Published : Mar 28, 2025, 11:59 AM ISTUpdated : Mar 28, 2025, 12:22 PM IST
ಚೆನ್ನೈ: 18ನೇ ಆವೃತ್ತಿಯ ಬಹುನಿರೀಕ್ಷಿತ ಪಂದ್ಯ ಎನಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಪಂದ್ಯಕ್ಕೆ ಆರ್‌ಸಿಬಿ ತಂಡವು ಎರಡು ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಚೆಪಾಕ್ ಸ್ಪಿನ್ ಸ್ನೇಹಿ ಆಗಿರುವುದರಿಂದ ಆರ್‌ಸಿಬಿ ತಂಡವು ಒಂದು ಹೆಚ್ಚುವರಿ ಸ್ಪಿನ್ನರ್ ಆಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಸ್ಪೋಟಕ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್, ಆರ್‌ಸಿಬಿ ತಂಡಕ್ಕೆ ಮೊದಲ ಪಂದ್ಯದಲ್ಲೇ ಭರ್ಜರಿ ಆರಂಭ ಒದಗಿಸಿಕೊಟ್ಟಿದ್ದರು. ಕೆಕೆಆರ್ ಎದುರು ಆಕರ್ಷಕ ಅರ್ಧಶತಕ ಸಿಡಿಸಿದ್ದ ಸಾಲ್ಟ, ಇದೀಗ ಸಿಎಸ್‌ಕೆ ಎದುರು ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ.
212
2. ವಿರಾಟ್ ಕೊಹ್ಲಿ:
ಆರ್‌ಸಿಬಿ ರನ್ ಮಷೀನ್ ವಿರಾಟ್ ಕೊಹ್ಲಿ ಕೂಡಾ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ್ದು, ಉತ್ತಮ ಲಯದಲ್ಲಿದ್ದಾರೆ. ಚೆನ್ನೈ ಎದುರು ಕೊಹ್ಲಿ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ಫ್ಯಾನ್ಸ್ ತುದಿಗಾಲಿನಲ್ಲಿ ನಿಂತಿದ್ದಾರೆ
312
3. ರಜತ್ ಪಾಟೀದಾರ್:
ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಕೂಡಾ ಕೆಕೆಆರ್ ಎದುರು ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ದರು. ಇದೀಗ 17 ವರ್ಷಗಳ ಬಳಿಕ ಚೆಪಾಕ್‌ನಲ್ಲಿ ಆರ್‌ಸಿಬಿಗೆ ಗೆಲುವು ತಂದುಕೊಡಲು ಸಜ್ಜಾಗಿದ್ದಾರೆ.
412
4. ಲಿಯಾಮ್ ಲಿವಿಂಗ್‌ಸ್ಟೋನ್:
ಆರ್‌ಸಿಬಿ ಸ್ಟಾರ್ ಆಲ್ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಚೆಪಾಕ್ ಮೈದಾನದಾಚೆ ಚೆಂಡನ್ನು ಸಿಕ್ಸರ್‌ಗಟ್ಟುವ ಸಾಮರ್ಥ್ಯ ಹೊಂದಿದ್ದಾರೆ. ಬಲಿಷ್ಠ ಚೆನ್ನೈ ಎದುರು ಬೌಲಿಂಗ್‌ನಲ್ಲೂ ತಂಡಕ್ಕೆ ಆಸರೆಯಾಗಬೇಕಿದೆ.
512
5. ಜಿತೇಶ್ ಶರ್ಮಾ:
ಆರ್‌ಸಿಬಿ ತಂಡದ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾಗೆ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಜಿತೇಶ್ ಶರ್ಮಾ ಇಂದು ಮ್ಯಾಚ್ ಫಿನಿಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕಿದೆ.
612
6. ಟಿಮ್ ಡೇವಿಡ್:
ಆರ್‌ಸಿಬಿ ತಂಡದ ಸ್ಪೋಟಕ ಬ್ಯಾಟರ್ ಆಗಿರುವ ಟಿಮ್ ಡೇವಿಡ್, ತಮ್ಮ ವಿಸ್ಪೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಬಿಗ್ ಸಿಕ್ಸರ್ ಸಿಡಿಸುವ ಸಾಮರ್ಥ್ಯ ಹೊಂದಿರುವ ಟಿಮ್ ಡೇವಿಡ್, ಪಂದ್ಯದ ದಿಕ್ಕು ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ.
