ಮತ್ತೆ ಮೊಹಮ್ಮದ್ ಶಮಿ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡ್ತಾರಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

Published : Jan 06, 2026, 04:15 PM IST

ಬೆಂಗಳೂರು: ನ್ಯೂಜಿಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಅನುಭವಿ ವೇಗಿ ಮೊಹಮ್ಮದ್ ಶಮಿ ವಿಫಲವಾಗಿದ್ದಾರೆ. ಹಾಗಂತ ಶಮಿ ಕ್ರಿಕೆಟ್ ಬದುಕು ಮುಗಿಯಿತಾ ಎನ್ನುವ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ. 

PREV
16
ಶಮಿ ಕ್ರಿಕೆಟ್ ಭವಿಷ್ಯ

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ ಬಳಿಕ ಬಿಸಿಸಿಐ ಆಯ್ಕೆ ಸಮಿತಿಯು ಅನುಭವಿ ವೇಗಿ ಮೊಹಮ್ಮದ್ ಶಮಿ ಅವರನ್ನು ಪದೇ ಪದೇ ಕಡೆಗಣಿಸುತ್ತಾ ಬಂದಿದೆ. ಹೀಗಾಗಿ ಶಮಿ ಕ್ರಿಕೆಟ್ ಭವಿಷ್ಯದ ಕುರಿತಂತೆ ಪ್ರಶ್ನೆಗಳು ಏಳಲಾರಂಭಿಸಿವೆ.

26
ಶಮಿಗೆ ಯಾಕೆ ಸಿಗುತ್ತಿಲ್ಲ ಭಾರತ ತಂಡದಲ್ಲಿ ಚಾನ್ಸ್?

ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿರುವ ಮೊಹಮ್ಮದ್ ಶಮಿ, ಸಾಕಷ್ಟು ಸಮಯದಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದಾರೆ. ಹೀಗಾಗಿ ಶಮಿ ಆಯ್ಕೆ ಮಾಡುವ ಮುನ್ನ ಆಯ್ಕೆ ಸಮಿತಿ ಅವರ ಫಿಟ್ನೆಸ್‌ ಅನ್ನು ಎಚ್ಚರಿಕೆಯಿಂದ ಗಮನಿಸುತ್ತಿದೆ.

36
ವೇಗದ ಬೌಲಿಂಗ್‌ ವಿಭಾಗದಲ್ಲಿ ಜೋರಾದ ಸ್ಪರ್ಧೆ

ಭಾರತ ತಂಡದ ಬೌಲಿಂಗ್ ವಿಭಾಗ ಇದೀಗ ಸಾಕಷ್ಟು ಸದೃಢವಾಗಿ ಗುರುತಿಸಿಕೊಂಡಿದ್ದು, ಸಾಕಷ್ಟು ಯುವ ವೇಗದ ಬೌಲರ್‌ಗಳು ಸ್ಥಿರ ಪ್ರದರ್ಶನದ ಮೂಲಕ ಆಯ್ಕೆ ಸಮಿತಿಯ ಮನಗೆದ್ದಿದ್ದಾರೆ. ಹೀಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಶಮಿ ಸಾಕಷ್ಟು ಪೈಪೋಟಿ ನಡೆಸಬೇಕಿದೆ.

46
ಈಗಲೂ ಅನುಭವಕ್ಕೆ ಸಿಗುತ್ತೆ ಪ್ರಾಮುಖ್ಯತೆ

ಐಸಿಸಿ ಟೂರ್ನಿಗಳಲ್ಲಿ ಹಾಗೂ ಒತ್ತಡದ ಪಂದ್ಯಗಳಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವುದು ಸುಲಭದ ಮಾತಲ್ಲ. ಹೀಗಾಗಿ ಶಮಿಯನ್ನು ಅಷ್ಟು ಸುಲಭವಾಗಿ ಮಹತ್ವದ ಟೂರ್ನಿಯಿಂದ ಹೊರಗಿಡಲು ಸಾಧ್ಯವಿಲ್ಲ.

56
ಶಮಿ ಕಮ್‌ಬ್ಯಾಕ್ ಮಾಡಲು ಏನು ಮಾಡಬೇಕು?

ಶಮಿ ಕಮ್‌ಬ್ಯಾಕ್ ಮಾಡಲು ಮೊದಲಿಗೆ ಫಿಟ್ನೆಸ್ ಕಡೆ ಹೆಚ್ಚಿನ ಗಮನ ಕೊಡಬೇಕು. ಇದರ ಜತೆಗೆ ದೇಶಿ ಕ್ರಿಕೆಟ್‌ನಲ್ಲಿ ತಮ್ಮ ಮಾರಕ ದಾಳಿಯನ್ನು ಮುಂದುವರೆಸಬೇಕು. ಫಿಟ್ನೆಸ್ ಹಾಗೂ ಫಾರ್ಮ್ ಜತೆಗಿದ್ದರೇ ಶಮಿಗೆ ಯಾವಾಗ ಬೇಕಿದ್ದರೂ ಭಾರತ ತಂಡದ ಬಾಗಿಲು ಓಪನ್ ಆಗಬಹುದು.

66
ಒಟ್ಟಾರೆ ಹೇಳಬೇಕೆಂದರೇ..

ಶಮಿಗೆ ಭಾರತ ತಂಡದ ಬಾಗಿಲು ಸಂಪೂರ್ಣವಾಗಿ ಮುಚ್ಚಿಲ್ಲ. ಶಮಿ ಕಮ್‌ಬ್ಯಾಕ್ ಅವರ ಫಾರ್ಮ್, ಫಿಟ್ನೆಸ್ ಹಾಗೂ ಆಯ್ಕೆ ಸಮಿತಿಯ ಆಲೋಚನೆಯನ್ನು ಅವಲಂಭಿಸಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories