ಇಂಡಿಯಾ ಪಾಕಿಸ್ತಾನ ಪಂದ್ಯದ ದಿನವೇ ಕರ್ವಾ ಚೌತ್‌: ಈ ಬಾರಿ ದುಬೈನಲ್ಲಿ ಹಬ್ಬ

First Published | Oct 24, 2021, 4:44 PM IST

ಅಕ್ಟೋಬರ್ 24 ರ ಭಾನುವಾರದಂದು, ಕರ್ವಾ ಚೌತ್ Karva Chauth 2021) ಹಬ್ಬವನ್ನು ದೇಶದಾದ್ಯಂತ ಗ್ರ್ಯಾಂಡ್‌ ಆಗಿ ಆಚರಿಸಲಾಗುತ್ತದೆ. ಅದರ ಜೊತೆಗೆ, ಅದೇ ದಿನ 2021 ರ ಟಿ 20 ವಿಶ್ವಕಪ್‌ನಲ್ಲಿ (T20 World Cup)  ಭಾರತ (India)  ಮತ್ತು ಪಾಕಿಸ್ತಾನದ (Pakistan) ನಡುವೆ  ಪಂದ್ಯವಿದೆ.  ಸಾಮಾನ್ಯ ಜನರಂತೆ, ಕ್ರಿಕೆಟಿಗರ ಪತ್ನಿಯರು ಕೂಡ ತಮ್ಮ ಗಂಡನ ದೀರ್ಘಾಯುಷ್ಯ ಮತ್ತು ಯಶಸ್ಸಿಗಾಗಿ ಕರ್ವಾ ಚೌತ್ ಉಪವಾಸವನ್ನು ಆಚರಿಸುತ್ತಾರೆ. ಪ್ರಸ್ತುತ ಯುಎಇಯಲ್ಲಿರುವ (UAE) ಟೀಮ್‌ ಇಂಡಿಯಾದ  ಯಾವ ಆಟಗಾರರು ತಮ್ಮ ಪತ್ನಿಯೊಂದಿಗೆ ಕರ್ವಾ ಚೌತ್ ಆಚರಿಸಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿಯೊಂದಿಗೆ ಪ್ರತಿ ವರ್ಷ ಕರ್ವಾ ಚೌತ್ ಹಬ್ಬವನ್ನು ಆಚರಿಸುತ್ತಾರೆ. ಕೆಲವು ವರ್ಷಗಳ ಹಿಂದೆ, ಅವರು ಕರ್ವಾ ಚೌತ್ ಸಂದರ್ಭದಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಬಾರಿಯೂ ಅವರ ಪತ್ನಿ ಯುಎಇಯಲ್ಲಿ ಅವರ ಜೊತೆಗಿದ್ದಾರೆ ಮತ್ತು ಮಗಳು ಹುಟ್ಟಿದ ನಂತರ ಇದು ಅವರ ಮೊದಲ ಕರ್ವಾ ಚೌತ್ ಆಗಿದೆ.

ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ ಅವರು ತಮ್ಮ ಪತ್ನಿಯೊಂದಿಗೆ ಪ್ರತಿ ವರ್ಷ ಕರ್ವಾ ಚೌತ್ ಆಚರಿಸುತ್ತಾರೆ.  ಈ ಬಾರಿ ರೋಹಿತ್‌ ಶರ್ಮರ ಪತ್ನಿ ರಿತಿಕಾ  ಸಹ ಪತಿಯನ್ನು ಚಿಯರ್‌ ಮಾಡಲು UAEಗೆ ತೆರಳಿದ್ದಾರೆ.

Tap to resize

ಭಾರತೀಯ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಈ ವರ್ಷದ ಮಾರ್ಚ್‌ನಲ್ಲಿ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರನ್ನು ವಿವಾಹವಾದರು.   ಮೊದಲ ಬಾರಿಗೆ ಈ ಜೋಡಿಈ ಹಬ್ಬವನ್ನು ಆಚರಿಸಲಿದ್ದಾರೆ. ಸಂಜನಾ ಪ್ರಸ್ತುತ ಬುಮ್ರಾ ಅವರೊಂದಿಗೆ ಯುಎಇಯಲ್ಲಿದ್ದು, ತಮ್ಮ ಆಂಕರಿಂಗ್‌ನತ್ತ ಗಮನ ಹರಿಸುತ್ತಿದ್ದಾರೆ.

