ಮೊಟೆರಾ ಕ್ರೀಡಾಂಗಣಕ್ಕೆ ಮೋದಿ ಹೆಸರು; ಭುಗಿಲೆದ್ದ ವಿವಾದಕ್ಕೆ ಕೇಂದ್ರ ಸ್ಪಷ್ಟನೆ!

First Published | Feb 24, 2021, 8:20 PM IST

ವಿಶ್ವದ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಅಹಮ್ಮದಾಬಾದ್‌ನಲ್ಲಿನ ಮೊಟೆರಾ ಕ್ರೀಡಾಂಗಣವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉದ್ಘಾಟನೆ ಮಾಡಿದ್ದಾರೆ. ಇಷ್ಟೇ ಅಲ್ಲ ಈ ಮೈದಾನಕ್ಕೆ ನರೇಂದ್ರ ಮೋದಿ ಎಂದು ಮರುನಾಮಕರಣ ಮಾಡಲಾಗಿದೆ. ಇದು ಭಾರಿ ವಿವಾದಕ್ಕೆ ಕಾರಣವಾಗಿದೆ. ಇದು ಸರ್ದಾರ್ ಪಟೇಲ್‌ಗೆ ಮಾಡಿದ ಅವಮಾನ ಎಂಬ ಕೂಗು ಕೇಳಿಬಂದಿತ್ತು. ಇದೀಗ ಕೇಂದ್ರ ಸ್ಪಷ್ಟನೆಗೆ ವಿವಾದ ತಣ್ಣಗಾಗಿದೆ.

ಇಷ್ಟು ದಿನ ಕ್ರಿಕೆಟ್ ಕಾಶಿ ಎಂದು ಲಾರ್ಡ್ಸ್ ಮೈದಾನಕ್ಕೆ ಕರೆಯಲಾಗುತ್ತಿತ್ತು. ಇದೀಗ ಈ ಕ್ರಿಕೆಟ್ ಕಾಶಿ ಇಂಗ್ಲೆಂಡ್‌ನಲ್ಲಿ ಭಾರತಕ್ಕೆ ಶಿಫ್ಟ್ ಆಗಿದೆ. ಕಾರಣ ಅಹಮ್ಮದಾಬಾದ್‌ನಲ್ಲಿ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನ ಉದ್ಘಾಟನೆಯಾಗಿದೆ. ಆದರೆ ಅದರ ಬೆನ್ನಲ್ಲೇ ವಿವಾದವೂ ಹುಟ್ಟಿಕೊಂಡಿದೆ.
undefined
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೊಟೆರಾ ಕ್ರೀಡಾಂಗಣವನ್ನು ಉದ್ಘಾಟಿಸಿದ್ದಾರೆ. ಈ ಸಮಾರಂಭದಲ್ಲಿ ಗೃಹ ಸಚಿವ ಅಮಿತ್ ಶಾ ಕೂಡ ಪಾಲ್ಗೊಂಡಿದ್ದರು. ಇನ್ನು ಮೊಟೆರಾ ಕ್ರೀಡಾಂಗಣವನ್ನು ನರೇಂದ್ರ ಮೋದಿ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಲಾಗಿದೆ. ಇದೇ ವಿವಾದಕ್ಕೆ ಕಾರಣವಾಗಿದೆ.
undefined
Tap to resize

ನರೇಂದ್ರ ಮೋದಿ ಕ್ರೀಡಾಂಗಣ ಎಂದು ಮರುನಾಮಕರಣ ಮಾಡೋ ಮೂಲಕ ಸರ್ದಾರ ಪಟೇಲ‌ಗೆ ಅವಮಾನ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
undefined
ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಅಹಮ್ಮದಾಬಾದ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಹೆಸರು ಸರ್ದಾರ್ ಪಟೇಲ್ ಎಂಬುದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವೇಡಕರ್ ಹೇಳಿದ್ದಾರೆ.
undefined
ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಇತರ ಕ್ರೀಡೆಗಳ ಕ್ರೀಡಾಂಗಣಗಳಿವೆ. ಹಿಂದಿನಿಂದ ಸರ್ದಾರ್ ಪಟೇಲ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಹೆಸರಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಕೇವಲ ಮೊಟೆರಾ ಕ್ರೀಡಾಂಗಣವನ್ನು ಮರುನಾಮಕರಣ ಮಾಡಲಾಗಿದೆ ಎಂದು ಕೇಂದ್ರ ಹೇಳಿದೆ.
undefined
ಸರ್ದಾರ್ ಪಟೇಲ್‌ಗೆ ಬಿಜೆಪಿ ಅತ್ಯುನ್ನತ ಗೌರವ ನೀಡಿದೆ. ಅತೀ ದೊಡ್ಡ ಪ್ರತಿಮೆ ನಿರ್ಮಿಸಿದೆ. ಸರ್ದಾರ್ ಪಟೇಲ್‌ಗೆ ಕಾಂಗ್ರೆಸ್ ನೀಡುತ್ತಿರುವ ಗೌರವ ಎಷ್ಟಿದೆ ಅನ್ನೋದು ಜನರಿಗೆ ತಿಳಿದಿದೆ ಎಂದು ಜಾವಡೇಕರ್ ಹೇಳಿದೆ.
undefined
ಶಶಿತರೂರ್, ಪ್ರಿಯಾಂಕ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಇದೀಗ ಸರ್ದಾರ್ ಪಟೇಲ್‌ಗೆ ಮಾಡಿದ ಅವಮಾನ ಎಂದು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ
undefined
ಇತ್ತ ಮೋದಿ ಸ್ಟೇಡಿಯಂ ಮರುನಾಮಕರಣಕ್ಕೆ ಪರ ವಿರೋಧಗಳು ವ್ಯಕ್ತವಾಗಿದೆ. ಕಾಂಗ್ರೆಸ್ ತಮ್ಮ ಕುಟುಂಬದ ಹೆಸರು ಇಟ್ಟಿರುವ ಮುಂದೆ ಇದು ಸಾಸಿವೆ ಎಂದು ಕೇಂದ್ರ ನಿರ್ಧಾರಕ್ಕೆ ಸಮರ್ಥನೆ ನೀಡಿದ್ದಾರೆ
undefined

Latest Videos

click me!