ಐಪಿಎಲ್ 2026 ಸೀಸನ್‌ಗೆ ತಂಡಗಳು ಸಿದ್ಧವಾಗುತ್ತಿವೆ. ಈ ಸಮಯದಲ್ಲಿ, ಐಪಿಎಲ್‌ನಲ್ಲಿ ನಾಯಕರು ಎದುರಿಸುವ ಮಾನಸಿಕ ಮತ್ತು ದೈಹಿಕ ಒತ್ತಡದ ಬಗ್ಗೆ ಕೆಎಲ್ ರಾಹುಲ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಇದು ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹೋಲಿಸಿದರೆ ಐಪಿಎಲ್‌ನಲ್ಲಿ ನಾಯಕತ್ವದ ಹೊರೆ ವಿವರಿಸಲಾಗದ್ದು ಎಂದಿದ್ದಾರೆ ರಾಹುಲ್. ಎರಡು ತಿಂಗಳ ಟೂರ್ನಿ ಮುಗಿಯುವಷ್ಟರಲ್ಲಿ 10 ತಿಂಗಳ ಕ್ರಿಕೆಟ್ ಆಡಿದಷ್ಟು ದೇಹ ಮತ್ತು ಮನಸ್ಸು ದಣಿಯುತ್ತಿತ್ತು ಎಂದಿದ್ದಾರೆ.
25
ಮಾಲೀಕರ ಪ್ರಶ್ನೆಗಳೇ ದೊಡ್ಡ ಹೊರೆ
ಕ್ರೀಡಾ ಹಿನ್ನೆಲೆ ಇಲ್ಲದ ಫ್ರಾಂಚೈಸಿ ಮಾಲೀಕರು ಪಂದ್ಯದ ತಂತ್ರಗಳ ಬಗ್ಗೆ ಕೇಳುವ ಪ್ರಶ್ನೆಗಳು ನಾಯಕರನ್ನು ಮಾನಸಿಕವಾಗಿ ದಣಿಸುತ್ತವೆ. 'ಆ ಬದಲಾವಣೆ ಏಕೆ? ಅವನು ಯಾಕೆ ಆಡಿದ?' ಎಂಬಂತಹ ಪ್ರಶ್ನೆಗಳು ಎದುರಾಗುತ್ತವೆ ಎಂದಿದ್ದಾರೆ.
35
ಐಪಿಎಲ್-ಅಂತಾರಾಷ್ಟ್ರೀಯ ಕ್ರಿಕೆಟ್ ಯಾಕೆ ಭಿನ್ನ?
ಅಂತಾರಾಷ್ಟ್ರೀಯ ತಂಡದಲ್ಲಿ ಕೋಚ್‌ಗಳು ಮತ್ತು ಆಯ್ಕೆಗಾರರು ಆಟವನ್ನು ಅರ್ಥಮಾಡಿಕೊಳ್ಳುತ್ತಾರೆ. ಆದರೆ ಕ್ರೀಡಾ ಹಿನ್ನೆಲೆ ಇಲ್ಲದ ಮಾಲೀಕರಿಗೆ ನಿರ್ಧಾರಗಳನ್ನು ವಿವರಿಸುವುದು ಕಷ್ಟ ಎಂದು ರಾಹುಲ್ ಹೇಳಿದ್ದಾರೆ.
2024ರಲ್ಲಿ SRH ವಿರುದ್ಧ ಸೋತ ನಂತರ LSG ಮಾಲೀಕ ಸಂಜೀವ್ ಗೋಯೆಂಕಾ ರಾಹುಲ್ ಜೊತೆ ಮೈದಾನದಲ್ಲಿ ವಾಗ್ವಾದ ನಡೆಸಿದ್ದು ವೈರಲ್ ಆಗಿತ್ತು. ಇದರಿಂದ ರಾಹುಲ್ ಮೇಲೆ ತೀವ್ರ ಒತ್ತಡ ಉಂಟಾಗಿತ್ತು. ಆ ಸೀಸನ್ ನಂತರ ಅವರು ಫ್ರಾಂಚೈಸಿ ತೊರೆದರು.
55
ಕೆಎಲ್ ರಾಹುಲ್ ಸಂದರ್ಶನ ಯಾಕೆ ವೈರಲ್ ಆಗ್ತಿದೆ?
'ಹ್ಯೂಮನ್ಸ್ ಆಫ್ ಬಾಂಬೆ' ಸಂದರ್ಶನದಲ್ಲಿ ರಾಹುಲ್ ಅವರ ಈ ಮಾತುಗಳು ವೈರಲ್ ಆಗಿವೆ. ಆಟದಲ್ಲಿ ಎಲ್ಲವೂ ನಮ್ಮ ನಿಯಂತ್ರಣದಲ್ಲಿರುವುದಿಲ್ಲ, ಆದರೆ ನಾಯಕರು ಪ್ರತಿ ನಿರ್ಧಾರಕ್ಕೂ ಜವಾಬ್ದಾರರಾಗಿರಬೇಕು ಎಂದು ಅವರು ಹೇಳಿದ್ದಾರೆ.