2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಮುಂಬರುವ ಫೆಬ್ರವರಿ 07ರಿಂದ ಆರಂಭವಾಗಲಿದ್ದು, ಈ ಚುಟುಕು ವಿಶ್ವಕಪ್ ಸಂಗ್ರಾಮಕ್ಕೆ ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯ ವಹಿಸಿವೆ.
27
ಟಿ20 ವಿಶ್ವಕಪ್ ಆರಂಭಕ್ಕೆ 50 ದಿನ ಬಾಕಿ
ಈ ಹೈವೋಲ್ಟೇಜ್ ಟಿ20 ವಿಶ್ವಕಪ್ ಟೂರ್ನಿಗೆ ಇನ್ನು ಕೇವಲ 50 ದಿನಗಳಷ್ಟೇ ಬಾಕಿ ಉಳಿದಿವೆ. ಹೀಗಿರುವಾಗಲೇ ಪಾಕಿಸ್ತಾನ ಕ್ರಿಕೆಟ್ ಪಾಳಯದಲ್ಲಿ ಹೊಸದೊಂದು ಆತಂಕ ಶುರುವಾಗಿದೆ. ಪಾಕ್ ತಂಡದ ಪ್ರಮುಖ ವೇಗಿಗೆ ಗಾಯವಾಗಿದೆ.
37
ಪಾಕ್ ಪ್ರೀಮಿಯರ್ ವೇಗಿಗೆ ಗಾಯ!
ಹೌದು, ಪಾಕಿಸ್ತಾನದ 'ಪ್ರೀಮಿಯರ್ ವೇಗಿ' ಎಂದೇ ಗುರುತಿಸಿಕೊಂಡಿರುವ ಶಾಹೀನ್ ಅಫ್ರಿದಿ ಗಾಯಗೊಂಡಿರುವುದು ಪಾಕ್ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಶಾಹೀನ್ ಅಫ್ರಿದಿ ಸದ್ಯ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಪಾಲ್ಗೊಂಡಿದ್ದು, ಬ್ರೀಸ್ಬೇನ್ ಹೀಟ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಬ್ರೀಸ್ಬೇನ್ ಹೀಟ್ ಪರ ಕ್ಷೇತ್ರ ರಕ್ಷಣೆ ಮಾಡುವ ವೇಳೆ ಶಾಹೀನ್ ಅಫ್ರಿದಿ ಗಾಯಗೊಂಡಿದ್ದು, ಕುಂಟುತ್ತಲೇ ಮೈದಾನ ತೊರೆದಿದ್ದಾರೆ.
57
ಲಯ ಕಂಡುಕೊಳ್ಳಲು ಪರದಾಡುತ್ತಿರುವ ಶಾಹೀನ್ ಅಫ್ರಿದಿ
ಬಿಗ್ ಬ್ಯಾಶ್ ಲೀಗ್‌ನಲ್ಲಿ ಕಣಕ್ಕಿಳಿದಿರುವ ಶಾಹೀನ್ ಅಫ್ರಿದಿ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಇದರ ನಡುವೆ ಶಾಹೀನ್ ಅಫ್ರಿದಿ ಗಾಯಗೊಂಡಿರುವುದ ಪಾಕ್ ತಂಡದ ತಲೆನೋವು ಹೆಚ್ಚುವಂತೆ ಮಾಡಿದೆ.
67
ಬಿಗ್ ಬ್ಯಾಶ್ ಲೀಗ್‌ನಲ್ಲಿ ಶಾಹೀನ್ ನಿರಾಸೆ
ಕಳೆದ ನಾಲ್ಕು ಬಿಗ್‌ಬ್ಯಾಶ್ ಲೀಗ್ ಪಂದ್ಯಗಳಲ್ಲಿ ಬ್ರಿಸ್ಬೇನ್ ಹೀಟ್ ಪರ 4 ಪಂದ್ಯಗಳನ್ನಾಡಿ 11.19ರ ಎಕನಮಿಯಲ್ಲಿ ರನ್ ನೀಡಿ ಕೇವಲ ಎರಡು ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದರು.
77
ಪಾಕಿಸ್ತಾನಕ್ಕೆ ಹಿನ್ನಡೆ ಸಾಧ್ಯತೆ?
2025ರ ಏಷ್ಯಾಕಪ್ ಟೂರ್ನಿಯಲ್ಲಿ ಶಾಹೀನ್ ಅಫ್ರಿದಿ ಎರಡನೇ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದರು. ಇದೀಗ ಒಂದು ವೇಳೆ ಶಾಹೀನ್ ಅಫ್ರಿದಿ ಗಾಯದಿಂದ ಚೇತರಿಸಿಕೊಳ್ಳದೇ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದರೇ ಪಾಕ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆಯಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.