ಯುವಿ, ಕೈಫ್, ಜಡ್ಡು ಅಲ್ಲವೇ ಅಲ್ಲ ಈತನೇ ಭಾರತದ ಸಾರ್ವಕಾಲಿಕ ಶ್ರೇಷ್ಠ ಫೀಲ್ಡರ್ ಎಂದ ಜಾಂಟಿ ರೋಡ್ಸ್‌!

Published : Aug 15, 2025, 05:37 PM IST

ಬೆಂಗಳೂರು: ಭಾರತ ಕ್ರಿಕೆಟ್ ತಂಡವು ಹಲವು ದಿಗ್ಗಜ ಆಟಗಾರರನ್ನು ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದೆ. ಹಲವಾರು ಕ್ರಿಕೆಟಿಗರು ಬ್ಯಾಟಿಂಗ್, ಬೌಲಿಂಗ್ ಮಾತ್ರವಲ್ಲದೇ ಚುರುಕಿನ ಕ್ಷೇತ್ರರಕ್ಷಣೆ ಮೂಲಕ ತಮ್ಮದೇ ಛಾಪು ಮೂಡಿಸಿದ್ದರಾರೆ. ಇದೀಗ ಜಾಂಟಿ ರೋಡ್ಸ್‌ ಭಾರತದ ಶ್ರೇಷ್ಠ ಫೀಲ್ಡರ್ ಹೆಸರಿಸಿದ್ದಾರೆ. 

PREV
110

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್, ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ಫೀಲ್ಡರ್ ಎನ್ನುವ ಖ್ಯಾತಿ ಗಳಿಸಿದ್ದಾರೆ. 

210

ಜಾಂಟಿ ಬಳಿ ಚೆಂಡು ಹೋದರೆ ಎದುರಾಳಿ ಪಡೆಯ ಬ್ಯಾಟರ್‌ಗಳು ರನ್ ಕದಿಯಲು ಹಿಂದೇಟು ಹಾಕುತ್ತಿದ್ದರು.

310

ಈಗಲೂ ಜಾಂಟಿ ರೋಡ್ಸ್‌ ಹಲವು ಕ್ರಿಕೆಟಿಗರ ಪಾಲಿಗೆ ಕ್ಷೇತ್ರರಕ್ಷಣೆಯ ವಿಚಾರದಲ್ಲಿ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ಹೀಗಿರುವ ರೋಡ್ಸ್‌ ಭಾರತದ ಸಾರ್ವಕಾಲಿಕ ಶ್ರೇಷ್ಠ ಫೀಲ್ಡರ್ ಯಾರು ಎನ್ನುವ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

410

ಹೌದು, ಭಾರತ ತಂಡದಲ್ಲೂ ಹಲವು ಫಿಟ್ ಕ್ರಿಕೆಟಿಗರಿದ್ದು, ತಮ್ಮ ಚುರುಕಿನ ಕ್ಷೇತ್ರರಕ್ಷಣೆಯ ಮೂಲಕವೇ ಎದುರಾಳಿಗಳ ಪಾಲಿಗೆ ಸಿಂಹಸ್ವಪ್ನರಾಗಿ ಕಾಡಿದ್ದಾರೆ.

510

90ರ ದಶಕದ ಬಳಿಕ ಭಾರತದ ಕ್ಷೇತ್ರರಕ್ಷಣೆ ದಿನದಿಂದ ದಿನಕ್ಕೆ ವಿಶ್ವದರ್ಜೆಗೆ ಏರುತ್ತಲೇ ಬಂದಿದೆ. ಅದರಲ್ಲೂ ಮೊಹಮ್ಮದ್ ಕೈಫ್ ಹಾಗೂ ಯುವರಾಜ್ ಸಿಂಗ್ ಎಂತಹ ಕಠಿಣ ಕ್ಯಾಚ್ ಗಳಾಗಿದ್ದರೂ ಅನಾಯಾಸವಾಗಿ ಹಿಡಿಯುತ್ತಿದ್ದರು.

610

ಕ್ಯಾಚ್ ವಿನ್ಸ್ ಮ್ಯಾಚ್ ಎನ್ನುವಂತೆ, ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್ ಜತೆಗೆ ಈಗ ರವೀಂದ್ರ ಜಡೇಜಾ ಕೂಡಾ ಅದ್ಭುತ ಕ್ಷೇತ್ರರಕ್ಷಣೆಯ ಮೂಲಕವೇ ಭಾರತಕ್ಕೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.

710

ಹೀಗಿರುವಾಗ ಒಂದು ವಿಡಿಯೋ ಸಂದರ್ಶನದಲ್ಲಿ ಜಾಂಟಿ ರೋಡ್ಸ್‌ಗೆ ಭಾರತದ ಸಾರ್ವಕಾಲಿಕ ಶ್ರೇಷ್ಠ ಫೀಲ್ಡರ್ ಯಾರು ಎನ್ನುವ ಪ್ರಶ್ನೆಗೆ ಕೊಂಚವೂ ಆಲೋಚಿಸದೇ ಸುರೇಶ್ ರೈನಾ ಎಂದು ಹೇಳಿದ್ದಾರೆ.

810

ಜಡೇಜಾ ಪ್ರತಿ ಬಾರಿಯೂ ಚೆಂಡನ್ನು ವಿಕೆಟ್‌ಗೆ ಎಸೆಯಬಲ್ಲರು. ಅವರು ಫೀಲ್ಡಿಂಗ್‌ನಲ್ಲಿ ಯಾವಾಗಲೂ ಚುರುಕಾಗಿರುತ್ತಾರೆ. ಆದರೆ ಸುರೇಶ್ ರೈನಾ ಅವರನ್ನು ಆರಂಭದಿಂದಲೂ ನೋಡುತ್ತಾ ಬಂದಿದ್ದೇನೆ.

910

ಎಬಿ ಡಿವಿಲಿಯರ್ಸ್ ಹಾಗೂ ಸುರೇಶ್ ರೈನಾ ಫೀಲ್ಡಿಂಗ್‌ನಲ್ಲಿ ಮೋಡಿ ಮಾಡುತ್ತಾರೆ. ಸುರೇಶ್ ರೈನಾ ಅವರ ಫೀಲ್ಡಿಂಗ್ ನೋಡುತ್ತಿದ್ದರೇ, ನನ್ನನ್ನೇ ನಾನು ಮೈದಾನದಲ್ಲಿ ನೋಡಿದಂತಾಗುತ್ತದೆ.

1010

ನಾನು ಚೆಂಡಿಗಾಗಿ ಡೈವ್ ಮಾಡುತ್ತೇನೆಯೇ ಹೊರತು, ಕ್ಯಾಮರಾದಲ್ಲಿ ಚೆನ್ನಾಗಿ ಕಾಣಲಿ ಎಂದು ಡೈವ್ ಮಾಡುವುದಿಲ್ಲ. ಸುರೇಶ್ ರೈನಾ ಕೂಡಾ ಕ್ಯಾಮರಾ ಫೋಕಸ್ ಬಗ್ಗೆ ತಲೆಕೆಡಿಸಿಕೊಳ್ಳದೇ ತಂಡಕ್ಕಾಗಿ ಪೂರ್ಣ ಎಫರ್ಟ್ ಹಾಕುತ್ತಾರೆ ಎಂದು ರೋಡ್ಸ್ ಅಭಿಪ್ರಾಯಪಟ್ಟಿದ್ದಾರೆ.

Read more Photos on
click me!

Recommended Stories