Published : Jun 10, 2024, 06:16 PM ISTUpdated : Jun 11, 2024, 09:31 AM IST
ನ್ಯೂಯಾರ್ಕ್: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ನಿರಾಶಾದಾಯಕ ಆರಂಭ ಪಡೆದಿದ್ದು, ಮೊದಲೆರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಹೀಗಂದ ಮಾತ್ರಕ್ಕೆ ಪಾಕಿಸ್ತಾನ ತಂಡದ ಸೂಪರ್ 8 ಬಾಗಿಲು ಅಧಿಕೃತವಾಗಿ ಬಂದ್ ಆಗಿಲ್ಲ. ಎಲ್ಲಾ ಅಂದುಕೊಂಡಂತೆ ಆದರೆ ಪಾಕಿಸ್ತಾನಕ್ಕೆ ಈಗಲೂ ಸೂಪರ್ 8 ಹಂತಕ್ಕೇರುವ ಅವಕಾಶ ಇದೆ. ಅದು ಹೇಗೆ ಅನ್ನೋದನ್ನು ನೋಡೋಣ ಬನ್ನಿ.
2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲಿಸ್ಟ್ ಪಾಕಿಸ್ತಾನ ತಂಡವು 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಿರೀಕ್ಷಿತ ಆರಂಭ ಪಡೆಯಲು ವಿಫಲವಾಗಿದೆ. ಮೇಲ್ನೋಟಕ್ಕೆ ಬಲಿಷ್ಠ ತಂಡವಾಗಿ ಗುರುತಿಸಿಕೊಂಡ ಬಾಬರ್ ಅಜಂ ಪಡೆ, ಮೈದಾನದಲ್ಲಿ ಲಯ ಕಳೆದುಕೊಂಡಿದೆ.
210
ಪಾಕಿಸ್ತಾನ ತಂಡವು ತಾನಾಡಿದ ಮೊದಲ ಪಂದ್ಯದಲ್ಲಿ ಆತಿಥೇಯ ಯುಎಸ್‌ಎ ತಂಡದೆದುರು ಮುಗ್ಗರಿಸಿ ಮುಖಭಂಗ ಅನುಭವಿಸಿತ್ತು. ಇದಾದ ಬಳಿಕ ಭಾನುವಾರ ಸಾಂಪ್ರದಾಯಿಕ ಎದುರಾಳಿ ಭಾರತ ಎದುರು 6 ರನ್ ರೋಚಕ ಸೋಲು ಅನುಭವಿಸಿದೆ.
310
ನಸೀಂ ಶಾ ಹಾಗೂ ಹ್ಯಾರಿಸ್ ರೌಫ್ ಮಾರಕ ದಾಳಿ ನಡೆಸಿ ಬಲಿಷ್ಠ ಭಾರತ ತಂಡವನ್ನು ಕೇವಲ 119 ರನ್‌ಗಳಿಗೆ ಆಲೌಟ್ ಮಾಡಿದರೂ, ಪಾಕಿಸ್ತಾನದ ಬ್ಯಾಟರ್‌ಗಳು ಸುಲಭ ಗುರಿ ಬೆನ್ನತ್ತಲು ವಿಫಲವಾಗುವ ಮೂಲಕ ಪಂದ್ಯವನ್ನು ಕೈಚೆಲ್ಲಿದರು.
410
ಸದ್ಯ ಪಾಕಿಸ್ತಾನ ತಂಡವು ತಾನಾಡಿದ ಎರಡೂ ಪಂದ್ಯ ಸೋಲುವ ಮೂಲಕ ಸೂಪರ್ 8 ಹಾದಿಯನ್ನು ಸಾಕಷ್ಟು ದುರ್ಗಮಗೊಳಿಸಿಕೊಂಡಿದೆ. ಹಾಗಂತ ಶಾಶ್ವತವಾಗಿ ಪಾಕ್ ತಂಡದ ಸೂಪರ್ 8ರ ಕನಸು ಬಂದ್ ಆಗಿಲ್ಲ.
