ಆಟಗಾರರನ್ನು ರಿಲೀಸ್‌ ಮಾಡಿದ ಬಳಿಕ ಯಾವ ಫ್ರಾಂಚೈಸಿ ಬಳಿ ಎಷ್ಟು ಹಣವಿದೆ..?

First Published | Jan 21, 2021, 6:29 PM IST

ಬೆಂಗಳೂರು: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೆ ಎಲ್ಲಾ ಫ್ರಾಂಚೈಸಿಗಳು ಸಜ್ಜಾಗುತ್ತಿದ್ದು, ತಮಗೆ ಬೇಕಾದ ಆಟಗಾರರನ್ನು ರೀಟೈನ್‌ ಮಾಡಿಕೊಂಡಿದ್ದು, ಬೇಡವಾದ ಆಟಗಾರರನ್ನು ರಿಲೀಸ್‌ ಮಾಡಿದೆ. 
ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವು 10 ಆಟಗಾರರನ್ನು ರಿಲೀಸ್‌ ಮಾಡಿದ್ದರೆ, ರಾಜಸ್ಥಾನ ರಾಯಲ್ಸ್ ತಂಡವು ಸ್ಟೀವ್‌ ಸ್ಮಿತ್ ಅವರಿಗೆ ಗೇಟ್‌ ಪಾಸ್‌ ನೀಡಿದೆ. ಸದ್ಯ ಹರಾಜಿನಲ್ಲಿ ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ಯಾವ ಫ್ರಾಂಚೈಸಿಯ ಬಳಿ ಎಷ್ಟು ಹಣವಿದೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್‌ ಇಲ್ಲಿದೆ ನೋಡಿ..
 

1. ರಾಯಲ್ ಚಾಲೆಂಜರ್ಸ್‌ ಬೆಂಗಳೂರು
ಬೆಂಗಳೂರು ಮೂಲದ ಫ್ರಾಂಚೈಸಿ ಬಳಿ 35.90 ಕೋಟಿ ರುಪಾಯಿ ಹಣವಿದ್ದು, 4 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 13 ಆಟಗಾರರನ್ನು ಆರ್‌ಸಿಬಿ ಖರೀದಿಸಬಹುದಾಗಿದೆ.
Tap to resize

2. ಸನ್‌ರೈಸರ್ಸ್‌ ಹೈದರಾಬಾದ್‌
ಹೈದ್ರಾಬಾದ್‌ ಮೂಲದ ಫ್ರಾಂಚೈಸಿ ಬಳಿ 10.75 ಕೋಟಿ ರುಪಾಯಿ ಹಣವಿದ್ದು, ಒಂದು ವಿದೇಶಿ ಆಟಗಾರ ಸೇರಿದಂತೆ ಮೂರು ಆಟಗಾರರನ್ನು ಖರೀದಿಸಬಹುದಾಗಿದೆ.
3. ಡೆಲ್ಲಿ ಕ್ಯಾಪಿಟಲ್ಸ್‌
13ನೇ ಆವೃತ್ತಿಯ ಐಪಿಎಲ್‌ ರನ್ನರ್‌ ಅಪ್‌ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಳಿ 12.9 ಕೋಟಿ ರುಪಾಯಿ ಹಣವಿದ್ದು, 2 ವಿದೇಶಿ ಆಟಗಾರರು ಸೇರಿದಂತೆ 6 ಆಟಗಾರರನ್ನು ಖರೀದಿಸಬಹುದಾಗಿದೆ.
4. ಕೋಲ್ಕತ ನೈಟ್‌ ರೈಡರ್ಸ್
2 ಬಾರಿಯ ಐಪಿಎಲ್‌ ಚಾಂಪಿಯನ್ ಕೋಲ್ಕತ ನೈಟ್‌ ರೈಡರ್ಸ್ ಖಾತೆಯಲ್ಲಿ 10.75 ಕೋಟಿ ರುಪಾಯಿ ಹಣ ಬಾಕಿ ಉಳಿದಿದ್ದು 2 ವಿದೇಶಿ ಆಟಗಾರರು ಸೇರಿದಂತೆ 8 ಆಟಗಾರರನ್ನು ಖರೀದಿಸಬಹುದಾಗಿದೆ.
5. ರಾಜಸ್ಥಾನ ರಾಯಲ್ಸ್‌
ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್‌ ರಾಜಸ್ಥಾನ ರಾಯಲ್ಸ್‌ ಖಾತೆಯಲ್ಲಿ 34.85 ಕೋಟಿ ರುಪಾಯಿ ಹಣ ಬಾಕಿ ಉಳಿದಿದ್ದು, 3 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 8 ಆಟಗಾರರನ್ನು ಖರೀದಿಸಬಹುದಾಗಿದೆ.
6. ಕಿಂಗ್ಸ್‌ ಇಲೆವನ್ ಪಂಜಾಬ್‌
ಚೊಚ್ಚಲ ಐಪಿಎಲ್‌ ಟ್ರೋಫಿ ಕನವರಿಕೆಯಲ್ಲಿರುವ ಕಿಂಗ್ಸ್‌ ಇಲೆವನ್‌ ಅಕೌಂಟ್‌ನಲ್ಲಿ ಬರೋಬ್ಬರಿ 53.20 ಕೋಟಿ ರುಪಾಯಿ ಹಣವಿದ್ದು, 5 ವಿದೇಶಿ ಆಟಗಾರರು ಸೇರಿದಂತೆ 9 ಆಟಗಾರರನ್ನು ಖರೀದಿಸಬಹುದಾಗಿದೆ.
7. ಚೆನ್ನೈ ಸೂಪರ್ ಕಿಂಗ್ಸ್‌
ಚೆನ್ನೈ ಮೂಲದ ಫ್ರಾಂಚೈಸಿ ಬಳಿ 22.90 ಕೋಟಿ ರುಪಾಯಿ ಹಣವಿದ್ದು, ಓರ್ವ ವಿದೇಶಿ ಆಟಗಾರ ಸೇರಿದಂತೆ 7 ಆಟಗಾರರನ್ನು ಖರೀದಿಸಬಹುದಾಗಿದೆ.

Latest Videos

click me!