ಐಪಿಎಲ್ 2025ರ ಟಾಪ್ 10 ದುಬಾರಿ ಆಟಗಾರರು:
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡಗಳು 2025ರ ಸೀಸನ್‌ಗಾಗಿ ರೀಟೈನ್ ಮಾಡಿಕೊಂಡ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಹೆನ್ರಿಕ್ ಕ್ಲಾಸೆನ್ ಅತಿ ಹೆಚ್ಚು ಸಂಭಾವನೆ ಪಡೆದ ಆಟಗಾರರಾಗಿದ್ದಾರೆ. ಅವರನ್ನು ₹23 ಕೋಟಿಗೆ ಆರೆಂಜ್ ಆರ್ಮಿ ಉಳಿಸಿಕೊಂಡಿದೆ. ಟಾಪ್ 10 ಹೆಚ್ಚು ಸಂಭಾವನೆ ಪಡೆದ ಆಟಗಾರರ ವಿವರಗಳು ಇಲ್ಲಿವೆ ನೋಡಿ
1. ಹೆನ್ರಿಕ್ ಕ್ಲಾಸೆನ್ (SRH)
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ದ ಹೆನ್ರಿಚ್ ಕ್ಲಾಸೆನ್ ಅವರಿಗೆ ಆರೆಂಜ್ ಆರ್ಮಿ 23 ಲಕ್ಷ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿದೆ
2. ವಿರಾಟ್ ಕೊಹ್ಲಿ (RCB)
ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೊಹ್ಲಿಯನ್ನು RCB ₹21 ಕೋಟಿಗೆ ಉಳಿಸಿಕೊಂಡಿದೆ. ಕಳೆದ ಆವೃತ್ತಿಯಲ್ಲಿ ಕೊಹ್ಲಿ ಗರಿಷ್ಠ ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು.
3. ನಿಕೋಲಸ್ ಪೂರನ್(LSG)
ವೆಸ್ಟ್ ಇಂಡೀಸ್ ಮೂಲದ ಪಾಕೆಟ್ ಡೈನಮೊ ಎಂದೇ ಕರೆಸಿಕೊಳ್ಳುವ ನಿಕೋಲಸ್ ಪೂರನ್ ಅವರನ್ನು ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು 21 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿದೆ. ಪೂರನ್, ಲಖನೌ ತಂಡದ ನಾಯಕರಾಗುವ ಸಾಧ್ಯತೆಯಿದೆ.
4. ಯಶಸ್ವಿ ಜೈಸ್ವಾಲ್ (RR)
ಪ್ರತಿಭಾನ್ವಿತ ಎಡಗೈ ಸ್ಪೋಟಕ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು 18 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿದೆ.
5. ಸಂಜು ಸ್ಯಾಮ್ಸನ್ (RR)
ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರಿಗೆ ರಾಯಲ್ಸ್ ಫ್ರಾಂಚೈಸಿ 18 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿದೆ.
6. ರಶೀದ್ ಖಾನ್(GT)
ಆಫ್ಘಾನಿಸ್ತಾನ ಮೂಲದ ಮಾರಕ ಲೆಗ್‌ಸ್ಪಿನ್ನರ್ ರಶೀದ್ ಖಾನ್ ಅವರನ್ನು ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು 18 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿದೆ.
7. ಪ್ಯಾಟ್ ಕಮಿನ್ಸ್(SRH)
ಆಸ್ಟ್ರೇಲಿಯಾ ಮೂಲದ ಮಾರಕ ವೇಗಿ ಪ್ಯಾಟ್ ಕಮಿನ್ಸ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು 18 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿದೆ.
8. ರವೀಂದ್ರ ಜಡೇಜಾ (CSK)
ಚೆನ್ನೈ ಸೂಪರ್ ಕಿಂಗ್ಸ್ ತಂಡದ ತಾರಾ ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು ಸಿಎಸ್‌ಕೆ ಫ್ರಾಂಚೈಸಿಯು ಬರೋಬ್ಬರಿ 18 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿದೆ.
9. ರುತುರಾಜ್ ಗಾಯಕ್ವಾಡ್ (CSK)
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಾಲಿ ನಾಯಕ ಋತುರಾಜ್ ಗಾಯಕ್ವಾಡ್ ಅವರನ್ನು ಸಿಎಸ್‌ಕೆ ಫ್ರಾಂಚೈಸಿ 18 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿದೆ.
10. ಜಸ್ಪ್ರೀತ್ ಬುಮ್ರಾ(MI)
ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಅಸ್ತ್ರ ಜಸ್ಪ್ರೀತ್ ಬುಮ್ರಾ ಅವರನ್ನು ಫ್ರಾಂಚೈಸಿಯು 18 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿದೆ