ಪತಿಗೆ ಚಿಯರ್‌ ಮಾಡಲು ಮಗಳ ಜೊತೆ ಅಹಮದಾಬಾದ್‌ ತಲುಪಿದ ಅನುಷ್ಕಾ ಶರ್ಮ?

First Published | Feb 27, 2021, 5:05 PM IST

ಟೀಂ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಕಳೆದ ತಿಂಗಳು ಹೆಣ್ಣುಮಗುವಿಗೆ ಪೋಷಕರಾಗಿದ್ದಾರೆ. ಈ ಸಮಯದಲ್ಲಿ ಪತ್ನಿ ಹಾಗೂ ಮಗುವಿನ ಜೊತೆಯಿರಲು ಕೊಹ್ಲಿ ರಜೆ ತೆಗೆದುಕೊಂಡಿದ್ದರು. ಈಗ ವಿರಾಟ್‌ ತಮ್ಮ ಪೇಟರ್ನಿಟಿ ಲೀವ್‌ ಮುಗಿಸಿ  ಮತ್ತೆ ತಂಡವನ್ನು ಸೇರಿಕೊಂಡಿದ್ದಾರೆ. ಪ್ರಸ್ತುತ ಇಂಡಿಯಾ ಮತ್ತು ಇಂಗ್ಲೆಂಡ್‌ ಟೆಸ್ಟ್‌ ಸೀರಿಸ್‌ ನೆಡೆಯುತ್ತಿದೆ . ಈ ನಡುವೆ ನಟಿ ಅನುಷ್ಕಾ ಶರ್ಮ  ಮಗಳು ವಮಿಕಾ ಜೊತೆ ಪತಿಯನ್ನು ಚಿಯರ್‌ ಮಾಡಲು ಅಹಮದಾಬಾದ್‌ಗೆ ತೆರೆಳಿದ್ದಾರೆ ಎಂದು ವರದಿಯಾಗಿದೆ. ಇಲ್ಲಿದೆ ವಿವರ.

ಕಳೆದ ತಿಂಗಳು ಮಗಳ ಜನಿಸಿರುವ ವಿಷಯವನ್ನು ಸೋಷಿಯಲ್‌ ಮೀಡಿಯಾ ಮೂಲಕ ಫ್ಯಾನ್ಸ್‌ ಜೊತೆ ಹಂಚಿಕೊಂಡಿದ್ದರು ವಿರಾಟ್‌ ಕೊಹ್ಲಿ.
ನಂತರ ಅನುಷ್ಕಾ ಕೊಹ್ಲಿ ದಂಪತಿಗಳು ಮಗುವಿಗೆ ವಮಿಕಾ ಎಂದು ಹೆಸರಿಟ್ಟಿರುವ ವಿಷಯವನ್ನು ಮಗುವಿನ ಫೋಟೋದೊಂದಿಗೆ ಶೇರ್‌ಮಾಡಿಕೊಂಡಿದ್ದರು.
Tap to resize

ಈಗ ವಿರಾಟ್ ಕೊಹ್ಲಿಯನ್ನು ಹುರಿದುಂಬಿಸಲು ಅನುಷ್ಕಾ ಶರ್ಮಾ ಬೇಬಿ ವಮಿಕಾ ಅವರೊಂದಿಗೆ ಮುಂಬೈನಿಂದ ಹೊರಟಿದ್ದಾರೆ ಎಂದು ಕಳೆದ ದಿನಗಳಲ್ಲಿ ವರದಿಯಾಗಿತು.
ಈ ವರದಿ ಇಂಗ್ಲೆಂಡ್‌ ಹಾಗೂ ಇಂಡಿಯಾದ ಮೂರನೇ ಟೆಸ್ಟ್‌ ಮ್ಯಾಚ್‌ ಸಮಯದ್ದಾಗಿದೆ.
ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ತಮ್ಮ ಹೆಣ್ಣು ಮಗು ವಮಿಕಾ ಜೊತೆ ಸೇರಿಕೊಂಡು ತಂಡಕ್ಕೆ ಹುರಿದುಂಬಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಬಾಲಿವುಡ್ ಫೋಟೋಗ್ರಾಫರ್‌ ವೈರಲ್ ಭಯಾನಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಶರ್ಮಾ ಆಗಮನದ ಸುದ್ದಿ ಹಂಚಿಕೊಂಡಿದ್ದಾರೆ.
ಅವರ ಪೋಸ್ಟ್ ಹೀಗಿದೆ - 'ಅನುಷ್ಕಾ ಶರ್ಮಾ ಅವರು ಇಂದು ಬೆಳಗ್ಗೆ ಅಹಮದಾಬಾದ್‌ಗೆ ಬೇಬಿ ವಮಿಕಾ ಜೊತೆಗೆ ಮೋಟಾರ್‌ಸ್ಟೇಡಿಯಂನಲ್ಲಿ ನಡೆದ ಈ ಐತಿಹಾಸಿಕ ಪಂದ್ಯದ ಭಾಗವಾಗಿದ್ದಾರೆ'.
ವರದಿಗಳ ಪ್ರಕಾರ, ತಾಯಿ ಮತ್ತು ಮಗಳು ಇಬ್ಬರೂ ಅಹಮದಾಬಾದ್ ತಲುಪಿದ್ದು ಫ್ಯಾನ್ಸ್‌ ಮಗುವಿನ ಫಸ್ಟ್‌ಲುಕ್‌ಗಾಗಿ ಕಾತುರರಾಗಿದ್ದಾರೆ.

Latest Videos

click me!