ಏಕದಿನ ವಿಶ್ವಕಪ್ ಟೂರ್ನಿ ಬಿಸಿ ಏರಿಸಿದ ಹೇಡನ್ ಪುತ್ರಿ, ಬೋಲ್ಡ್ ಲುಕ್‌ಗೆ ಫ್ಯಾನ್ಸ್ ಫಿದಾ!

Published : Oct 02, 2023, 03:24 PM ISTUpdated : Oct 02, 2023, 03:28 PM IST

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ಕೆಲ ದಿನಗಳು ಮಾತ್ರ. ಎಲ್ಲೆಡೆ ವಿಶ್ವಕಪ್ ಫೀವರ್ ಆವರಿಸಿದೆ. ಇದರ ನಡುವೆ ವರ್ಲ್ಡ್ ಕಪ್ ಬಿಸಿ ಏರಿಸಲು ಇದೀಗ ಆಸೀಸ್ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಪುತ್ರಿ ಗ್ರೇಸ್ ಹೇಡನ್ ಎಂಟ್ರಿಕೊಟ್ಟಿದ್ದಾರೆ. ಗ್ರೇಸ್ ಬೋಲ್ಡ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.  

PREV
18
ಏಕದಿನ ವಿಶ್ವಕಪ್ ಟೂರ್ನಿ ಬಿಸಿ ಏರಿಸಿದ ಹೇಡನ್ ಪುತ್ರಿ, ಬೋಲ್ಡ್ ಲುಕ್‌ಗೆ ಫ್ಯಾನ್ಸ್ ಫಿದಾ!

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ 5 ರಿಂದ ಆರಂಭಗೊಳ್ಳುತ್ತಿದೆ. ದೇಶದೆಲ್ಲೆಡೆ ಕ್ರಿಕೆಟ್ ಫೀವರ್ ಆವರಿಸುತ್ತಿದೆ. ಟೀಂ ಇಂಡಿಯಾ ಮತ್ತೆ ವಿಶ್ವಕಪ್ ಗೆಲ್ಲುವ ವಿಶ್ವಾಸ ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಈ ಫೀವರ್ ನಡುವೆ  ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಪುತ್ರಿ ಗ್ರೇಸ್ ಹೇಡನ್ ವಿಶ್ವಕಪ್ ಟೂರ್ನಿಗೆ ಎಂಟ್ರಿಕೊಡುತ್ತಿದ್ದು, ಮತ್ತಷ್ಟು ಬಿಸಿ ಏರಿಸಿದ್ದಾರೆ.

28

ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಸ್ಫೋಟಕ ಬ್ಯಾಟಿಂಗ್ ಬಿಡಿಸಿ ಹೇಳಬೇಕಾಗಿಲ್ಲ. ಇದೀಗ ಹೇಡನ್ ಪುತ್ರಿ ಗ್ರೇಸ್ ಹೇಡನ್ ಭಾರತದಿಂದ ಕರಿಯರ್ ಆರಂಭಿಸುತ್ತಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ವಾಹನಿಯಲ್ಲಿ ಹೇಡನ್ ಪುತ್ರಿ ಏಕದಿನ ವಿಶ್ವಕಪ್ ಟೂರ್ನಿಯ ನಿರೂಪಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

38

ಏಕದಿನ ವಶ್ವಕಪ್ ಟೂರ್ನಿಯಲ್ಲಿ ಗ್ರೇಸ್ ಹೇಡನ್ ಮುಖ್ಯ ನಿರೂಪಕಿಯಾಗಿದ್ದಾರೆ. ಗ್ರೇಸ್ ಹೇಡನ್ ಹೆಸರು ಹೊರಬೀಳುತ್ತಿದ್ದಂತೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಾರಣ ಗ್ರೇಸ್ ಹೇಡನ್ ಬೋಲ್ಡ್ ಲುಕ್‌ಗೆ ಫ್ಯಾನ್ಸ್ ಮರುಳಾಗಿದ್ದಾರೆ.
 

48

ಕ್ರಿಕೆಟಿಗ ಮ್ಯಾಥ್ಯೂ ಹೇಡನ್‌ಗೆ ಹಲವು ಭಾರಿ ಭಾರತ ಪ್ರವಾಸ ಕರಿಯರ್‌ಗೆ ಹೊಸ ತಿರುವು ನೀಡಿದೆ. ಫಾರ್ಮ್ ಕಳೆದುಕೊಂಡಿದ್ದ ಹೇಡನ್ ಹಲವು ಭಾರಿ ಭಾರತ ಪ್ರವಾಸದಲ್ಲಿ ಫಾರ್ಮ್‌ಗೆ ಮರಳಿದ್ದಾರೆ. ಇದೀಗ ಹೇಡನ್ ಪುತ್ರಿ ಭಾರತದಿಂದಲೇ ಕರಿಯರ್ ಆರಂಭಿಸುತ್ತಿದ್ದಾರೆ.
 

58

ಗ್ರೇಸ್ ಹೇಡನ್, ಕ್ರೀಡಾ ವಾಹನಿಯ ಖ್ಯಾತ ನಿರೂಪಕಿಯರಾದ ಮಯಾಂತಿ ಲ್ಯಾಂಗರ್, ಜತಿನ್ ಸಪ್ರು, ರಿಕಿ ಪಾಂಟಿಂಗ್, ಇಯಾನ್ ಮಾರ್ಗನ್ ಸೇರಿದಂತೆ ದಿಗ್ಗಜರ ಜೊತೆ ಏಕದಿನ ವಿಶ್ವಕಪ್ ಪಂದ್ಯಗಳ ಚರ್ಚೆ ನಡೆಸಲಿದ್ದಾರೆ.

68

ಆಸ್ಟ್ರೇಲಿಯಾದಲ್ಲಿ ಕೆಲ ಕ್ರಿಕೆಟ್ ಟೂರ್ನಿಯಲ್ಲಿ ನಿರೂಪಕಿಯಾಗಿ ಗ್ರೇಸ್ ಹೇಡನ್ ಗಮನಸೆಳೆದಿದ್ದಾರೆ. ಇದೀಗ ನೇರವಾಗಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ನಿರೂಪಕಿಯಾಗಿ ನೇಮಕಗೊಂಡಿದ್ದಾಳೆ.

78

ಗ್ರೇಸ್ ಹೇಡನ್ ಹೆಸರು ಘೋಷಣೆಯಾಗುತ್ತಿದ್ದಂತೆ ಹಾಟ್ ಫೋಟೋಸ್ ಹಾಗೂ ವಿಡಿಯೋಗಳು ವೈರಲ್ ಆಗಿದೆ. ಇದೀಗ ಕ್ರಿಕೆಟ್ ಅಭಿಮಾನಿಗಳು ಸಂಭ್ರಮ ಡಬಲ್ ಆಗಿದೆ.
 

88

ಗ್ರೇಸ್ ಹೇಡನ್ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿದ್ದಾರೆ. ತಮ್ಮ ಹಾಟ್ ಹಾಗೂ ಸೆಕ್ಸಿ ಲುಕ್‌ನಿಂದಲೇ ಅಪಾರ ಅಭಿಮಾನಿ ಬಳಗ ಹೊಂದಿರುವ ಗ್ರೇಸ್ ಹೇಡನ್‌ಗೆ ವಿಶ್ವಕಪ್ ಟೂರ್ನಿ ಬಳಿಕ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಲಿದೆ.
 

Read more Photos on
click me!

Recommended Stories