712
7. ಕೃನಾಲ್ ಪಾಂಡ್ಯ:
ಆರ್‌ಸಿಬಿ ಆಲ್ರೌಂಡರ್ ಕೃನಾಲ್ ಪಾಂಡ್ಯ ಮೊದಲ ಪಂದ್ಯದಲ್ಲೇ ಪ್ರಮುಖ ಮೂರು ವಿಕೆಟ್ ಕಬಳಿಸುವ ಮೂಲಕ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಚೆನ್ನೈ ಪಿಚ್‌ನಲ್ಲಿ ಕೃನಾಲ್ ಪಾತ್ರ ವಹಿಸುವ ಸಾಧ್ಯತೆಯಿದೆ.
812
8. ಭುವನೇಶ್ವರ್ ಕುಮಾರ್:
ಕೆಕೆಆರ್ ಎದುರಿನ ಮೊದಲ ಪಂದ್ಯದಲ್ಲಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್, ಫಿಟ್ನೆಸ್ ಸಮಸ್ಯೆಯಿಂದ ಹೊರಗುಳಿದಿದ್ದರು. ಇದೀಗ ಭುವಿ ಸಂಪೂರ್ಣ ಫಿಟ್ ಆಗಿದ್ದು, ಮೈದಾನಕ್ಕಿಳಿಯುವ ವಿಶ್ವಾಸದಲ್ಲಿದ್ದಾರೆ. ಹೀಗಾದಲ್ಲಿ ರಸಿಕ್ ಧರ್ ಮೈದಾನದಿಂದ ಹೊರಗುಳಿಯಬೇಕಾಗುತ್ತದೆ.
912
9. ಸ್ವಪ್ನಿಲ್ ಸಿಂಗ್:
ಕೆಕೆಆರ್ ಎದುರು ಸುಯಾಶ್ ಶರ್ಮಾ 4 ಒವರ್‌ನಲ್ಲಿ 47 ರನ್ ನೀಡಿ ದುಬಾರಿಯಾಗಿದ್ದರು. ಒಂದು ಕ್ಯಾಚ್ ಕೂಡಾ ಕೈಚೆಲ್ಲಿದ್ದರು. ಹೀಗಾಗಿ ಇಂದಿನ ಪಂದ್ಯದಲ್ಲಿ ಸುಯಾಶ್ ಬದಲಿಗೆ ಸ್ವಪ್ನಿಲ್ ಸಿಂಗ್ ತಂಡ ಕೂಡಿಕೊಳ್ಳಬಹುದು.
1012
10. ಜೋಶ್ ಹೇಜಲ್‌ವುಡ್
ಆರ್‌ಸಿಬಿ ಅನುಭವಿ ವೇಗಿ ಹೇಜಲ್‌ವುಡ್ ಮೊದಲ ಪಂದ್ಯದಲ್ಲೇ ಕರಾರುವಕ್ಕಾದ ದಾಳಿ ನಡೆಸುವ ಮೂಲಕ 2 ವಿಕೆಟ್ ಕಬಳಿಸಿ ಮಿಂಚಿದ್ದರು. ಹೇಜಲ್‌ವುಡ್ ಮತ್ತೊಮ್ಮೆ ಮಿಂಚಿನ ದಾಳಿ ನಡೆಸಲು ಸಜ್ಜಾಗಿದ್ದಾರೆ.
1112
11. ಯಶ್ ದಯಾಳ್:
ಎಡಗೈ ವೇಗಿ ಯಶ್ ದಯಾಳ್ ಡೆತ್ ಓವರ್ ಹಾಗೂ ಪವರ್ ಪ್ಲೇ ನಲ್ಲಿ ಕರಾರುವಕ್ಕಾದ ದಾಳಿ ನಡೆಸುವ ಸಾಮರ್ಥ್ಯ ಹೊಂದಿದ್ದು, ಮತ್ತೊಮ್ಮೆ ಚೆನ್ನೈ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.
1212
Image Credit: ANI
ಇನ್ನುಳಿದಂತೆ ಆರ್‌ಸಿಬಿ ಚೇಸಿಂಗ್ ಮಾಡಲಿಳಿದರೆ ಇಂಪ್ಯಾಕ್ಟ್ ಬ್ಯಾಟರ್ ಆಗಿ ದೇವದತ್ ಪಡಿಕ್ಕಲ್ ಕಾಣಿಸಿಕೊಳ್ಳುವ ಸಾಧ್ಯತೆ, ಒಂದು ವೇಳೆ ಮೊದಲು ಬ್ಯಾಟಿಂಗ್ ಮಾಡಿದರೆ ಮಾಡಿದರೆ ಸುಯಾಶ್ ಶರ್ಮಾ ಇಲ್ಲವೇ ರಸಿಕ್ ಧರ್ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.