ದುರಂತ ಅಂತ್ಯ ಕಂಡ ಧೋನಿ ಫಸ್ಟ್ ಲವ್, ಸಾಕ್ಷಿಗಿಂತ ಮೊದಲು ಥಲಾ ಹೃದಯ ಕದ್ದಿದ್ದು ಯಾರು?

First Published | Oct 26, 2024, 4:05 PM IST

ಎಂಎಸ್ ಧೋನಿ ಹಾಗೂ ಸಾಕ್ಷಿ ಧೋನಿ ನಡುವಿನ ಲವ್ ಸ್ಟೋರಿ ಬಹುತೇಕರಿಗೆ ತಿಳಿದಿದೆ. ಆದರೆ ಸಾಕ್ಷಿಗಿಂತ ಮೊದಲು ಧೋನಿ ಸೀರಿಯಸ್ ಲವ್‌ನಲ್ಲಿ ಬಿದ್ದಿದ್ದರು. ಆದರೆ ಧೋನಿ ಮನಸ್ಸು ಕದ್ದ ಹುಡುಗಿ ದುರಂತ ಅಂತ್ಯ ಕಂಡಿದ್ದಳು. ಈ ಮೂಲಕ ಧೋನಿ ಮೊದಲ ಪ್ರೀತಿ ಅಂತ್ಯಕಂಡಿತ್ತು. 

ಉದ್ದ ಕೂದಲು, ಭರ್ಜರಿ ಸಿಕ್ಸರ್ ಮೂಲಕ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಧೂಳೆಬ್ಬಿಸಿದ್ದರು. 2004ರಲ್ಲಿ ಧೋನಿ ಟೀಂ ಇಂಡಿಯಾ ಪದಾರ್ಪಣೆ ಮಾಡಿದ ಬಳಿಕ ಎಲ್ಲೆಲ್ಲೂ ಧೋನಿ ಹೆಸರೇ ಕೇಳಿಬರತೊಡಗಿತು. ಟೀಂ ಇಂಡಿಯಾದಲ್ಲಿ ಮಿಂಚಲು ತೊಡಗಿದ ಧೋನಿಗೆ ಪ್ರೀತಿಯೊಂದು ಶುರುವಾಗಿತ್ತು. ಈ ಪ್ರೀತಿ ಗಾಢವಾಗಿತ್ತು. ಮದುವೆ ಆಗುವುದು ಕೂಡ ಪಕ್ಕಾ ಆಗಿತ್ತು. ಆದರೆ ಇದು ಸಾಕ್ಷಿ ಅಲ್ಲ. ಬಾಲಿವುಡ್ ನಟಿಯರೂ ಇಲ್ಲ. ಈಕೆಯ ಹೆಸರು ಪ್ರಿಯಾಂಕಾ ಝಾ.

ಟೀಂ ಇಂಡಿಯಾಗೆ ಪಂದ್ಯಕ್ಕಾಗಿ ವಿಮಾನ ಪ್ರಯಾಣದ ವೇಳೆ ಧೋನಿ ಪಕ್ಕದಲ್ಲೇ ಬಂದು ಕುಳಿತ ಯುವತಿಯೇ ಪ್ರಿಯಾಂಕಾ ಝಾ. ಉದ್ಯಮಿಯಾಗಿದ್ದ ಪ್ರಿಯಾಂಕಾ ಝಾ ಚಿಕ್ಕ ವಯಸ್ಸಿನಲ್ಲೇ ಯಶಸ್ಸು ಕಂಡಿದ್ದರು. ವಿಮಾನದಲ್ಲಿ ಧೋನಿ ಹಾಗೂ ಪ್ರಿಯಾಂಕಾ ಮೊದಲು ಭೇಟಿಯಾಗಿದ್ದರು. ಪ್ರಿಯಾಂಕಾ ಝಾ ಸಚಿನ್ ತೆಂಡೂಲ್ಕರ್ ಅಭಿಮಾನಿ. ಅದೇ ವಿಮಾನದಲ್ಲಿ ಧೋನಿ ಹಾಗೂ ಟೀಂ ಇಂಡಿಯಾ ಹಾಜರಿತ್ತು. 

