಿಶ್ವಕಪ್ 2024
ಒಂದೇ ಓವರ್‌ನಲ್ಲಿ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡವು 3 ಕ್ಯಾಚ್‌ಗಳನ್ನು ಕೈಚೆಲ್ಲಿತು. ಒಟ್ಟು 8 ಕ್ಯಾಚ್‌ಗಳು ಪಾಕ್ ಕೈಜಾರಿತು. ಪಾಕ್ ಮಹಿಳಾ ತಂಡದ ಕ್ಷೇತ್ರ ರಕ್ಷಣೆ ಹೇಗಿತ್ತು ಎಂದರೇ ಪ್ರೇಕ್ಷಕರು ಮಾತ್ರವಲ್ಲ ಕಿವೀಸ್ ಆಟಗಾರ್ತಿಯರ ಮುಖದಲ್ಲೂ ನಗು ಮೂಡುವಂತೆ ಮಾಡಿತು.
612
ಫಾತಿಮಾ ಸನಾ ಕೊನೆಯ ಓವರ್‌ನಲ್ಲಿ 3 ಕ್ಯಾಚ್‌ಗಳನ್ನು ಕೈಚೆಲ್ಲಿದರು. ಆದರೆ ಒಟ್ಟಾರೆಯಾಗಿ 4 ಕ್ಯಾಚ್‌ಗಳನ್ನು ಹಿಡಿದರು. ಪಾಕ್ ಆಟಗಾರ್ತಿಯರ ಕ್ಷೇತ್ರ ರಕ್ಷಣೆ ನೋಡಿದವರಿಗೆ ನಿಜಕ್ಕೂ ಆಶ್ಚರ್ಯ ಎನಿಸುತ್ತಿತ್ತು.
712
ನಿದಾ ದಾರ್ ಓವರ್‌ನಲ್ಲಿ 5 ಕ್ಯಾಚ್‌ಗಳು ಬಂದವು. ಪಾಕಿಸ್ತಾನ 3 ಕ್ಯಾಚ್‌ಗಳನ್ನು ಕೈಚೆಲ್ಲಿ ಕೊನೆಗೆ ಒಂದು ಕ್ಯಾಚ್ ಹಿಡಿಯಿತು.ಪಾಕಿಸ್ತಾನ ತಂಡವು ಬರೋಬ್ಬರಿ 8 ಕ್ಯಾಚ್ ಕೈಚೆಲ್ಲಿದ ಹೊರತಾಗಿಯೂ ನ್ಯೂಜಿಲೆಂಡ್ ತಂಡವು ಕೇವಲ 110 ರನ್ ಗಳಿಸಲಷ್ಟೇ ಶಕ್ತವಾಯಿತು.
812
5ನೇ ಓವರ್‌ನಲ್ಲಿ ಸುಜೀ ಬೇಟ್ಸ್ ಕ್ಯಾಚ್ ನೀಡಿದರು, ವಿಕೆಟ್ ಕೀಪರ್ ಮುನೀಬಾ ಅಲಿ ಕೈಚೆಲ್ಲಿದರು. 5.2ನೇ ಓವರ್‌ನಲ್ಲಿ ಬೇಟ್ಸ್ ಕ್ಯಾಚ್ ಅನ್ನು ನಶ್ರಾ ಸಂದು ಕೈಚೆಲ್ಲಿದರು.
912
7.3ನೇ ಓವರ್‌ನಲ್ಲಿ ಅಮೆಲಿಯಾ ಕೆರ್ ಕ್ಯಾಚ್ ಅನ್ನು ಸೋಹಾಲಿ ಕೈಚೆಲ್ಲಿದರು. 15.5ನೇ ಓವರ್‌ನಲ್ಲಿ ಡಿವೈನ್ ಕ್ಯಾಚ್ ಅನ್ನು ಸಿದ್ರಾ ಅಮೀನ್ ಕೈಚೆಲ್ಲಿದರು.
3 ಅಥವಾ ಅದಕ್ಕಿಂತ ಹೆಚ್ಚು ಕ್ಯಾಚ್ ಹಿಡಿದ ಮೊದಲ ಪಾಕಿಸ್ತಾನಿ ಆಟಗಾರ್ತಿ ಎಂಬ ಹೆಗ್ಗಳಿಕೆ ಫಾತಿಮಾ ಸನಾ ಅವರದು. ಪಾಕಿಸ್ತಾನ 10.4 ಓವರ್‌ಗಳಲ್ಲಿ ಗೆದ್ದಿದ್ದರೆ ಸೆಮಿಗೆ ಹೋಗುತ್ತಿತ್ತು.
1212
ಆದರೆ ಪಾಕಿಸ್ತಾನ 11.4 ಓವರ್‌ಗಳಲ್ಲಿ 56 ರನ್‌ಗಳಿಗೆ ಆಲೌಟ್ ಆಗಿ, ಟೂರ್ನಿಯಿಂದ ಹೊರಬಿತ್ತು. ಭಾರತವೂ ಸಹ ಸೆಮಿಫೈನಲ್ ತಲುಪಲು ವಿಫಲವಾಯಿತು.