Rohit Sharma Double Century: ಹಿಟ್‌ ಮ್ಯಾನ್‌ ಮೂರನೇ ಏಕದಿನ ದ್ವಿಶತಕಕ್ಕೆ ನಾಲ್ಕರ ಸಂಭ್ರಮ..!

Suvarna News   | Asianet News
Published : Dec 13, 2021, 03:56 PM ISTUpdated : Dec 13, 2021, 03:58 PM IST

ಬೆಂಗಳೂರು: ಭಾರತ ಕ್ರಿಕೆಟ್ ತಂಡದ (Indian Cricket Team) ಸ್ಪೋಟಕ ಆರಂಭಿಕ ಬ್ಯಾಟರ್‌ ರೋಹಿತ್ ಶರ್ಮಾ(Rohit Sharma), ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕ ಬಾರಿಸಿದ ಏಕೈಕ ಕ್ರಿಕೆಟಿಗ ಎನಿಸಿದ್ದಾರೆ. ರೋಹಿತ್ ಶರ್ಮಾ ಮೂರನೇ ದ್ವಿಶತಕ (3rd double century) ಬಾರಿಸಿ ಇಂದಿಗೆ ನಾಲ್ಕು ವರ್ಷಗಳು ಕಳೆದಿವೆ. 2017ರ ಡಿಸೆಂಬರ್ 13ರಂದು ಮುಂಬೈ ಮೂಲದ ರೋಹಿತ್ ವೃತ್ತಿಜೀವನದ ಮೂರನೇ ಏಕದಿನ ದ್ವಿಶತಕ ಬಾರಿಸಿದ್ದರು. ಇದರ ಒಂದು ಝಲಕ್ ಇಲ್ಲಿದೆ ನೋಡಿ

PREV
17
Rohit Sharma Double Century: ಹಿಟ್‌ ಮ್ಯಾನ್‌ ಮೂರನೇ ಏಕದಿನ ದ್ವಿಶತಕಕ್ಕೆ ನಾಲ್ಕರ ಸಂಭ್ರಮ..!

ಭಾರತ ಕ್ರಿಕೆಟ್‌ ತಂಡದ ಹಿಟ್‌ ಮ್ಯಾನ್‌ ಖ್ಯಾತಿಯ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಒಂದಕ್ಕಿಂತ ಹೆಚ್ಚುಬಾರಿ ದ್ವಿಶತಕ ಬಾರಿಸಿದ ಏಕೈಕ ಬ್ಯಾಟರ್‌ ಎನಿಸಿದ್ದಾರೆ. ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಮೂರು ಬಾರಿ ದ್ವಿಶತಕ ಸಿಡಿಸ್ದಾರೆ.

27

ರೋಹಿತ್ ಶರ್ಮಾ, ತಮ್ಮ ಮೂರನೇ ದ್ವಿಶತಕವನ್ನು ಇಂದಿಗೆ ನಾಲ್ಕು ವರ್ಷಗಳ ಹಿಂದೆ, ಅಂದರೆ ಡಿಸೆಂಬರ್ 13, 2017ರಂದು ಶ್ರೀಲಂಕಾ ವಿರುದ್ದ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಬಾರಿಸಿದ್ದರು. ದ್ವೀಪರಾಷ್ಟ್ರದ ಎದುರು 153 ಎಸೆತಗಳಲ್ಲಿ ರೋಹಿತ್ 208 ರನ್ ಚಚ್ಚಿದ್ದರು.

37

ರೋಹಿತ್ ಶರ್ಮಾ ಬಾರಿಸಿದ ಮೂರನೇ ದ್ವಿಶತಕದಲ್ಲಿ 13 ಆಕರ್ಷಕ ಬೌಂಡರಿಗಳು ಹಾಗೂ 12 ಮುಗಿಲೆತ್ತರದ ಸಿಕ್ಸರ್‌ಗಳು ಸೇರಿದ್ದವು. ಆ ಪಂದ್ಯದಲ್ಲಿ ಹಿಟ್‌ ಮ್ಯಾನ್‌ ಲಂಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ್ದರು.

47

ಮೊದಲಿಗೆ ಮಂದಗತಿಯ ಬ್ಯಾಟಿಂಗ್ ನಡೆಸಿದ್ದ ರೋಹಿತ್ ಶರ್ಮಾ, ಆ ಬಳಿಕ ಪಿಚ್‌ಗೆ ಹೊಂದಿಕೊಳ್ಳುತ್ತಿದ್ದಂತೆ ಅಕ್ಷರಶಃ ಅಬ್ಬರಿಸಿದ್ದರು. ಎರಡಂಕಿ ಮೊತ್ತ ತಲುಪಲು 20ಕ್ಕೂ ಹೆಚ್ಚು ಎಸೆತಗಳನ್ನು ಬಳಸಿಕೊಂಡ ರೋಹಿತ್, ಅರ್ಧಶತಕ ಬಾರಿಸಲು 65 ಎಸೆತಗಳನ್ನು ಎದುರಿಸಿದ್ದರು.

57

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ರೋಹಿತ್ ಶರ್ಮಾ 115 ಎಸೆತಗಳನ್ನು ಎದುರಿಸಿ ಏಕದಿನ ಕ್ರಿಕೆಟ್ ವೃತ್ತಿಜೀವನದ 16ನೇ ಶತಕ ಪೂರೈಸಿದ್ದರು. ಶತಕದ ಬಳಿಕ ರೋಹಿತ್ ಆರ್ಭಟ ಶುರು ಮಾಡಿದ್ದರು.

67

ಇದಾದ ಬಳಿಕ ರೋಹಿತ್ ಶರ್ಮಾ ಶತಕದಿಂದ ದ್ವಿಶತಕ ಬಾರಿಸಲು ಕೇವಲ 36 ಎಸೆತಗಳನ್ನು ತೆಗೆದುಕೊಂಡಿದ್ದರು. ಇದರಲ್ಲಿ ಸ್ಪೋಟಕ 11 ಸಿಕ್ಸರ್‌ಗಳು ಸೇರಿದ್ದವು ಎನ್ನುವುದು ಮತ್ತೊಂದು ವಿಶೇಷ.

77

ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯುಕ್ತಿಕ ಸ್ಕೋರ್ ಗಳಿಸಿದ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. ರೋಹಿತ್ 2014ರಲ್ಲಿ ಕೋಲ್ಕತದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಶ್ರೀಲಂಕಾ ವಿರುದ್ದ ನಡೆದ ಪಂದ್ಯದಲ್ಲಿ 264 ರನ್‌ ಬಾರಿಸಿದ್ದರು. ಈ ದಾಖಲೆ ಇಂದಿಗೂ ಹಿಟ್ ಮ್ಯಾನ್ ಹೆಸರಿನಲ್ಲಿದೆ. 

Read more Photos on
click me!

Recommended Stories