ಐಪಿಎಲ್ 2026ಕ್ಕೂ ಮುನ್ನ ರೋಹಿತ್ ಶರ್ಮಾಗೆ ಹಾರ್ದಿಕ್ ಪಾಂಡ್ಯ ವಾರ್ನಿಂಗ್ ಕೊಟ್ಟಿದ್ದಾರೆ ಅನ್ನೋ ಸುದ್ದಿ ವೈರಲ್ ಆಗಿದೆ. ಇದರಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಏನಾಗ್ತಿದೆ ಅಂತಾ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. ಮುಂಬೈ ತಂಡದಿಂದ ರೋಹಿತ್‌ನನ್ನು ಕೈಬಿಡ್ತಾರಾ?
ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಸೀಸನ್ ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ (MI) ತಂಡದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳಿವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ಆಗ್ತಿದೆ. ಅದರಲ್ಲೂ, ಹಾಲಿ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ, ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾಗೆ ವಾರ್ನಿಂಗ್ ಕೊಟ್ಟಿದ್ದಾರೆ ಅನ್ನೋ ಸುದ್ದಿ ನೆಟ್ಟಿಗರಲ್ಲಿ ಸಂಚಲನ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಅಧಿಕೃತವಾಗಿ ಸ್ಪಷ್ಟನೆ ನೀಡಿದೆ.
26
ವೈರಲ್ ಪೋಸ್ಟ್‌ನಲ್ಲಿ ಏನಿದೆ?
ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ 'X' ನಲ್ಲಿ ಯೂಸರ್ ಒಬ್ಬರು ಮಾಡಿದ ಪೋಸ್ಟ್ ಕ್ರಿಕೆಟ್ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. 'ಐಪಿಎಲ್ 2026ಕ್ಕೂ ಮುನ್ನ ರೋಹಿತ್ ಶರ್ಮಾಗೆ ಹಾರ್ದಿಕ್ ಪಾಂಡ್ಯ ಸೀರಿಯಸ್ ವಾರ್ನಿಂಗ್ ಕೊಟ್ಟಿದ್ದಾರೆ. ಈ ಸೀಸನ್‌ನಲ್ಲಿ ರೋಹಿತ್ ಉತ್ತಮ ಪ್ರದರ್ಶನ ನೀಡದಿದ್ದರೆ ಸಹಿಸುವುದಿಲ್ಲ ಎಂದು ಮ್ಯಾನೇಜ್‌ಮೆಂಟ್‌ಗೆ ಹಾರ್ದಿಕ್ ಸ್ಪಷ್ಟಪಡಿಸಿದ್ದಾರೆ. ಕಳೆದ 10-12 ವರ್ಷಗಳಿಂದ ರೋಹಿತ್ ಪ್ರದರ್ಶನದ ಬಗ್ಗೆ ಮ್ಯಾನೇಜ್‌ಮೆಂಟ್‌ಗೆ ಅಸಮಾಧಾನವಿದೆ. ದೊಡ್ಡ ಸಂಬಳ ತೆಗೆದುಕೊಂಡರೂ, ರೋಹಿತ್ ಪ್ರತಿ ಸೀಸನ್‌ಗೆ ಕೇವಲ 200-300 ರನ್ ಗಳಿಸುತ್ತಿದ್ದಾರೆ, ಅದೂ 120 ಸ್ಟ್ರೈಕ್ ರೇಟ್‌ನಲ್ಲಿ' ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.
36
ಮುಂಬೈ ಇಂಡಿಯನ್ಸ್ ಖಡಕ್ ಉತ್ತರ
ಈ ಸುಳ್ಳು ಪ್ರಚಾರಕ್ಕೆ ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್ ತಕ್ಷಣವೇ ತಿರುಗೇಟು ನೀಡಿದೆ. ಆ ಪೋಸ್ಟ್ ಅನ್ನು ಕೋಟ್ ಮಾಡಿ 'ಕುಚ್ ಭೀ' (ಏನೇನೋ ಮಾತಾಡಬೇಡಿ) ಅಂತಾ ಹಾರ್ದಿಕ್ ಪಾಂಡ್ಯಗೆ ಸಂಬಂಧಿಸಿದ ಒಂದು GIF ಫೈಲ್ ಅನ್ನು ಸೇರಿಸಿದೆ. ಈ ಪೋಸ್ಟ್ ಮೂಲಕ, ರೋಹಿತ್ ಮತ್ತು ಹಾರ್ದಿಕ್ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಆ ವರದಿಗಳೆಲ್ಲವೂ ಸುಳ್ಳು ಎಂದು ಫ್ರಾಂಚೈಸಿ ಸ್ಪಷ್ಟಪಡಿಸಿದೆ. 2024ರಲ್ಲಿ ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಕ್ಯಾಪ್ಟನ್ ಆದಾಗಿನಿಂದ ಅಭಿಮಾನಿಗಳಿಂದ ಟೀಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಇಂತಹ ವದಂತಿಗಳು ಹಬ್ಬುತ್ತಿವೆ.
