ಆಫ್ರಿಕಾ ವಿರುದ್ದ 124 ರನ್ ಚೇಸ್ ಮಾಡದೆ ಸೋತ ಭಾರತ ಫುಲ್ ಟ್ರೋಲ್, ಟೆಸ್ಟ್ ಕಣ್ರೋ ಎಂದ ದಿಗ್ಗಜರು, ಸುಲಭ ಟಾರ್ಗೆಟ್, ಭಾರತದ ನೆಲ, ಘಟಾನುಘಟಿ ಬ್ಯಾಟ್ಸಮನ್ ಇದ್ದರೂ ಚೇಸ್ ಮಾಡಲು ಸಾಧ್ಯವಾಗಿಲ್ಲ.ಪರಿಣಾಮ ಸೌತ್ ಆಫ್ರಿಕಾ ಹಲವು ದಾಖಲೆ ಬರೆದಿದೆ.
ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಆರಂಭದಲ್ಲೇ ಭಾರತಕ್ಕೆ ಆಘಾತ ಎದುರಾಗಿದೆ. ಸೌತ್ ಆಫ್ರಿಕಾ ನೀಡಿದ್ದು ಕೇವಲ 124 ರನ್ ಟಾರ್ಗೆಟ್. ಟೀಂ ಇಂಡಿಯಾ ದಂತ ದೈತ್ಯ ತಂಡಕ್ಕೆ ಇದು ಬಿಗ್ ಟಾರ್ಗೆಟ್ ಅಲ್ಲ, ಎದುರಾಳಿ ಅದೆಷ್ಟೆ ಪ್ರಬಲನಾಗಿದ್ದರೂ ಭಾರತಕೂಡ ಬಲಿಷ್ಠ ತಂಡ. ಜೊತೆಗೆ ಭಾರತದ ಪಿಚ್. ಇಷ್ಟಿದ್ದರೂ ಭಾರತ 93 ರನ್‌ಗೆ ಆಲೌಟ್ ಆಗುವ ಮೂಲಕ ಸೌತ್ ಆಫ್ರಿಕಾಗೆ ಶರಣವಾಗಿದೆ.
25
ಹೀನಾಯ ಪ್ರದರ್ಶನಕ್ಕೆ ಫುಲ್ ಟ್ರೋಲ್
ಭಾರತದ ಕಳಪೆ ಬ್ಯಾಟಿಂಗ್ ಪ್ರದರ್ಶನ ವಿರುದ್ಧ ಭಾರಿ ಟೀಕೆ, ಟ್ರೋಲ್ ವ್ಯಕ್ತವಾಗುತ್ತಿದೆ. ಭಾರತದ ಕ್ರಿಕೆಟಿಗರು ಐಪಿಎಲ್ ಮೂಲಕ ಹಣ ಮಾಡುವುದರಲ್ಲೇ ಬ್ಯೂಸಿ ಇದ್ದಾರೆ. ಹೊಡಿ ಬಡಿ ಆಟದಲ್ಲಿ ಟೆಸ್ಟ್ ಕ್ರಿಕೆಟ್ ಮರೆತಿದ್ದಾರೆ ಎಂದು ಹಲವರು ಟ್ರೋಲ್ ಮಾಡಿದ್ದಾರೆ. ಇದೇ ವೇಳೆ ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಕೂಡ ಭಾರತ ಟೀಕಿಸಿದ್ದಾರೆ. ಈಗಿನ ಬ್ಯಾಟರ್, ಸಿಕ್ಸರ್, ಸ್ವಿಚ್ ಹಿಟ್, ಹೊಡಿ ಬಡಿ ಆಟ ಕಲಿತಿದ್ದಾರೆ, ಟೆಸ್ಟ್ ಕ್ರಿಕೆಟ್ ಗೊತ್ತಿಲ್ಲ ಎಂದು ಟೀಕಿಸಿದ್ದಾರೆ.
35
ಟೆಸ್ಟ್ ಮರೆತು ಬಿಟ್ಟಿತಾ ಭಾರತ
ಟೆಸ್ಟ್ ಕ್ರಿಕೆಟ್‌ನಲ್ಲಿ ಒಬ್ಬ ಕ್ರಿಕೆಟಿಗ ಎಲ್ಲಾ ಪರೀಕ್ಷೆ ನಡೆಯುತ್ತದೆ. ತಾಳ್ಮೆ, ಇನ್ನಿಂಗ್ಸ್ ಕಟ್ಟುವ ರೀತಿ, ಬ್ಯಾಟಿಂಗ್, ಉತ್ತಮ ಹೊಡೆತ ಸೇರಿದಂತೆ ಎಲ್ಲವೂ ಪರೀಕ್ಷೆ ನಡೆಯೆಲಿದೆ. ಆದರೆ ಈಗಿನ ಪಂದ್ಯ ನೋಡಿದರೆ 2 ದಿನಕ್ಕೆ ಮುಕ್ತಾಯಗೊಳ್ಳುತ್ತಿದೆ. ಆಟಗಾರರು ಪರೀಕ್ಷೆಗೆ ತಯಾರಿಲ್ಲ. ಆಟದ ಮಾತೆಲ್ಲಿ ಎಂದು ಕೆವಿನ್ ಪೀಟರ್ಸನ್ ಹೇಳಿದ್ದಾರೆ.
ಸೌತ್ ಆಫ್ರಿಕಾ ತಂಡ 2010ರ ಬಳಿಕ ಇದೇ ಮೊದಲ ಭಾರಿಗೆ ಭಾರತದಲ್ಲಿ ಟೆಸ್ಟ್ ಪಂದ್ಯ ಗೆದ್ದುಕೊಂಡಿದೆ. ತೆಂಬಾ ಬವುಮಾನ ನಾಯಕತ್ವದ ಸೌತ್ ಅಫ್ರಿಕಾ ತಂಡ ಐತಿಹಾಸಿಕ ಗೆಲುವು ಕಂಡಿದೆ. ಇಷ್ಟೇ ಅಲ್ಲ ಅತೀ ಕಡಿಮೆ ಟಾರ್ಗೆಟ್ ನೀಡಿ ಗೆಲುವು ಸಾಧಿಸಿದ ತಂಡ ಅನ್ನೋ ದಾಖಲೆಯನ್ನು ಸೌತ್ ಆಫ್ರಿಕಾ ಪಾಲಾಗಿದೆ.
2010ರ ಬಳಿಕ ಸೌತ್ ಆಫ್ರಿಕಾಗೆ ಮೊದಲ ಗೆಲುವು
55
ಭಾರತಕ್ಕೆ ಮುಖಭಂಗ
ಟೀಂ ಇಂಡಿಯಾ ಅತೀ ಕಡಿಮೆ ಟಾರ್ಗೆಟ್ ಚೇಸ್ ಮಾಡಲು ವಿಫಲವಾಗಿದೆ. ಈ ಮೂಲಕ ಭಾರತ ಟೆಸ್ಟ್ ಕ್ರಿಕೆಟ್ ಚೇಸಿಂಗ್‌ನಲ್ಲಿ ಅತ್ಯಂತ ಎರಡನೇ ಹೀನಾಯ ಪ್ರದರ್ಶನ ಇದಾಗಿದೆ. ಇದಕ್ಕೂ ಮೊದಲು 1997ರಲ್ಲಿ ವೆಸ್ಟ್ ಇಂಡೀಸ್ ನೀಡಿದ 120 ರನ್ ಟಾರ್ಗೆಟ್ ಚೇಸ್ ಮಾಡಲು ಭಾರತ ವಿಫಲವಾಗಿತ್ತು