Tap to resize

ಸಚಿನ್ ಅಟೋಗ್ರಾಫ್ ಪಡೆಯಲು ಬಯಸಿದ್ದ ಪ್ರಿಯಾಂಕಾ ಝಾಗೆ ಧೋನಿ ನೆರವು ನೀಡಿದ್ದರು. ಈ ಭೇಟಿಯಲ್ಲೇ ಇಬ್ಬರು ಮನಸ್ಸಿನಲ್ಲಿ ತಳಮಳ ಆರಂಭಗೊಂಡಿತ್ತು. ಮೊದಲ ಭೇಟಿಯಲ್ಲಿ ಫೋನ್ ನಂಬರ್ ಎಕ್ಸ್‌ಚೇಂಜ್ ಆಗಿತ್ತು. ಬಳಿಕ ಫೋನ್ ಕಾಲ್, ಮಾತುಕತೆ ಶುರುವಾಗಿದೆ. ಸರಣಿ ನಡುವೆ ಸಿಗುವ ವಿಶ್ರಾಂತಿ ದಿನಗಳಲ್ಲಿ ಧೋನಿ ನೇರವಾಗಿ ಪ್ರಿಯಾಂಕಾ ಝಾ ಭೇಟಿ ಮಾಡುತ್ತಿದ್ದರು. ಒಂದಷ್ಟು ಕಡೆ ರಹಸ್ಯವಾಗಿ ತಿರುಗಾಡಿದ್ದರು. ಧೋನಿ ಹಾಗೂ ಪ್ರಿಯಾಂಕಾ ಝಾ ನಡುವಿನ ಪ್ರೀತಿ ಗಾಢವಾಗಿತ್ತು. 

ಸರಿಸುಮಾರು 2 ವರ್ಷಗಳ ಕಾಲ ಧೋನಿ ಹಾಗೂ ಪ್ರಿಯಾಂಕಾ ಝಾ ಪ್ರೀತಿ ಯಾವುದೇ ಅಡೆ ತಡೆ ಇಲ್ಲದ ಸಾಗಿತ್ತು. ಆದರೆ ವ್ಯಾಲೆಂಟೈನ್ ದಿನ ಸಮೀಪಿಸುತ್ತಿದ್ದಂತೆ ಪ್ರಿಯಾಂಕಾ ಝಾ ಧೋನಿಗೆ ಸ್ಮರಣೀಯ ಗಿಫ್ಟ್ ನೀಡಲು ಬಯಸಿದ್ದಳು. ಕಾರಿನಲ್ಲಿ ಧೋನಿಗೆ ಗಿಫ್ಟ್ ಖರೀದಿಸಲು ತೆರಳುತ್ತಿದ್ದ ವೇಳೆ ನಡೆದ ಭೀಕರ ಅಪಘಾತದಲ್ಲಿ ಪ್ರಿಯಾಂಕಾ ಝಾ ಸ್ಥಳದಲ್ಲೇ ಮೃತಪಟ್ಟಿದ್ದಳು. ಈ ಮಾಹಿತಿ ಧೋನಿಗೆ ತಿಳಿದಾಗ ಬಿಕ್ಕಿ ಬಿಕ್ಕಿ ಅತ್ತಿದ್ದರು. 

ಧೋನಿಯ ಮೊದಲ ಪ್ರೀತಿ ಕುರಿತು ಬಾಲಿವುಡ್‌ನಲ್ಲಿ ಬಿಡುಗಡೆಯಾದ ಎಂಎಸ್ ಧೋನಿ ದಿ ಅನ್‌ಟೋಲ್ಡ್ ಸ್ಟೋರಿ ಸಿನಿಮಾದಲ್ಲೂ ತೋರಿಸಲಾಗಿದೆ. ಧೋನಿಯ ಮೊದಲ ಲವ್ ಪ್ರಿಯಾಂಕಾ ಝಾ ಪಾತ್ರದಲ್ಲಿ ದಿಶಾ ಪಟಾನಿ ಅಭಿನಯಿಸಿದ್ದರು. ಇನ್ನು ಸಾಕ್ಷಿ ಧೋನಿ ಪಾತ್ರದಲ್ಲಿ ಕಿಯಾರ ಅಡ್ವಾಣಿ ಅಭಿನಯಿಸಿದ್ದರು.

ಮೊದಲ ಪ್ರೀತಿ ಬಳಿಕ ಹಲವು ವರ್ಷಗಳ ಕಾಲ ಧೋನಿ ನೋವಿನಿಂದ ಹೊರಬಂದಿರಲಿಲ್ಲ. ನಿಧಾನವಾಗಿ ಈ ನೋವಿನಿಂದ ಹೊರಬಂದ ಬಳಿಕ ಸಾಕ್ಷಿ ಜೊತೆ ಪ್ರೀತಿ ಶುರುವಾಗಿತ್ತು. 2010ರ ಜುಲೈ 4 ರಂದು ಧೋನಿ ಸಾಕ್ಷಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಈ ದಂಪತಿಗೆ ಝೀವಾ ಧೋನಿ ಮಗಳಿದ್ದಾಳೆ. ಟೀಂ ಇಂಡಿಯಾದಿಂದ ನಿವೃತ್ತಿಯಾಗಿರುವ ಧೋನಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತಾರ ಅನ್ನೋ ಕುತೂಹಲ ಈಗಲೂ ಮನೆ ಮಾಡಿದೆ.

Latest Videos

click me!