Bike Accident: ಶೇನ್ ವಾರ್ನ್‌ ಬೈಕ್ ಅಪಘಾತ, ಗಾಯಗೊಂಡ ದಿಗ್ಗಜ ಕ್ರಿಕೆಟಿಗ, ಪುತ್ರ..!

Suvarna News   | Asianet News
Published : Nov 29, 2021, 01:11 PM ISTUpdated : Nov 29, 2021, 01:19 PM IST

ಮೆಲ್ಬೊರ್ನ್‌: ಆಸ್ಟ್ರೇಲಿಯಾದ ಕ್ರಿಕೆಟ್ (Australia Cricket) ದಂತಕಥೆ ಶೇನ್‌ ವಾರ್ನ್‌ (Shane Warne) ಬೈಕ್ ಸವಾರಿ ಮಾಡುತ್ತಿದ್ದಾಗ ಅಪಘಾತಕ್ಕೀಡಾಗಿದ್ದಾರೆ. ಶೇನ್‌ ವಾರ್ನ್‌ ಹಾಗೂ ಮತ್ತವರ ಪುತ್ರ ಜಾಕ್ಸನ್‌ ಬೈಕ್ ಸವಾರಿ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.  

PREV
16
Bike Accident: ಶೇನ್ ವಾರ್ನ್‌ ಬೈಕ್ ಅಪಘಾತ, ಗಾಯಗೊಂಡ ದಿಗ್ಗಜ ಕ್ರಿಕೆಟಿಗ, ಪುತ್ರ..!

ಆಸ್ಟ್ರೇಲಿಯಾದ ದಿಗ್ಗಜ ಲೆಗ್ ಸ್ಪಿನ್ನರ್‌ ಶೇನ್‌ ವಾರ್ನ್‌ ಸ್ವತಃ ರಸ್ತೆ ಅಪಘಾತಕ್ಕೊಳಗಿದ್ದು, ಅದೃಷ್ಟವಶಾತ್ ಹೆಚ್ಚಿನ ಅಪಾಯ ಉಂಟಾಗಿಲ್ಲ. ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌ ವರದಿಯ ಪ್ರಕಾರ, ಭಾನುವಾರ ಮೆಲ್ಬೊರ್ನ್‌ನಲ್ಲಿ ಮೋಟರ್ ಬೈಕ್ ಚಲಾಯಿಸುವಾಗ ಈ ಅವಘಡ ಸಂಭವಿಸಿದೆ.

26

ಶೇನ್‌ ವಾರ್ನ್ ಬೈಕ್ ಓಡಿಸುವಾಗ ಅವರ ಪುತ್ರ ಜಾಕ್ಸನ್‌ ಕೂಡಾ ಜತೆಗಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ವಾರ್ನ್‌ ಹಾಗೂ ಅವರ ಪುತ್ರ ಕೆಳಗೆ ಬಿದ್ದಿದ್ದಾರೆ. ಈ ವೇಳೆ ವಾರ್ನ್‌ ಹಾಗೂ ಅವರ ಪುತ್ರ ಬೈಕ್ ಸಮೇತ 15 ಮೀಟರ್ ಜಾರಿಕೊಂಡು ಹೋಗಿದ್ದಾರೆ. ಆದರೆ ಇಬ್ಬರಿಗೂ ಅಂತಹ ಗಂಭೀರ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.

36

ಶೇನ್‌ ವಾರ್ನ್‌ ಅವರಿಗೆ ಸೋಮವಾರ ಬೆಳಗ್ಗೆ ಎದ್ದಾಗ ಮೈ-ಕೈ ನೋವಿದೆ ಎಂದು ತಿಳಿಸಿದ್ದಾರೆ. ಅಪಘಾತದಿಂದ ನಾನು ಕೊಂಚ ಝರ್ಜರಿತನಾಗಿದ್ದೇನೆ. ಮೂಗಿಗೆ ಕೊಂಚ ತರಚಿದ ಗಾಯವಾಗಿದೆ ಎಂದು ವಾರ್ನ್ ತಿಳಿಸಿದ್ದಾರೆ. ಅಪಘಾತವಾಗುತ್ತಿದ್ದಂತೆಯೇ ಆಸ್ಪತ್ರೆಗೆ ತೆರಳಿ ತಪಾಸಣೆ ನಡೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ

46

ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಶೇನ್‌ ವಾರ್ನ್‌ ಕ್ರಿಕೆಟ್ ಎಕ್ಸ್‌ಫರ್ಟ್‌ ಹಾಗೂ ವೀಕ್ಷಕ ವಿವರಣೆಗಾರರಾಗಿ ಹೆಚ್ಚು ಗಮನ ಸೆಳೆದಿದ್ದಾರೆ. ಇದೀಗ ಡಿಸೆಂಬರ್ 08ರಿಂದ ಬ್ರಿಸ್ಬೇನ್‌ಗ ಗಾಬಾ ಮೈದಾನದಲ್ಲಿ ಆರಂಭವಾಗಲಿರುವ ಆ್ಯಷಸ್ ಸರಣಿಯಲ್ಲಿ ವೀಕ್ಷಕ ವಿವರಣೆಗಾರನಾಗಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

56

ಇದಷ್ಟೇ ಅಲ್ಲದೇ ಶೇನ್‌ ವಾರ್ನ್‌ ಡಿಸೆಂಬರ್ 05ರಿಂದ ಜನವರಿ 28ರ ವರೆಗೆ ನಡೆಯಲಿರುವ 2021-22ನೇ ಸಾಲಿನ ಬಿಗ್‌ಬ್ಯಾಶ್‌ ಲೀಗ್ ಟೂರ್ನಿಯ ವೇಳೆಯಲ್ಲೂ ವೀಕ್ಷಕ ವಿವರಣೆಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. 

66

ಶೇನ್ ವಾರ್ನ್ ಟೆಸ್ಟ್ ಕ್ರಿಕೆಟ್‌ನಲ್ಲಿ 145 ಪಂದ್ಯಗಳನ್ನಾಡಿ 708 ವಿಕೆಟ್ ಕಬಳಿಸುವ ಮೂಲಕ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಲಂಕಾದ ಮಿಸ್ಟ್ರಿ ಸ್ಪಿನ್ನರ್ ಮುತ್ತಯ್ಯ ಮುರುಳೀಧರನ್ 800 ವಿಕೆಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

Read more Photos on
click me!

Recommended Stories