ಐಪಿಎಲ್ ಮುಗಿದ ಬೆನ್ನಲ್ಲೇ ಧೋನಿ ಹೇರ್‌ಸ್ಟೈಲ್, 2007 ಟಿ20 ವಿಶ್ವಕಪ್ ನೆನಪಿಸಿದ ಥಲಾ!

First Published | May 27, 2024, 8:28 PM IST

ಐಪಿಎಲ್ 2024 ಟೂರ್ನಿ ಮುಗಿದ ಬೆನ್ನಲ್ಲೇ ಧೋನಿ ಹೊಸ ಹೇರ್‌ಸ್ಟೈಲ್ ಮೂಲಕ ಮಿಂಚಿದ್ದಾರೆ. 2024ರ ಐಪಿಎಲ್ ಟೂರ್ನಿಗೆ ಲಾಂಗ್ ಹೇರ್ ಮೂಲಕ ಎಂಟ್ರಿಕೊಟ್ಟಿದ್ದ ಧೋನಿ ಇದೀಗ 2007ರ ಟಿ20 ವಿಶ್ವಕಪ್ ಟೂರ್ನಿಯ ಹೇರ್‌ಸ್ಟೈಲ್ ಮೂಲಕ ಮಿಂಚಿದ್ದಾರೆ.
 

ದಿಗ್ಗಜ ಕ್ರಿಕೆಟಿಗ ಎಂಎಸ್ ಧೋನಿ ಈ ಬಾರಿ ಐಪಿಎಲ್ ಟೂರ್ನಿಗೆ ಉದ್ದನೇಯ ಹೇರ್‌ಸ್ಟೈಲ್ ಮೂಲಕ ಎಂಟ್ರಿಕೊಟ್ಟು ಅಭಿಮಾನಿಗಳ ರಂಜಿಸಿದ್ದರು. ಇದೀಗ ಧೋನಿ ತಮ್ಮ ಲಾಂಗ್ ಹೇರ್‌ಸ್ಟೈಲ್‌ನಲ್ಲಿ ಕೆಲ ಬದಲಾವಣೆ ಮಾಡಿದ್ದಾರೆ.
 

2024ರ ಐಪಿಎಲ್ ಟೂರ್ನಿ ಮುಗಿದ ಬೆನ್ನಲ್ಲೇ ಧೋನಿ ಹೊಸ ಹೇರ್‌ಸ್ಟೈಲ್ ಮೂಲಕ ಕಾಣಿಸಿಕೊಂಡಿದ್ದಾರೆ. ಖ್ಯಾತ ಹೇರ್‌ಸ್ಟೈಲ್ ಡಿಸೈನರ್ ಅಲೀಮ್ ಹಕೀಮ್ ಧೋನಿಗೆ ಹೊಸ ಹೇರ್‌ಸ್ಟೈಲ್ ಮಾಡಿದ್ದಾರೆ.
 

Tap to resize

ಸದ್ಯ ಧೋನಿ ಹೇರ್‌ಸ್ಟೈಲ್ 2007ರ ಟಿ20 ವಿಶ್ವಕಪ್ ಟೂರ್ನಿ ವೇಳೆ ಧೋನಿ ಮಾಡಿದ್ದ ಹೇರ್‌ಸ್ಟೈಲ್‌ಗೆ ಹೋಲಿಕೆ ಇದೆ. ಈ ಕುರಿತು ಸ್ಟೈಲೀಶ್ ಫೋಟೋ ಅಲಿಮ್ ಹಕೀಮ್ ಹಂಚಿಕೊಂಡಿದ್ದಾರೆ.

ಪ್ರತಿ ಐಪಿಎಲ್ ಟೂರ್ನಿಗೆ ಧೋನಿ ಹೊಸ ಹೊಸ ಹೇರ್‌ಸ್ಟೈಲ್ ಮೂಲಕ ಕಾಣಿಸಿಕೊಂಡಿದ್ದಾರೆ. 2024ರಲ್ಲಿ ಧೋನಿಯ ಹೇರ್‌ಸ್ಟೈಲ್ ಫ್ಯಾನ್ಸ್‌ಗೆ ಹೊಸ ಹುರುಪು ನೀಡಿತ್ತು.
 

ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ಲಾಂಗ್ ಹೇರ್ ಮೂಲಕ. ಧೋನಿ ಹೇರ್‌ಸ್ಟೈಲ್ ಯುವ ಸಮೂಹದ ನೆಚ್ಚಿನ ಹೇರ್‌ಸ್ಟೈಲ್ ಆಗಿತ್ತು.
 

ಚೊಚ್ಚಲ ಟಿ20 ವಿಶ್ವಕಪ್ ಟ್ರೋಫಿ ಬಳಿಕ ಧೋನಿ ಲಾಂಗ್ ಹೇರ್‌ಗೆ ಕತ್ತರಿ ಹಾಕಿದ್ದರು. ಶಾರ್ಟ್ ಹೇರ್‌ಸ್ಟೈಲ್ ಕಾಣಿಸಿಕೊಂಡು ಅಚ್ಚರಿ ನೀಡಿದ್ದರು.
 

ಸ್ಪೈಕ್ ಸ್ಟೈಲ್‌ನಲ್ಲೂ ಧೋನಿ ಕಾಣಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ಐಪಿಎಲ್ ಟೂರ್ನಿಗಾಗಿ ಧೋನಿ ಮೊಹ್ವಾಕ್ ಹೇರ್‌ಸ್ಟೈಲ್‌ನಲ್ಲೂ ಧೋನಿ ಕಾಣಿಸಿಕೊಂಡಿದ್ದಾರೆ.
 

2011ರ ವಿಶ್ವಕಪ್ ಗೆಲುವಿನ ಬಳಿಕ ಧೋನಿ ಬಾಲ್ಡ್ ಆಗಿ ಕಾಣಿಸಿಕೊಂಡಿದ್ದರು. ಪ್ರತಿ ಟೂರ್ನಿ, ಪ್ರತಿ ಐಪಿಎಲ್ ಟೂರ್ನಿಗೂ ಧೋನಿ ಹೇರ್‌ಸ್ಟೈಲ್ ಭಾರಿ ಸಂಚಲನ ಮೂಡಿಸಿದೆ. 
 

Latest Videos

click me!