ಬೆಂಗಳೂರು: 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಟೂರ್ನಿಗೆ ಈಗಿನಿಂದಲೇ ಸಿದ್ದತೆಗಳು ಆರಂಭವಾಗಿವೆ. 2022ರ ಐಪಿಎಲ್ ಟೂರ್ನಿಯಲ್ಲಿ ಹೊಸದಾಗಿ ಎರಡು ತಂಡಗಳು ಪಾಲ್ಗೊಳ್ಳುವುದರಿಂದ ಟೂರ್ನಿ ಆರಂಭಕ್ಕೂ ಮುನ್ನ ಮೆಗಾ ಹರಾಜು (IPL Mega Auction) ನಡೆಯಲಿದೆ. ಮೆಗಾ ಹರಾಜಿನಲ್ಲಿ ಎಲ್ಲಾ 10 ಫ್ರಾಂಚೈಸಿಗಳು ಈ ಐದು ವಿದೇಶಿ ಆಲ್ರೌಂಡರ್‌ಗಳನ್ನು (Overseas All Rounder) ಖರೀದಿಸಲು ಸಾಕಷ್ಟು ಪೈಪೋಟಿ ನಡೆಸುವ ಸಾಧ್ಯತೆಯಿದೆ. ಅಷ್ಟಕ್ಕೂ ಯಾರು ಆ ಐವರು ಆಲ್ರೌಂಡರ್‌ಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಇಂಗ್ಲೆಂಡ್ ಮೂಲದ ಪ್ರತಿಭಾನ್ವಿತ ಆಲ್ರೌಂಡರ್ ಸ್ಯಾಮ್ ಕರ್ರನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ರೀಟೈನ್ ಮಾಡಿಕೊಂಡಿಲ್ಲ. ಹೀಗಾಗಿ ಸ್ಯಾಮ್ ಈ ಬಾರಿಯ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ಆಸರೆಯಾಗುವ ಕ್ಷಮತೆ ಸ್ಯಾಮ್ ಕರ್ರನ್ ಅವರಿಗಿದೆ.
210
2019ರಲ್ಲಿ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದ ಕರ್ರನ್, 2020 ಹಾಗೂ 2021ರಲ್ಲಿ ಸಿಎಸ್‌ಕೆ ತಂಡದಲ್ಲಿ ಅಬ್ಬರಿಸಿದ್ದರು. ಯಾವುದೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಹಾಗೂ ಪವರ್ ಪ್ಲೇ ನಲ್ಲಿ ಪರಿಣಾಮಕಾರಿ ದಾಳಿ ನಡೆಸುವ ಸ್ಯಾಮ್ ಕರ್ರನ್ ಅವರನ್ನು ಖರೀದಿಸಲು ಮೆಗಾ ಹರಾಜಿನಲ್ಲಿ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.
310
4. ಶಕೀಬ್ ಅಲ್ ಹಸನ್
ಬಾಂಗ್ಲಾದೇಶ ತಂಡದ ಅನುಭವಿ ಆಲ್ರೌಂಡರ್ ಶಕೀಬ್ ಬಗ್ಗೆ ಕ್ರಿಕೆಟ್ ಅಭಿಮಾನಿಗಳಿಗೆ ಹೆಚ್ಚಿಗೆ ವಿವರಿಸುವ ಅಗತ್ಯವೇ ಇಲ್ಲ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡುವ ಸಾಮರ್ಥ್ಯ ವಿರುವ ಶಕೀಬ್ ಮೇಲೆ ಹಲವು ಫ್ರಾಂಚೈಸಿಗಳು ಕಣ್ಣಿಟ್ಟಿವೆ.
410
ಕೆಕೆಅರ್ ತಂಡವು ಎರಡು ಬಾರಿ ಐಪಿಎಲ್ ಚಾಂಪಿಯನ್ ಆಗುವಲ್ಲಿ ಶಕೀಬ್ ತನ್ನದೇ ಆದ ಕಾಣಿಕೆ ನೀಡಿದ್ದಾರೆ. ಇದುವರೆಗೂ ಶಕೀಬ್ 71 ಐಪಿಎಲ್ ಪಂದ್ಯಗಳನ್ನಾಡಿ 793 ರನ್ ಬಾರಿಸಿದ್ದಾರೆ ಹಾಗೂ ಬೌಲಿಂಗ್‌ನಲ್ಲಿ 63 ವಿಕೆಟ್ ಪಡೆದಿದ್ದಾರೆ. ಹೀಗಾಗಿ ಶಕೀಬ್ ಕೂಡಾ ದೊಡ್ಡ ಮೊತ್ತಕ್ಕೆ ಯಾವುದಾದರೊಂದು ತಂಡ ಕೂಡಿಕೊಳ್ಳಬಹುದು.
