ಟೀಂ ಇಂಡಿಯಾ ಎದುರು ಸೋಲಿನ ಬೆನ್ನಲ್ಲೇ ಪಾಕ್‌ಗೆ ಡಬಲ್ ಶಾಕ್‌..! ಸ್ಟಾರ್ ಕ್ರಿಕೆಟಿಗ ಏಷ್ಯಾಕಪ್‌ನಿಂದ ಔಟ್

First Published | Sep 13, 2023, 6:27 PM IST

ಕೊಲಂಬೊ(ಸೆ.13): ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಎದುರು ಹೀನಾಯ ಸೋಲು ಅನುಭವಿಸಿರುವ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು, ಸ್ಟಾರ್ ವೇಗಿ ಏಷ್ಯಾಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಭಾರತ ಎದುರು ಹೀನಾಯ ಸೋಲು ಅನುಭವಿಸಿದೆ. ಈ ಮೂಲಕ ಪಾಕ್ ಏಷ್ಯಾಕಪ್ ಫೈನಲ್ ಹಾದಿ ಮತ್ತಷ್ಟು ದುರ್ಗಮ ಎನಿಸಿಕೊಂಡಿದೆ.
 

ಇದೀಗ ಪಾಕಿಸ್ತಾನ ತಂಡವು ಸೆಪ್ಟೆಂಬರ್ 14ರಂದು ನಡೆಯಲಿರುವ ವರ್ಚುವಲ್ ಸೆಮಿಫೈನಲ್ ಎನಿಸಿಕೊಂಡಿರುವ ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಬಾಬರ್ ಅಜಂ ಪಡೆ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
 

Latest Videos


ಹೀಗಿರುವಾಗಲೇ ಪಾಕಿಸ್ತಾನ ತಂಡಕ್ಕೆ ಇದೀಗ ಬಿಗ್ ಶಾಕ್ ಎದುರಾಗಿದ್ದು, ತಂಡದ ಮಾರಕ ವೇಗಿ ನಸೀಂ ಶಾ, ಭುಜದ ಗಾಯಕ್ಕೆ ತುತ್ತಾಗಿದ್ದು, ಇನ್ನುಳಿದ ಏಷ್ಯಾಕಪ್ ಟೂರ್ನಿಯ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

ಭಾರತೆ ಎದುರಿನ ಪಂದ್ಯದ ವೇಳೆಯಲ್ಲೇ ನಸೀಂ ಶಾ ಭುಜದ ನೋವಿಗೆ ಒಳಗಾಗಿದ್ದು, ಏಷ್ಯಾಕಪ್ ಟೂರ್ನಿಯಿಂದ ಪಾಕಿಸ್ತಾನ ತಂಡದಿಂದ ಹೊರಬಿದ್ದಿದ್ದಾರೆ, ಇದೀಗ ನಸೀಂ ಶಾ ಬದಲಿಗೆ ವೇಗಿ ಜಮಾನ್ ಖಾನ್ ಪಾಕ್ ತಂಡ ಕೂಡಿಕೊಂಡಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ನಸೀಂ ಶಾ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಆರೋಗ್ಯದ ಕುರಿತಂತೆ ನಮ್ಮ ವೈದ್ಯಕೀಯ ಸಿಬ್ಬಂದಿ ತೀವ್ರ ನಿಗಾ ಇಟ್ಟಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ನಸೀಂ ಶಾ ಅವರ ಈ ಗಾಯದ ಸಮಸ್ಯೆ ಮುಂಬರುವ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡಕ್ಕೆ ಕಾಡಬಾರದು ಎನ್ನುವ ಉದ್ದೇಶದಿಂದ ಮುನ್ನೆಚ್ಚರಿಕಾ ಕ್ರಮವಾಗಿ ಯುವ ವೇಗಿಗೆ ಏಷ್ಯಾಕಪ್ ಟೂರ್ನಿಯಿಂದ ವಿಶ್ರಾಂತಿ ನೀಡಲಾಗಿದೆ. 
 

ಇನ್ನು ಭಾರತ ವಿರುದ್ದ ಮೀಸಲು ದಿನದಂದು ನಡೆದ ಪಂದ್ಯದಲ್ಲಿ ಮತ್ತೋರ್ವ ಪಾಕ್ ವೇಗಿ ಹ್ಯಾರಿಸ್ ರೌಫ್ ಬೌಲಿಂಗ್ ಮಾಡಿರಲಿಲ್ಲ. ಹೀಗಿದ್ದೂ ರೌಫ್ ಚೇತರಿಸಿಕೊಳ್ಳುತ್ತಿರುವುದರಿಂದ ತಂಡದಲ್ಲೇ ಮುಂದುವರೆದಿದ್ದಾರೆ.

ಭಾರತ ನೀಡಿದ್ದ 357 ರನ್ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು 128 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ 228 ರನ್‌ಗಳ ಹೀನಾಯ ಸೋಲು ಅನುಭವಿಸಿತ್ತು. ಪಾಕಿಸ್ತಾನ ಪರ ಹ್ಯಾರಿಸ್ ರೌಫ್ ಹಾಗೂ ನಸೀಂ ಶಾ ಇಬ್ಬರೂ ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿದಿರಲಿಲ್ಲ.
 

click me!