IPL 2023: ವೆಂಕಟೇಶ್‌ ಆಯ್ಯರ್‌ ಸಿಡಿಸಿದ ಶತಕ ಸೆಲೆಬ್ರೆಟ್‌ ಮಾಡಿದ ಸುಹಾನ ಖಾನ್‌

Published : Apr 17, 2023, 05:19 PM IST

ಕೋಲ್ಕತಾ ನೈಟ್ ರೈಡರ್ಸ್ 2008 ರ  ಮೊದಲ ಸಿಸನ್‌ನಲ್ಲಿ ಬ್ರೆಂಡನ್ ಮೆಕಲ್ಲಮ್ ಅವರ  158 ರ ನಂತರ ಐಪಿಎಲ್‌ನಲ್ಲಿ ಅಂಥದ್ದೊಂದು ಸೆಂಚುರಿಗಾಗಿ ಇಷ್ಷು ವರ್ಷಗಳ ಕಾಲ  ಕಾಯುಬೇಕಾಯಿತು. ಆದರೆ 15 ವರ್ಷಗಳ ದೀರ್ಘ ಕಾಯುವಿಕೆ ಏಪ್ರಿಲ್ 16 ರ ಭಾನುವಾರದಂದು ಕೊನೆಗೊಂಡಿತು. ಇದೇ ಸಮಯದಲ್ಲಿ ಕ್ರೀಡಾಂಗಣದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಮತ್ತು ಕೆಕೆಆರ್‌ನ ಸಹ-ಮಾಲೀಕ ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಎಲ್ಲರ ಗಮನ ಸೆಳೆದರು. 

PREV
15
IPL 2023: ವೆಂಕಟೇಶ್‌ ಆಯ್ಯರ್‌ ಸಿಡಿಸಿದ  ಶತಕ ಸೆಲೆಬ್ರೆಟ್‌ ಮಾಡಿದ ಸುಹಾನ ಖಾನ್‌

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್‌ ಪರವಾಗಿ ಬ್ಯಾಟ್‌ ಮಾಡಿದ  ವೆಂಕಟೇಶ್‌ ಅಯ್ಯರ್  104 ರನ್‌ಗಳ ಭರ್ಜರಿ ಶತಕ ಬಾರಿಸಿದ್ದಾರೆ.

25

ಪಂದ್ಯದ ನಾಲ್ಕನೇ ಓವರ್‌ನಲ್ಲಿ ಕಾಲು ಗಾಯಗೊಂಡ ನೋವಿನಿಂದ ಬಳಲುತ್ತಿದ್ದ ವೆಂಕಟೇಶ್‌ ಆಯ್ಯರ್‌ ಅವರು ವಿಕೆಟ್‌ಗಳ ನಡುವೆ ಓಡಲು ಹೆಣಗಾಡಿದರು. ಆದರೆ ಬಾಲ್‌ ಅನ್ನು ಬೌಂಡರಿ ದಾಟಿಸುವಲ್ಲಿ ಹಿಂದೆ ಬೀಳಲಿಲ್ಲ.

35

ಐದು ಬೌಂಡರಿ  ಮತ್ತು ಒಂಬತ್ತು ಸಿಕ್ಸರ್‌ಗಳನ್ನು ಸಿಡಿಸಿ , ಕೆಕೆಆರ್ ಸ್ಟಾರ್ ಆಯ್ಯರ್‌ ತಮ್ಮ ಮೊದಲ ಐಪಿಎಲ್ ಶತಕ ದಾಖಲಿಸಿದರು  ಹಾಗೂ ಇದು ಕೋಲ್ಕತಾ ಪರ ದಾಖಲಾದ ಎರಡನೇ ಶತಕ ಎನಿಸಿಕೊಂಡಿತ್ತು. 

45

ಆಯ್ಯರ್‌ ಅವರ ಭರ್ಜರಿ ಬ್ಯಾಟಿಂಗ್‌ ವೀಡಿಯೋ ಒಂದು ಕಡೆ ವೈರಲ್‌ ಆಗುತ್ತಿದ್ದರೆ, ಇನ್ನೊಂದು ಕಡೆ ಬಾಲಿವುಡ್ ಸೂಪರ್‌ಸ್ಟಾರ್ ಮತ್ತು ಕೆಕೆಆರ್‌ನ ಸಹ-ಮಾಲೀಕ ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಎಲ್ಲರ ಗಮನ ಸೆಳೆದರು.

55

ಈ ಪಂದ್ಯ ವೀಕ್ಷಿಸಲು ಸ್ಟ್ಯಾಂಡ್‌ನಲ್ಲಿದ್ದ  ಸುಹಾನಾ ಖಾನ್, ಆಯ್ಯರ್‌ ಅವರ ಶತಕ  ಸಾಧನೆಗೆ ಸಂತೋಷದಿಂದ ಎದ್ದು ನಿಂತು ಚಪ್ಪಾಳೆ ತಟ್ಟಿ ಸಂಭ್ರಮಿಸಿದರೆ, ನೂರು ರನ್‌ ತಲುಪಿದ ನಂತರ, ಅಯ್ಯರ್ ವಿಶೇಷ ಗೆಸ್ಚರ್‌ನೊಂದಿಗೆ ಆಚರಿಸಿದರು. ಈಗ ಈ  ವೀಡೀಯೋ ಇಂಟರ್‌ನೆಟ್‌ನಲ್ಲಿ  ಸಾಕಷ್ಷು ಸದ್ದು ಮಾಡುತ್ತಿದೆ. 

Read more Photos on
click me!

Recommended Stories