Ind vs NZ Kanpur Test: ಹರ್ಭಜನ್ ಸಿಂಗ್ ವಿಕೆಟ್‌ ದಾಖಲೆ ಸರಿಗಟ್ಟಿದ ರವಿಚಂದ್ರನ್ ಅಶ್ವಿನ್‌..!

Suvarna News   | Asianet News
Published : Nov 28, 2021, 05:28 PM IST

ಬೆಂಗಳೂರು: ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ ಮೊದಲ ಟೆಸ್ಟ್‌ ಪಂದ್ಯವು ರೋಚಕ ಘಟ್ಟ ತಲುಪಿದ್ದು, ಆತಿಥೇಯ ಟೀಂ ಇಂಡಿಯಾ (Team India) ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ. ಈ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ (Ravichandran Ashwin), ಹಿರಿಯ ಆಫ್‌ಸ್ಪಿನ್ನರ್ ಹರ್ಭಜನ್ ಸಿಂಗ್ (Harbhajan Singh) ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.   

PREV
17
Ind vs NZ Kanpur Test: ಹರ್ಭಜನ್ ಸಿಂಗ್ ವಿಕೆಟ್‌ ದಾಖಲೆ ಸರಿಗಟ್ಟಿದ ರವಿಚಂದ್ರನ್ ಅಶ್ವಿನ್‌..!

ಕಾನ್ಪುರದ ಗ್ರೀನ್‌ ಪಾರ್ಕ್‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್‌ ನಡುವಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ, ಪ್ರವಾಸಿ ನ್ಯೂಜಿಲೆಂಡ್ ಮೇಲೆ ಬಿಗಿಹಿಡಿತ ಸಾಧಿಸಿತ್ತು ಗೆಲ್ಲಲು 284 ರನ್‌ಗಳ ಕಠಿಣ ಗುರಿ ನೀಡಿದೆ.

27

ಒಂದು ಹಂತದಲ್ಲಿ 51 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್‌ ಅಯ್ಯರ್(65), ವೃದ್ದಿಮಾನ್ ಸಾಹ(61*) ಹಾಗೂ ರವಿಚಂದ್ರನ್ ಅಶ್ವಿನ್‌(32) ಸಮಯೋಚಿತ ಬ್ಯಾಟಿಂಗ್‌ ನೆರವಿನಿಂದ 237/7 ರನ್‌ ಬಾರಿಸಿ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತು. 

37

ಟೀಂ ಇಂಡಿಯಾ ನೀಡಿರುವ 284 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡವು ನಾಲ್ಕನೇ ದಿನದಾಟದ ಕೊನೆಯಲ್ಲಿ ಆಘಾತ ಅನುಭವಿಸಿದ್ದು, ಮೊದಲ ಇನಿಂಗ್ಸ್‌ನಲ್ಲಿ 89 ರನ್ ಚಚ್ಚಿದ್ದ ವಿಲ್‌ ಯಂಗ್ ಕೇವಲ 2 ರನ್ ಬಾರಿಸಿ ರವಿಚಂದ್ರನ್‌ ಅಶ್ವಿನ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ.

47

ಇದರೊಂದಿಗೆ ರವಿಚಂದ್ರನ್ ಅಶ್ವಿನ್‌, ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರ ಗರಿಷ್ಠ ವಿಕೆಟ್(417) ವಿಕೆಟ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದಷ್ಟೇ ಅಲ್ಲದೇ ಟೆಸ್ಟ್‌ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಭಾರತದ ಬೌಲರ್‌ಗಳ ಪಟ್ಟಿಯಲ್ಲಿ ಅಶ್ವಿನ್‌, ಭಜ್ಜಿ ಜತೆ ಜಂಟಿ ಮೂರನೇ ಸ್ಥಾನಕ್ಕೇರಿದ್ದಾರೆ.

57

ಅನುಭವಿ ಆಫ್‌ ಸ್ಪಿನ್ನರ್ ಹರ್ಭಜನ್ ಸಿಂಗ್‌ 103 ಟೆಸ್ಟ್ ಪಂದ್ಯಗಳನ್ನಾಡಿ 190 ಇನಿಂಗ್ಸ್‌ಗಳಿಂದ 417 ವಿಕೆಟ್ ಪಡೆದಿದ್ದರು. ಆದರೆ ತಮಿಳುನಾಡು ಮೂಲದ ರವಿಚಂದ್ರನ್ ಅಶ್ವಿನ್ ಇದೀಗ ಕೇವಲ 80 ಟೆಸ್ಟ್ ಪಂದ್ಯಗಳ 150 ಇನಿಂಗ್ಸ್‌ಗಳಲ್ಲೇ ಭಜ್ಜಿ ದಾಖಲೆ ಸರಿಗಟ್ಟಿದ್ದಾರೆ.

67

ಇನ್ನು ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ದಾಖಲೆ ಕನ್ನಡಿಗ ಅನಿಲ್ ಕುಂಬ್ಳೆ ಹೆಸರಿನಲ್ಲಿದೆ. ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ 132 ಪಂದ್ಯಗಳಿಂದ 619 ವಿಕೆಟ್ ಉರುಳಿಸಿದ್ದಾರೆ. ಇನ್ನು ಮಾಜಿ ನಾಯಕ ಕಪಿಲ್ ದೇವ್‌ 131 ಪಂದ್ಯಗಳನ್ನಾಡಿ 434 ವಿಕೆಟ್ ಕಬಳಿಸುವ ಮೂಲಕ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

77

ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಟ್ಟಾರೆ ಗರಿಷ್ಠ ವಿಕೆಟ್ ಕಬಳಿಸಿದ ದಾಖಲೆ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರುಳೀಧರನ್ ಅವರ ಹೆಸರಿನಲ್ಲಿದೆ. ಮುರುಳಿ 133 ಟೆಸ್ಟ್ ಪಂದ್ಯಗಳನ್ನಾಡಿ 800 ವಿಕೆಟ್ ಕಬಳಿಸಿ ಮೊದಲ ಸ್ಥಾನದಲ್ಲಿದ್ದಾರೆ.

Read more Photos on
click me!

Recommended Stories