510
3. ಲಿಯಾಮ್ ಲಿವಿಂಗ್‌ಸ್ಟೋನ್:
ಇಂಗ್ಲೆಂಡ್‌ನ ಮತ್ತೋರ್ವ ಆಲ್ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಕೂಡಾ ಇತ್ತೀಚಿನ ದಿನಗಳಲ್ಲಿ ಆಲ್ರೌಂಡ್ ಆಟದ ಮೂಲಕ ಗಮನ ಸೆಳೆಯುತ್ತಿದ್ದಾರೆ. 2019ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ಲಿವಿಂಗ್‌ಸ್ಟೋನ್ ಕೆಲವು ಮ್ಯಾಚ್ ವಿನ್ನಿಂಗ್ ಪ್ರದರ್ಶನ ತೋರಿದ್ದಾರೆ
610
ಟಿ20 ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಆಲ್ರೌಂಡರ್ ಎನ್ನುವಂತೆ ರೂಪುಗೊಳ್ಳುತ್ತಿರುವ ಲಿವಿಂಗ್‌ಸ್ಟೋನ್ ಸ್ಪೋಟಕ ಬ್ಯಾಟಿಂಗ್ ಹಾಗೂ ಉಪಯುಕ್ತ ಸ್ಪಿನ್ ಬೌಲಿಂಗ್ ಮೂಲಕ ಆಸರೆಯಾಗಬಲ್ಲ ಲಿವಿಂಗ್‌ಸ್ಟೋನ್ ಖರೀದಿಗೂ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.
710
2. ಬೆನ್ ಸ್ಟೋಕ್ಸ್
ಇಂಗ್ಲೆಂಡ್‌ನ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಕೂಡಾ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದು ಬೌಲಿಂಗ್‌ನಲ್ಲೂ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಬಲ್ಲರು. 2017ರ ಐಪಿಎಲ್ ಹರಾಜಿನಲ್ಲಿ ಬೆನ್ ಸ್ಟೋಕ್ಸ್ 14.5 ಕೋಟಿ ರುಪಾಯಿಗೆ ಹರಾಜಾಗುವ ಮೂಲಕ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದರು.
810
2017ರಲ್ಲೇ ಸ್ಟೋಕ್ಸ್ 316 ರನ್ ಹಾಗೂ 12 ವಿಕೆಟ್ ಕಬಳಿಸಿದ್ದರು. ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಕ್ಷಮತೆ ಹೊಂದಿರುವ ಬೆನ್ ಸ್ಟೋಕ್ಸ್ ಅವರನ್ನು ಖರೀದಿಸಲು ವಿವಿಧ ಫ್ರಾಂಚೈಸಿಗಳು ನಾ ಮುಂದು, ತಾ ಮುಂದು ಎಂದು ಪೈಪೋಟಿ ನಡೆಸುವ ಸಾಧ್ಯತೆಯಿದೆ.
910
1. ಜೇಸನ್ ಹೋಲ್ಡರ್
ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ದಯನೀಯ ವೈಫಲ್ಯ ಅನುಭವಿಸಿದರೂ ಸಹಾ, ವೆಸ್ಟ್ ಇಂಡೀಸ್ ಆಲ್ರೌಂಡರ್ ಜೇಸನ್ ಹೋಲ್ಡರ್ ತಮ್ಮ ಆಲ್ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಸಿಕ್ಕ ಸೀಮಿತ ಅವಕಾಶದಲ್ಲೇ ಹೋಲ್ಡರ್ ಮಿಂಚಿನ ಪ್ರದರ್ಶನ ತೋರಿದ್ದರು.
1010
ಕಳೆದೆರಡು ಆವೃತ್ತಿಗಳಿಂದ ಸನ್‌ರೈಸರ್ಸ್ ಪರ ಕೇವಲ 15 ಪಂದ್ಯಗಳನ್ನಾಡಿ 30 ವಿಕೆಟ್ ಕಬಳಿಸಿದ್ದರು. ಇನ್ನು ಬ್ಯಾಟಿಂಗ್‌ನಲ್ಲೂ ಒಳ್ಳೆಯ ಫಿನಿಶರ್ ಆಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಹೋಲ್ಡರ್ ಖರೀದಿಗೆ ಐಪಿಎಲ್ ಫ್ರಾಂಚೈಸಿಗಳ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.