ಐಪಿಎಲ್ ನಂತರ ಕಳೆದ ವರ್ಷ ಡಿಸೆಂಬರ್‌ನಲ್ಲಿ ತನ್ನ ದೀರ್ಘಕಾಲದ ಗೆಳತಿಯನ್ನು ವಿವಾಹವಾದ ವರುಣ್ ಚಕ್ರವರ್ತಿಗೆ ಇದು ಮೊದಲ ಕರ್ವಾ ಚೌತ್ ಆಗಿರುತ್ತದೆ. ವರುಣ್  ಅವರ ಪತ್ನಿ  ನೇಹಾ ಖೇಡೇಕರ್ ಕೂಡ ಅವರ ಜೊತೆ ಪ್ರಸ್ತುತ ಯುಎಇಯಲ್ಲಿದ್ದಾರೆ. 

ಟೀಮ್‌ ಇಂಡಿಯಾದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಕೂಡ ಪ್ರತಿ ವರ್ಷ ತಮ್ಮ ಪತ್ನಿಯೊಂದಿಗೆ ಕರ್ವಾ ಚೌತ್ ಹಬ್ಬವನ್ನು ಆಚರಿಸುತ್ತಾರೆ. ಕಳೆದ ವರ್ಷ, ಕರ್ವಾ ಚೌತ್‌ ಸಮಯದಲ್ಲಿ, ಅವರು ತಮ್ಮ ಪತ್ನಿ ಜೊತೆ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಅವರಿಗೆ ವಿಶ್‌ ಮಾಡಿದ್ದರು. ಭುವಿ 2017 ರಲ್ಲಿ ನೂಪುರ್ ನಗರ್ ಅವರನ್ನು ವಿವಾಹವಾದರು.

ಹಾರ್ದಿಕ್ ಪಾಂಡ್ಯ ಕಳೆದ ವರ್ಷ ಕರ್ವಾ ಚೌತ್ ಸಂದರ್ಭದಲ್ಲಿ ಪತ್ನಿಯಿಂದ ದೂರವಾಗಿದ್ದರು. ಅವರ ಮದುವೆಯ ನಂತರ ಮೊದಲ ಕರ್ವ ಚೌತ್ ಆಗಿತ್ತರು. ಆದರೆ ಈ ಬಾರಿ ಹಾರ್ದಿಕ್ ಅವರ ಪತ್ನಿ ನತಾಶಾ ಸ್ಟ್ಯಾಂಕೋವಿಕ್ ಸಹ ಯುಎಇ ಯಲ್ಲಿದ್ದಾರೆ ಮತ್ತು ಅವರು ಎರಡನೇ ಕರ್ವಾ ಚೌತ್ ಅನ್ನು ಹಾರ್ದಿಕ್‌ ಜೊತೆ ಆಚರಿಸುತ್ತಾರೆ.

ಈ ವರ್ಷ  ಭಾರತ ತಂಡದಲ್ಲಿ ಸ್ಥಾನ ಪಡೆದ ಸೂರ್ಯಕುಮಾರ್ ಯಾದವ್, 2016 ರಲ್ಲಿ ದೇವಿಶಾ ಶೆಟ್ಟಿ ಅವರ ಜೊತೆ ವಿವಾಹವಾಗಿದ್ದಾರೆ.  ಸೂರ್ಯ ಸೂರ್ಯಕುಮಾರ್ ಯಾದವ್ ಈ ಬಾರಿ ದುಬೈನಲ್ಲಿ  ತನ್ನ ಪತ್ನಿಯೊಂದಿಗೆ ಕರ್ವ ಚೌತ್ ಆಚರಿಸಲಿದ್ದಾರೆ.

ಟೀಮ್‌ ಇಂಡಿಯಾದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಈ ಬಾರಿ ಟಿ 20 ವಿಶ್ವಕಪ್‌ನಲ್ಲಿ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಆದರೆ ಈ ವರ್ಷ ಅವರು ತಮ್ಮ ಪತ್ನಿ ಧನಶ್ರೀ ವರ್ಮಾ ಅವರೊಂದಿಗೆ ಮೊದಲ ಕರ್ವಾ ಚೌತ್ ಆಚರಿಸಲಿದ್ದಾರೆ. ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ಮದುವೆಯಾದರು.

Latest Videos

click me!