ಕಳೆದ ಕೆಲವು ಸೀಸನ್‌ಗಳಿಂದ ರೋಹಿತ್ ಶರ್ಮಾ ಬ್ಯಾಟಿಂಗ್ ಫಾರ್ಮ್ ಚರ್ಚೆಯಲ್ಲಿದೆ. 2013ರ ನಂತರ ರೋಹಿತ್ ಒಂದೇ ಒಂದು ಸೀಸನ್‌ನಲ್ಲೂ 500 ರನ್‌ಗಳ ಗಡಿ ದಾಟಿಲ್ಲ. ಐಪಿಎಲ್ 2025ರ ಸೀಸನ್‌ನಲ್ಲಿ ರೋಹಿತ್ 15 ಮ್ಯಾಚ್‌ಗಳಲ್ಲಿ 29.86 ಸರಾಸರಿಯಲ್ಲಿ 418 ರನ್ ಗಳಿಸಿದ್ದರು. ಇದರಲ್ಲಿ ನಾಲ್ಕು ಅರ್ಧಶತಕಗಳು ಸೇರಿವೆ. ಆದರೆ, ಮುಂಬೈ ಇಂಡಿಯನ್ಸ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ರೋಹಿತ್ ಹೆಸರಿನಲ್ಲಿದೆ. ಅವರು 227 ಮ್ಯಾಚ್‌ಗಳಲ್ಲಿ 29.52 ಸರಾಸರಿಯಲ್ಲಿ 5,876 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಮತ್ತು 39 ಅರ್ಧಶತಕಗಳಿವೆ. ಒಟ್ಟಾರೆ ಐಪಿಎಲ್ ಕೆರಿಯರ್‌ನಲ್ಲಿ ರೋಹಿತ್ 272 ಮ್ಯಾಚ್‌ಗಳಲ್ಲಿ 7,046 ರನ್ ಪೂರೈಸಿದ್ದಾರೆ.
56
ಇಂಪ್ಯಾಕ್ಟ್ ಪ್ಲೇಯರ್ ರೂಲ್ ಬಗ್ಗೆ ಭಜ್ಜಿ, ಆಕಾಶ್ ಚೋಪ್ರಾ ಮಾತು
ರೋಹಿತ್ ಶರ್ಮಾರನ್ನು ಕೇವಲ ಬ್ಯಾಟಿಂಗ್‌ಗೆ ಮಾತ್ರವಲ್ಲದೆ, ಫೀಲ್ಡಿಂಗ್‌ನಲ್ಲೂ ಬಳಸಿಕೊಳ್ಳಬೇಕು ಎಂದು ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಮತ್ತು ಆಕಾಶ್ ಚೋಪ್ರಾ ಸಲಹೆ ನೀಡಿದ್ದಾರೆ. 'ರೋಹಿತ್ ಶರ್ಮಾ ಅವರಂತಹ ನಾಯಕ ಮೈದಾನದಲ್ಲಿ ಇರಬೇಕು. ಕಷ್ಟದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲು ಹಾರ್ದಿಕ್ ಪಾಂಡ್ಯಗೆ ರೋಹಿತ್ ಅನುಭವ ಸಹಾಯ ಮಾಡುತ್ತದೆ' ಎಂದು ಹರ್ಭಜನ್ ಹೇಳಿದ್ದಾರೆ. 'ರೋಹಿತ್ ಸದ್ಯ ತುಂಬಾ ಫಿಟ್ ಆಗಿದ್ದಾರೆ. ಒಬ್ಬ ಓಪನರ್ 20 ಓವರ್‌ಗಳ ಕಾಲ ಡಗೌಟ್‌ನಲ್ಲಿ ಕುಳಿತು ನಂತರ ಬ್ಯಾಟಿಂಗ್‌ಗೆ ಬರುವುದು ಕಷ್ಟ. ಅವರು 40 ಓವರ್‌ಗಳ ಕಾಲ ಮೈದಾನದಲ್ಲೇ ಇರಬೇಕು' ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
66
ಮಾರ್ಚ್ 29ರಂದು ಮೊದಲ ಪಂದ್ಯ
ಐಪಿಎಲ್ 2026ರ ಸೀಸನ್ ಮಾರ್ಚ್ 28, ಶನಿವಾರದಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದೊಂದಿಗೆ ಆರಂಭವಾಗಲಿದೆ. ಮುಂಬೈ ಇಂಡಿಯನ್ಸ್ ತನ್ನ ಮೊದಲ ಪಂದ್ಯವನ್ನು ಮಾರ್ಚ್ 29ರಂದು ತವರಿನ ವಾಂಖೆಡೆ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ಆಡಲಿದೆ. 2020ರಲ್ಲಿ ಕೊನೆಯ ಬಾರಿಗೆ ಟೈಟಲ್ ಗೆದ್ದಿದ್ದ ಮುಂಬೈ, ಈ ಬಾರಿ ಹಾರ್ದಿಕ್ ನಾಯಕತ್ವದಲ್ಲಿ 6ನೇ ಟ್ರೋಫಿಯ ಮೇಲೆ ಕಣ್ಣಿಟ್ಟಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.