IPL ನಲ್ಲಿ ಸಿಗದ ಅವಕಾಶ; ವಿದೇಶದತ್ತ ಮುಖ ಮಾಡಿದ ಸ್ಟಾರ್ ಸ್ಪಿನ್ನರ್..!

First Published Jun 27, 2020, 6:22 PM IST

ಐಪಿ​ಎಲ್‌ನಲ್ಲಿ ಆಡಲು ಅನ​ರ್ಹ​ರಾದ ಮುಂಬೈ ಮೂಲದ 48 ವರ್ಷದ ಲೆಗ್‌ ಸ್ಪಿನ್ನರ್‌ ಪ್ರವೀಣ್‌ ತಾಂಬೆ, ಕೆರಿ​ಬಿ​ಯನ್‌ ಪ್ರೀಮಿ​ಯರ್‌ ಲೀಗ್‌ (ಸಿ​ಪಿ​ಎಲ್‌) ಟಿ20 ಟೂರ್ನಿ​ಯಲ್ಲಿ ಆಡುವ ಅವ​ಕಾಶ ಪಡೆ​ದಿ​ದ್ದಾರೆ. 

ವಿದೇಶಿ ಲೀಗ್‌ನಲ್ಲಿ ಆಡಿದ ಭಾರತದ ಆಟಗಾರರಿಗೆ ಬಿಸಿಸಿಐ ಇಂಡಿಯನ್ ಪ್ರೀಮಿಯರ್ ಲೀಗ್ ಆಡಲು ಅವಕಾಶ ನೀಡುವುದಿಲ್ಲ. ಹೀಗಿದ್ದೂ ಆಟಗಾರರ ಹರಾಜಿನಲ್ಲಿ ತಾಂಬೆಯನ್ನು 20 ಲಕ್ಷ ರುಪಾಯಿ ಮೂಲ ಬೆಲೆಗೆ ಕೋಲ್ಕತ್ ನೈಟ್ ರೈಡರ್ಸ್ ತಂಡ ಖರೀದಿಸಿತ್ತು. ಆದರೆ ಆ ಬಳಿಕ ಬಿಸಿಸಿಐ ತಾಂಬೆ ಹರಾಜನ್ನು ರದ್ದು ಮಾಡಿತ್ತು.

ವಿದೇಶಿ ಟೂರ್ನಿಯತ್ತ ಮುಖ ಮಾಡಿದ ಅನುಭವಿ ಸ್ಪಿನ್ನರ್ ಪ್ರವೀಣ್ ತಾಂಬೆ
undefined
ಈ ವರ್ಷದ ಐಪಿಎಲ್‌ ಆಟ​ಗಾ​ರರ ಹರಾ​ಜಿ​ನಲ್ಲಿ ತಾಂಬೆಯನ್ನು ಕೋಲ್ಕತಾ ನೈಟ್‌ ರೈಡ​ರ್ಸ್ (ಕೆ​ಕೆ​ಆರ್‌) 20 ಲಕ್ಷ ರುಪಾಯಿ ನೀಡಿ ಖರೀ​ದಿ​ಸಿತ್ತು.
undefined
ಇದರೊಂದಿಗೆ ಐಪಿಎಲ್ ಆಟಗಾರರ ಹರಾಜಿನಲ್ಲಿ ಹರಾಜಾದ ಅತಿ ಹಿರಿಯ ಆಟಗಾರ ಎನಿಸಿದ್ದರು.
undefined
ಆದರೆ ತಾಂಬೆ 2018ರಲ್ಲಿ ಅಬು​ಧಾ​ಬಿ​ಯಲ್ಲಿ ನಡೆ​ದಿದ್ದ ಟಿ10 ಲೀಗ್‌ನಲ್ಲಿ ಆಡಿ​ದ್ದ​ರಿಂದ ಬಿಸಿ​ಸಿಐ, ಅವ​ರನ್ನು ಐಪಿ​ಎಲ್‌ನಿಂದ ಹೊರ​ಹಾ​ಕಿತು.
undefined
2013ರಿಂದ 2016ರ ಅವಧಿಯಲ್ಲಿ 3 ಐಪಿಎಲ್ ಫ್ರಾಂಚೈಸಿ ಪರ ತಾಂಬೆ ಕಣಕ್ಕಿಳಿದಿದ್ದರು.
undefined
ರಾಜಸ್ಥಾನ ರಾಯಲ್ಸ್, ಗುಜರಾತ್ ಲಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಪರ ತಾಂಬೆ ಬೌಲಿಂಗ್ ಮಾಡಿದ್ದಾರೆ
undefined
ಐಪಿಎಲ್‌ನಲ್ಲಿ ತಾಂಬೆ ಒಟ್ಟು 33 ಪಂದ್ಯಗಳನ್ನಾಡಿ 28 ವಿಕೆಟ್ ಕಬಳಿಸಿದ್ದಾರೆ.
undefined
ಕಳೆದ ವಾರ ನಡೆದ ಆಟ​ಗಾ​ರರ ಆಯ್ಕೆ ಪ್ರಕ್ರಿಯೆಯಲ್ಲಿ ತಾಂಬೆಗೆ, ಕೆಕೆ​ಆರ್‌ ಮಾಲಿ​ಕ​ರದ್ದೇ ಆದ ಟ್ರಿನಿ​ಬ್ಯಾಗೋ ನೈಟ್‌ರೈಡರ್ಸ್ ತಂಡವನ್ನು ಪ್ರತಿ​ನಿ​ಧಿ​ಸುವ ಅವ​ಕಾಶ ಸಿಕ್ಕಿದೆ.
undefined
ಆಗಸ್ಟ್ 18ರಿಂದ ಸೆಪ್ಟೆಂಬರ್ 10ರವರೆಗೂ 8ನೇ ಆವೃತ್ತಿ ಕೆರಿ​ಬಿ​ಯನ್‌ ಪ್ರೀಮಿ​ಯರ್‌ ಲೀಗ್‌ ನಿಗ​ದಿ​ಯಾ​ಗಿದೆ.
undefined
click me!