2020ರ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡ ಮುಂಬೈ ಇಂಡಿಯನ್ಸ್ ಇದೀಗ 2021ರ ಐಪಿಎಲ್ ಟೂರ್ನಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.
5 ಐಪಿಎಲ್ ಟ್ರೋಫಿ ವಶಪಡಿಸಿಕೊಂಡು ದಾಖಲೆ ಬರೆದಿರುವ ಮುಂಬೈ ಇಂಡಿಯನ್ಸ್ ಇದೀಗ 6ನೇ ಟ್ರೋಫಿ ತನ್ನದಾಗಿಸಿಕೊಳ್ಳಲು ತಂಡದಲ್ಲಿ ಕೆಲ ಬದಲಾವಣೆ ಮಾಡಿದೆ.
ಶ್ರೀಲಂಕಾ ವೇಗಿ, ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ(170) ವಿಕೆಟ್ ಕಬಲಿಸಿದ ಲಸಿತ್ ಮಲಿಂಗರನ್ನು ಮುಂಬೈ ಇಂಡಿಯನ್ಸ್ ಕೈಬಿಟ್ಟಿದೆ. ಮುಂಬೈ ತಂಡದ ಭಾಗವಾಗಿದ್ದ ಮಲಿಂಗಾಗೆ ಮುಂಬೈ ಧನ್ಯವಾದ ಹೇಳಿದೆ.
ಮಲಿಂಗ ಜೊತೆ ಮಿಚೆಲ್ ಮೆಕ್ಲೆನಾಘನ್, ಜೇಮ್ಸ್ ಪ್ಯಾಟಿನ್ಸನ್, ನಥನ್ ಕೌಲ್ಟರ್ ನೈಲ್, ಶೆರ್ಫಾನೆ ರುದರ್‌ಫೋರ್ಡ್, ಪ್ರಿನ್ಸ್ ಬಲ್ವಂತ್ ರೈ, ದಿಗ್ವಿಜಯ್ ದೇಶಮುಖ್ ಅವರನ್ನು ಮುಂಬೈ ಇಂಡಿಯನ್ಸ್ ಕೈಬಿಟ್ಟಿದೆ.
ಮುಂಬೈ ಇಂಡಿಯನ್ಸ್ ಉಳಿಸಿಕೊಂಡ ಬ್ಯಾಟ್ಸ್‌ಮನ್: ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕ್ರಿಸ್ ಲಿನ್, ಅನ್ಮೋಲ್‌ಪ್ರೀತ್ ಸಿಂಗ್, ಸೌರಬ್ ತಿವಾರಿ, ಆದಿತ್ಯ ತಾರೆ
ಮುಂಬೈ ಇಂಡಿಯನ್ಸ್ ನಾಲ್ವರು ಆಲ್ರೌಂಡರ್ಸ್ ಆಟಗಾರರನ್ನು ಉಳಿಸಿಕೊಂದೆ. ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ಅಂಕುಲ್ ರಾಯ್ ಅವರನ್ನು ತಂಡ ರಿಟೈನ್ ಮಾಡಿದೆ.
ಮುಂಬೈ ಉಳಿಸಿಕೊಂಡ ಬೌಲರ್ಸ್: ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೋಲ್ಟ್, ರಾಹುಲ್ ಚಹಾರ್, ಜಯಂತ್ ಯಾದವ್, ಧವಲ್ ಕುಲಕರ್ಣಿ, ಮೊಹ್ಸಿನ್ ಖಾನ್
ಅಳೆದು ತೂಗಿ ಮುಂಬೈ ಇಂಡಿಯನ್ಸ್ ಆಟಗಾರರ ರಿಟೈನ್ ಮಾಡಿಕೊಂಡಿದೆ. ಮುಂಬೈ ಕೋರ್ ತಂಡವನ್ನು ಉಳಿಸಿಕೊಂಡಿದ್ದು, 2021ರಲ್ಲೂ ಚಾಂಪಿಯನ್ ಪಟ್ಟ ತನ್ನದಾಗಿಸುವ ಪ್ರಯತ್ನದಲ್ಲಿದೆ.