RCB ಈ ಸ್ಟಾರ್ IPL ಆಟಗಾರನನ್ನು ಕೈಬಿಟ್ಟಿದ್ದೇಕೆಂದು ನನಗಂತೂ ಅರ್ಥವಾಗಿಲ್ಲ: ಕೆವಿನ್ ಪೀಟರ್‌ಸನ್‌..!

Published : Apr 20, 2023, 02:41 PM IST

ಬೆಂಗಳೂರು: 16ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯು ಭರ್ಜರಿಯಾಗಿಯೇ ಸಾಗುತ್ತಿದೆ. ಚೊಚ್ಚಲ ಟ್ರೋಫಿ ಕನವರಿಯಲ್ಲಿರುವ ಆರ್‌ಸಿಬಿ ತಂಡವು ಈ ಬಾರಿ ಕೂಡಾ ಸ್ಥಿರ ಪ್ರದರ್ಶನ ತೋರಲು ವಿಫಲವಾಗುತ್ತಿದೆ. ಹೀಗಿರುವಾಗಲೇ ಇಂಗ್ಲೆಂಡ್ ದಿಗ್ಗಜ ಕ್ರಿಕೆಟಿಗ ಕೆವಿನ್‌ ಪೀಟರ್‌ಸನ್‌, ಆರ್‌ಸಿಬಿ ತಂಡವು ಮಾಡಿದ ಮಹಾ ಎಡವಟ್ಟಿನ ಬಗ್ಗೆ ತುಟಿಬಿಚ್ಚಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್‌ ಇಲ್ಲಿದೆ.  

PREV
17
RCB ಈ ಸ್ಟಾರ್ IPL ಆಟಗಾರನನ್ನು ಕೈಬಿಟ್ಟಿದ್ದೇಕೆಂದು ನನಗಂತೂ ಅರ್ಥವಾಗಿಲ್ಲ: ಕೆವಿನ್ ಪೀಟರ್‌ಸನ್‌..!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು 16ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ತಾನಾಡಿದ ಮೊದಲ 5 ಪಂದ್ಯಗಳಲ್ಲಿ ಎರಡು ಗೆಲುವು ಹಾಗೂ 3 ಸೋಲುಗಳ ಸಹಿತ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದು, ಸ್ಥಿರ ಪ್ರದರ್ಶನ ತೋರಲು ಪರದಾಡುತ್ತಿದೆ.

27

ಇನ್ನು ಐಪಿಎಲ್ ಇತಿಹಾಸದಲ್ಲಿ  ಡ್ವೇನ್‌ ಬ್ರಾವೋ ಒಟ್ಟು 161 ಐಪಿಎಲ್‌ ಪಂದ್ಯಗಳನ್ನಾಡಿ 183 ವಿಕೆಟ್ ಕಬಳಿಸುವ ಮೂಲಕ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ಆ ದಾಖಲೆ ಮುರಿಯುವ ಹೊಸ್ತಿಲಲ್ಲಿ ಆರ್‌ಸಿಬಿ ಬೌಲರ್ ಇದ್ದಾರೆ.
 

37

ಹೌದು, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ಆಟಗಾರ ಹಾಗೂ ರಾಜಸ್ಥಾನ ರಾಯಲ್ಸ್‌ನ ಸ್ಟಾರ್ ಸ್ಪಿನ್ನರ್ ಯುಜುವೇಂದ್ರ ಚಹಲ್ ಇನ್ನು ಕೇವಲ 7 ವಿಕೆಟ್‌ ಕಬಳಿಸಿದರೆ, ಐಪಿಎಲ್‌ನಲ್ಲಿ ಅತಿಹೆಚ್ಚು ವಿಕೆಟ್‌ ಕಬಳಿಸಿದ ಬೌಲರ್ ಎನ್ನುವ ಅಪರೂಪದ ದಾಖಲೆ ನಿರ್ಮಿಸಲಿದ್ದಾರೆ.

47

ಯುಜುವೇಂದ್ರ ಚಹಲ್‌ ಸದ್ಯ 137 ಐಪಿಎಲ್‌ ಪಂದ್ಯಗಳನ್ನಾಡಿ 177 ವಿಕೆಟ್‌ ಕಬಳಿಸಿದ್ದಾರೆ. ಐಪಿಎಲ್‌ನ ಬಹುಪಾಲು ಪಂದ್ಯಗಳನ್ನು ಆರ್‌ಸಿಬಿ ಪರ ಆಡಿದ್ದ ಚಹಲ್‌ ಅವರನ್ನು ಬೆಂಗಳೂರು ಫ್ರಾಂಚೈಸಿಯು ರೀಟೈನ್‌ ಮಾಡದೇ ಹೋಗಿದ್ದಕ್ಕೆ ಕೆವಿನ್ ಪೀಟರ್‌ಸನ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

57

ಯುಜುವೇಂದ್ರ ಚಹಲ್ ಅವರನ್ನು 2022ರ ಐಪಿಎಲ್ ಟೂರ್ನಿಯ ಹರಾಜಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿಯು ರಿಲೀಸ್‌ ಮಾಡಿತ್ತು. ಇದಾದ ಬಳಿಕ ಹರಾಜಿನಲ್ಲಿ ಚಹಲ್ ಅವರನ್ನು ರಾಜಸ್ಥಾನ ರಾಯಲ್ಸ್‌, ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. 

67

ಐಪಿಎಲ್ ಇತಿಹಾಸದಲ್ಲಿ ರಾಜಸ್ಥಾನ ರಾಯಲ್ಸ್‌ ಪಡೆದ ಅತ್ಯಂತ ಅಮೂಲ್ಯವಾದ ಗಿಫ್ಟ್ ಎಂದರೆ ಅದು ಯುಜುವೇಂದ್ರ ಚಹಲ್. ಬೆಂಗಳೂರು ಫ್ರಾಂಚೈಸಿಯು ಅವರನ್ನು ಕೈಬಿಟ್ಟಿದ್ದೇಕೆ ಎನ್ನುವುದು ಇಂದಿಗೂ ಅರ್ಥವಾಗಿಲ್ಲ. ಯಾವಾಗಲೂ ವಿಕೆಟ್ ಕಬಳಿಸುವ ಮೂಲಕ ತಂಡಕ್ಕೆ ನೆರವಾಗುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ. ಈಗ ಅವರು ಪಿಂಕ್ ಜೆರ್ಸಿ ಪರ ಆಡುತ್ತಿದ್ದಾರೆ ಎಂದರೆ ನಂಬಲಾಗುತ್ತಿಲ್ಲ. ಅವರು ಆರ್‌ಸಿಬಿ ತಂಡದ ಅಮೂಲ್ಯ ಆಸ್ತಿಯಾಗಿದ್ದರು ಎಂದು ಪೀಟರ್‌ಸನ್ ಅಭಿಪ್ರಾಯಪಟ್ಟಿದ್ದಾರೆ.

77

2023ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಯುಜುವೇಂದ್ರ ಚಹಲ್‌ ಒಟ್ಟಾರೆ 11 ವಿಕೆಟ್‌ ಕಬಳಿಸುವ ಮೂಲಕ, ಗರಿಷ್ಠ ವಿಕೆಟ್‌ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

Read more Photos on
click me!

Recommended Stories