ಕಪಿಲ್ ದೇವ್ ಬಗ್ಗೆ ನಿಮಗೆ ಗೊತ್ತಿರದ ಟಾಪ್-7 ಇಂಟ್ರೆಸ್ಟಿಂಗ್ ಸಂಗತಿಗಳಿವು! ವಿಶ್ವಕಪ್ ಗೆದ್ದುಕೊಟ್ಟ ನಾಯಕನಿಗಿದೆ ಪಾಕ್ ಕನೆಕ್ಷನ್!

Published : Jan 06, 2026, 01:09 PM IST

ಹರ್ಯಾಣ ಹರಿಕೇನ್ ಖ್ಯಾತಿಯ ಕಪಿಲ್ ದೇವ್ ಇಂದು 67ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಭಾರತಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಕಪಿಲ್ ದೇವ್ ಬಗೆಗಿನ ಏಳು ಇಂಟ್ರೆಸ್ಟಿಂಗ್ ಸಂಗತಿಗಳನ್ನು ತಿಳಿಯೋಣ ಬನ್ನಿ. 

PREV
17
1. ಟೆಸ್ಟ್‌ನಲ್ಲಿ ಅಪರೂಪದ ದಾಖಲೆ:

ಕಪಿಲ್‌ ದೇವ್ ಟೆಸ್ಟ್‌ ಕ್ರಿಕೆಟ್‌ನಲ್ಲಿ 5000ಕ್ಕೂ ಅಧಿಕ ರನ್ ಹಾಗೂ 400ಕ್ಕೂ ಅಧಿಕ ವಿಕೆಟ್ ಕಬಳಿಸಿದ ಏಕೈಕ ಕ್ರಿಕೆಟಿಗ ಎನ್ನುವ ಅಪರೂಪದ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.

27
2. ಏಕದಿನ ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ:

1983ರ ಏಕದಿನ ವಿಶ್ವಕಪ್‌ನಲ್ಲಿ ಕಪಿಲ್‌ ದೇವ್ ಜಿಂಬಾಬ್ವೆ ವಿರುದ್ದ ಅಜೇಯ 175 ರನ್ ಸಿಡಿಸಿದ್ದರು. ಈ ಮೂಲಕ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಎನ್ನುವ ದಾಖಲೆಗೆ ಕಪಿಲ್ ದೇವ್ ಪಾತ್ರರಾಗಿದ್ದರು.

37
3. ಹರ್ಯಾಣ ಹರಿಕೇನ್ ಹೆಸರು ಬಂದಿದ್ದು ಹೇಗೆ?

ಕಪಿಲ್‌ ದೇವ್ ವೇಗದ ಬೌಲರ್ ಆಗಿ ಭಾರತ ತಂಡ ಕೂಡಿಕೊಂಡರು. ಅದಕ್ಕೂ ಮೊದಲು ತಂಡದಲ್ಲಿ ಅಂತಹ ವೇಗದ ಬೌಲರ್ ಇರಲಿಲ್ಲ. ಇದರ ಜತೆಗೆ ಕಪಿಲ್ ದೇವ್ ಬೌಲಿಂಗ್‌ನಲ್ಲಿ ಸ್ವಿಂಗ್ ಕೂಡಾ ಮಾಡುತ್ತಿದ್ದರು.ಕಪಿಲ್ ಹರ್ಯಾಣ ಮೂಲದವರಾಗಿದ್ದರಿಂದ ಅವರನ್ನು 'ಹರ್ಯಾಣ ಹರಿಕೇನ್' ಎನ್ನುವ ನಿಕ್‌ ನೇಮ್‌ನಿಂದ ಕರೆಯಲಾಗುತ್ತಿತ್ತು.

47
4. ಕಪಿಲ್‌ ದೇವ್‌ಗಿದೆ ಪಾಕಿಸ್ತಾನದ ಕನೆಕ್ಷನ್:

ಕಪಿಲ್ ದೇವ್ ಅವರ ಪೋಷಕರು ಮೊದಲು ರಾವಲ್ಪಿಂಡಿಯಲ್ಲಿದ್ದರು. ಭಾರತ-ಪಾಕಿಸ್ತಾನ ವಿಭಜನೆಯಾದ ಬಳಿಕ ಅವರ ಪೂರ್ವಜರು ಚಂಡಿಗಢಕ್ಕೆ ಬಂದು ನೆಲೆಸಿದರು.

57
5. ಫಿಟ್ನೆಸ್‌ಗೆ ಕಪಿಲ್ ರೋಲ್ ಮಾಡೆಲ್:

ಇನ್ನು ಕಪಿಲ್ ದೇವ್ ತಮ್ಮ ಫಿಟ್ನೆಸ್‌ಗೆ ರೋಲ್ ಮಾಡೆಲ್ ಅಂದ್ರೆ ಅತಿಶಯೋಕ್ತಿಯಲ್ಲ. ಅವರು 1978ರಿಂದ 1994ರ ವರೆಗೆ 131 ಟೆಸ್ಟ್ ಪಂದ್ಯಗಳನ್ನಾಡಿದ್ದು, ಗಾಯದ ಸಮಸ್ಯೆಯಿಂದ ಒಂದೇ ಒಂದು ಪಂದ್ಯವನ್ನು ಮಿಸ್ ಮಾಡಿಕೊಂಡಿಲ್ಲ.

67
6. ಅಂಡರ್‌ವರ್ಲ್ಡ್‌ ಡಾನ್‌ಗೆ ವಾರ್ನಿಂಗ್ ಕೊಟ್ಟಿದ್ದ ಕಪಿಲ್ ದೇವ್:

ಒಮ್ಮೆ ಕಪಿಲ್ ದೇವ್ ಅಂಡರ್‌ ವಲ್ಡ್‌ ಡಾನ್ ದಾವೂದ್ ಇಬ್ರಾಹಿಂಗೆ ಭಾರತ ಡ್ರೆಸ್ಸಿಂಗ್ ರೂಮ್‌ನಿಂದ ಹೊರಹೋಗುವಂತೆ ವಾರ್ನಿಂಗ್ ನೀಡಿದ್ದರು ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ.

77
7. ಕಪಿಲ್ ದೇವ್ ವೈಯುಕ್ತಿಕ ಜೀವನ:

ಕಪಿಲ್ ದೇವ್ ರೂಮಿ ಭಾಟಿಯಾ ಅವರನ್ನು ಮದುವೆಯಾಗಿದ್ದಾರೆ. 1979ರಲ್ಲಿ ಕಾಮನ್ ಫ್ರೆಂಡ್ ಮೂಲಕ ಪರಿಚಯವಾದ ಈ ಜೋಡಿ 1980ರಲ್ಲಿ ಲವ್ ಪ್ರಪೋಸ್ ಮಾಡಿ ಅದೇ ವರ್ಷ ಮದುವೆಯಾದರು. ಇದಾಗಿ ಹದಿನಾರು ವರ್ಷಗಳ ಬಳಿಕ 1996ರಲ್ಲಿ ಅವರಿಗೆ ಅಮಿಯಾ ಎನ್ನುವ ಮುದ್ದಾದ ಹೆಣ್ಣು ಮಗುವಿಗೆ ಪೋಷಕರಾದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories