MS Dhoni House Attack: 2007ರಲ್ಲಿ ಧೋನಿ ಮನೆ ಮೇಲೆ ದಾಳಿ ಆಗಿದ್ದೇಕೆ?

First Published | Aug 26, 2024, 7:23 PM IST

2007 ರ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ಭಾರತ ಸೋತ ನಂತರ, ಅಭಿಮಾನಿಗಳು ಕೋಪದಿಂದ ಧೋನಿಯ ರಾಂಚಿಯಲ್ಲಿರುವ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದರು.

MS Dhoni

ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ಭಾರತ 5 ವಿಕೆಟ್‌ಗಳಿಂದ ಸೋತ ನಂತರ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಧೋನಿಯ ರಾಂಚಿಯಲ್ಲಿರುವ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚುವ ಮೂಲಕ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

IND vs BAN, ODI ವಿಶ್ವಕಪ್ 2007

ಸೌರವ್ ಗಂಗೂಲಿ, ವೀರೇಂದ್ರ ಸೆಹವಾಗ್, ರಾಬಿನ್ ಉತ್ತಪ್ಪ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಯುವರಾಜ್ ಸಿಂಗ್, ಎಂ.ಎಸ್.ಧೋನಿ ಮತು ಇತರ ಪ್ರಮುಖ ಬ್ಯಾಟ್ಸ್‌ಮನ್‌ಗಳಿದ್ದರೂ ಭಾರತ 49.3 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 191 ರನ್‌ಗಳಿಸಲು ಮಾತ್ರ ಶಕ್ತವಾಗಿತ್ತು. 2007 ರ ಏಕದಿನ ಕ್ರಿಕೆಟ್ ವಿಶ್ವಕಪ್‌ ಅನ್ನು ವೆಸ್ಟ್ ಇಂಡೀಸ್‌ನಲ್ಲಿ ಆಯೋಜಿಸಲಾಗಿತ್ತು.

Latest Videos


MS Dhoni

ಈ ಟೂರ್ನಿಯ 8 ನೇ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾದವು. ಇದು ಭಾರತ ತಂಡದ ಮೊದಲ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಭಾರತ ತಂಡದ ನಾಯಕರಾಗಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 191 ರನ್‌ಗಳಿಸಿತ್ತು.

MS Dhoni House

ಭಾರತ ತಂಡದ ಪರವಾಗಿ ಸೌರವ್ ಗಂಗೂಲಿ 66 ರನ್ ಮತ್ತು ಯುವರಾಜ್ ಸಿಂಗ್ 47 ರನ್ ಗಳಿಸಿದ್ದರು. ಸೆಹವಾಗ್ 2, ಉತ್ತಪ್ಪ 9, ಸಚಿನ್ 7, ಧೋನಿ 0, ಹರ್ಭಜನ್ ಸಿಂಗ್ 0, ಅಜಿತ್ ಅಗರ್ಕರ್ 0, ಜಹೀರ್ ಖಾನ್ 15, ಮುನಾಫ್ ಪಟೇಲ್ 15 ರನ್ ಗಳಿಸಿದರು. ಬಾಂಗ್ಲಾದೇಶ ತಂಡದ ಪರವಾಗಿ ಮುಶ್ರಫೆ ಮೊರ್ತಾಜಾ 4 ವಿಕೆಟ್ ಮತ್ತು ಅಬ್ದುಲ್ ರಜಾಕ್ ಮತ್ತು ಮೊಹಮ್ಮದ್ ರಫೀಕ್ ತಲಾ 3 ವಿಕೆಟ್ ಪಡೆದುಕೊಂಡಿದ್ದರು.

IND vs BAN, ODI ವಿಶ್ವಕಪ್ 2007

ಬಳಿಕ 192 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ತಂಡ 48.3 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು ಜಯಗಳಿಸಿತ್ತು. ತಮೀಮ್ ಇಕ್ಬಾಲ್ 51 ರನ್, ಮುಶ್ಫಿಕರ್ ರಹೀಮ್ 56 ರನ್ ಮತ್ತು ಶಕೀಬ್ ಅಲ್ ಹಸನ್ 53 ರನ್ ಗಳಿಸಿದರು. ಆಗ ಸಣ್ಣ ತಂಡವಾಗಿದ್ದ ಬಾಂಗ್ಲಾದೇಶ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಭಾರತ ಸೋತದ್ದು ಎಲ್ಲಾ ಅಭಿಮಾನಿಗಳಿಗೂ ಆಘಾತವನ್ನುಂಟುಮಾಡಿತ್ತು.

MS Dhoni House

ಭಾರತವನ್ನು ಸೋಲಿಸಿದ ಸಂಭ್ರಮದಲ್ಲಿ ಬಾಂಗ್ಲಾದೇಶ ಆತಂಡದ ಆಟಗಾರರು ಸಂಭ್ರಮಿಸಿದರು. ಆದರೆ, ಭಾರತೀಯ ಅಭಿಮಾನಿಗಳು ಕೋಪದಿಂದ ಕೆಂಡಾಮಂಡಲರಾದರು. ಇದರ ಪರಿಣಾಮವಾಗಿ, ಆಗ ಧೋನಿ ರಾಂಚಿಯಲ್ಲಿ ಹೊಸ ಮನೆಯೊಂದನ್ನು ನಿರ್ಮಿಸುತ್ತಿದ್ದರು. ಆಗ ಆ ಮನೆಯ ಮುಂದೆ ಹೋದ ಅಭಿಮಾನಿಗಳು ಕಲ್ಲು ತೂರಾಟ ನಡೆಸಿ ಮನೆಯನ್ನು ಧ್ವಂಸಗೊಳಿಸಿದರು. ಅಷ್ಟೇ ಅಲ್ಲದೆ, ಧೋನಿಯ ಪ್ರತಿಕೃತಿಯನ್ನು ಸುಟ್ಟು ಹಾಕಿದ್ದರು.

MS Dhoni

ಮನೆಯನ್ನು ಧ್ವಂಸಗೊಳಿಸಿದ ಅದೇ ಭಾರತೀಯ ಅಭಿಮಾನಿಗಳು 2011 ರ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಧೋನಿಯನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು. ಈ ಟೂರ್ನಿಯಲ್ಲಿ ಧೋನಿ ಭಾರತ ತಂಡದ ನಾಯಕರಾಗಿದ್ದರು. ಅವರ ನಾಯಕತ್ವದಲ್ಲಿ ಭಾರತ ತಂಡವು ಫೈನಲ್‌ನಲ್ಲಿ ಶ್ರೀಲಂಕಾವನ್ನು ಸೋಲಿಸಿ 28 ವರ್ಷಗಳ ನಂತರ ಏಕದಿನ ವಿಶ್ವಕಪ್ ಗೆದ್ದಿತ್ತು.

MS Dhoni - 2007 ODI ವಿಶ್ವಕಪ್

ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರೂ, ಅವರು ಇನ್ನೂ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಧೋನಿಗಾಗಿಯೇ ಐಪಿಎಲ್ ಟೂರ್ನಿಯನ್ನು ಅನೇಕ ಅಭಿಮಾನಿಗಳು ವೀಕ್ಷಿಸುತ್ತಾರೆ. ಇನ್ನೂ ಹೇಳಬೇಕೆಂದರೆ, ಧೋನಿ ಯಾವಾಗ ಮೈದಾನಕ್ಕೆ ಬರುತ್ತಾರೆ ಎಂದು ಕಾತರದಿಂದ ಕಾಯುವ ಅಭಿಮಾನಿಗಳೂ ಇದ್ದಾರೆ. ಕೆಲವು ಅಭಿಮಾನಿಗಳು ಮೈದಾನದೊಳಗೆ ನುಗ್ಗಿ ಅವರ ಪಾದಗಳಿಗೆ ನಮಸ್ಕರಿಸುತ್ತಾರೆ.

click me!