510
ಹೌದು, ಬಾಬರ್ ಅಜಂ ಪಡೆ ಇನ್ನುಳಿದ ಎರಡು ಪಂದ್ಯಗಳನ್ನು ಕೆನಡಾ ಹಾಗೂ ಐರ್ಲೆಂಡ್ ಎದುರು ಆಡಲಿದೆ. ಈ ಎರಡೂ ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಜಯಿಸಿದರೆ, ಇದೇ ವೇಳೆಯಲ್ಲಿ ಯುಎಸ್‌ಎ ಹಾಗೂ ಕೆನಡಾ ತಂಡಗಳು ಇನ್ನುಳಿದ ತಮ್ಮ ಪಾಲಿನ ಪಂದ್ಯ ಸೋತರೇ ಪಾಕ್ ಸೂಪರ್ 8 ಪ್ರವೇಶದ ಕನಸಿಗೆ ಬಲ ಬರಲಿದೆ.
610
ಹೀಗಾದಲ್ಲಿ ಪಾಕಿಸ್ತಾನ ಹಾಗೂ ಯುಎಸ್‌ಎ ತಂಡಗಳ ಬಳಿ ತಲಾ 4 ಅಂಕಗಳು ಇರಲಿವೆ. ಆಗ ನೆಟ್ ರನ್‌ರೇಟ್ ಆಧಾರದಲ್ಲಿ ಯಾವ ತಂಡ ಉತ್ತಮವಾಗಿರುತ್ತದೋ ಆ ತಂಡ 'ಎ' ಗುಂಪಿನಲ್ಲಿ ಎರಡನೇ ತಂಡವಾಗಿ ಸೂಪರ್ 8 ಹಂತಕ್ಕೇರಲಿದೆ.
710
ಪಾಕಿಸ್ತಾನ ತಂಡದ ನೆಟ್ ರನ್‌ರೆಟ್ ಸದ್ಯ ಪಾತಾಳಕ್ಕೆ(-0.150) ಆಗಿದ್ದು, ಯುಎಸ್‌ಎ ತಂಡದ ನೆಟ್ ರನ್‌ರೇಟ್(+0.626) ಇದೆ. ಹೀಗಾಗಿ ಪಾಕ್ ಇನ್ನುಳಿದ ಎರಡು ಪಂದ್ಯಗಳನ್ನು ಅತಿದೊಡ್ಡ ಅಂತರದಲ್ಲಿ ಜಯಿಸುವುದಷ್ಟೇ ಅಲ್ಲದೇ ಉಳಿದ ತಂಡಗಳ ಫಲಿತಾಂಶ ತಮ್ಮ ಪರವಾಗಿ ಬಂದರಷ್ಟೇ ಸೂಪರ್ 8 ಹಂತಕ್ಕೇರಲು ಸಾಧ್ಯವಾಗಲಿದೆ.
810
ಒಂದು ವೇಳೆ ಯುಎಸ್‌ಎ ಹಾಗೂ ಭಾರತ ತಂಡಗಳು ತಮ್ಮ ಪಾಲಿನ ಇನ್ನುಳಿದ ಎರಡು ಪಂದ್ಯಗಳ ಪೈಕಿ ತಲಾ ಒಂದೊಂದು ಪಂದ್ಯ ಜಯಿಸಿದರೂ, ಪಾಕಿಸ್ತಾನ ತಂಡದ ಈ ಬಾರಿಯ ಟಿ20 ವಿಶ್ವಕಪ್ ಅಭಿಯಾನ್ ಗ್ರೂಪ್ ಹಂತದಲ್ಲೇ ಮುಕ್ತಾಯವಾಗಲಿದೆ.
910
ಒಂದು ವೇಳೆ ಭಾರತ ಸಾಥ್ ಕೊಟ್ಟರೇ, ಈಗಲೂ ಪಾಕ್ ಸೂಪರ್-8 ತಲುಪಬಹುದು. ಹೌದು, ಭಾರತ ತಂಡವು ತನ್ನ ಪಾಲಿನ ಎರಡೂ ಪಂದ್ಯವನ್ನು ಜಯಿಸಿದರೆ, ಪಾಕ್ ಮುಂದಿನ ಹಂತಕ್ಕೇರುವ ಅವಕಾಶಕ್ಕೆ ಬಲ ಬರಲಿದೆ.
1010
ಅದೇ ಭಾರತ ಒಂದು ಪಂದ್ಯ ಸೋತು ಮತ್ತೊಂದು ಪಂದ್ಯ ಗೆದ್ದರೇ, ಭಾರತವೇನೋ ಸೂಪರ್ 8 ಹಂತಕ್ಕೆ ಅನಾಯಾಸವಾಗಿ ಲಗ್ಗೆಯಿಡಲಿದೆ. ಆದರೆ ಪಾಕಿಸ್ತಾನದ ಸೂಪರ್ 8 ಹಾದಿ ಬಂದ್ ಆಗಲಿದೆ.